Film News

ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಆಲಿಯಾ, ಕ್ಯೂಟ್ ಮಗುವಿನ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ ಮಾಡಿದ ಫ್ಯಾನ್ಸ್…..!

ಬಾಲಿವುಡ್ ಕ್ಯೂಟ್ ಜೋಡಿ ರಣ್ಬೀರ್‍ ಕಪೂರ್‍ ಹಾಗೂ ಆಲಿಯಾ ರವರ ಮುದ್ದಿನ ಮಗಳ ಮುಖವನ್ನು ಮೊದಲ ಬಾರಿಗೆ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ತೋರಿಸಿದ್ದಾರೆ. ಕಳೆದ 2022 ರಲ್ಲಿ ಮದುವೆಯಾದ ಈ ಜೋಡಿ ತುಂಬಾನೆ ಸುದ್ದಿಯಾದರು. ಆಲಿಯಾ ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದರು. ಈ ಕಾರಣದಿಂದ ಆತುರವಾಗಿ ಅವರ ಮದುವೆ ನಡೆಯಿತು ಎಂಬ ಸುದ್ದಿ ಸಹ ಕೇಳಿಬಂದಿತ್ತು. ಇನ್ನೂ ಈ ಜೋಡಿಯ ಮುದ್ದಿನ ಮಗಳ ಮುಖವನ್ನು ಮೊದಲ ಬಾರಿಗೆ ತೋರಿಸಿದ್ದು, ಅಭಿಮಾನಿಗಳು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸ್ಟಾರ್‍ ನಟ ರಣ್ಬೀರ್‍ ಕಪೂರ್‍ ಹಾಗೂ ಆಲಿಯಾ ಭಟ್ ಪ್ರೀತಿಸಿ ಮದುವೆಯಾದರು. ಮುಂಬೈನಲ್ಲಿ 2022 ಏಪ್ರಿಲ್ 14 ರಂದು ಅದ್ದೂರಿಯಾಗಿ ಈ ಜೋಡಿಯ ಮದುವೆ ನೆರವೇರಿತ್ತು. ಮದುವೆಗೆ ಅನೇಕ ಸೆಲೆಬ್ರೆಟಿಗಳು ಭೇಟಿ ನೀಡಿ ವಧುವರರನ್ನು ಶುಭಾಷಯ ಕೋರಿದ್ದರು. ಇನ್ನೂ ಅದೇ ವರ್ಷದಲ್ಲಿ ಅಂದರೇ ನವೆಂಬರ್‍ ಮಾಹೆಯಲ್ಲಿ ಆಲಿಯಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಮದುವೆಯಾದ ಕೆಲವೇ ಎರಡು ತಿಂಗಳು ಕಳೆಯುವುದಕ್ಕೂ ಮುಂಚೆಯೇ ಆಲಿಯಾ ಗರ್ಭಿಣಿಯಾಗಿದ್ದೆನೆಂದು ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿದ್ದರು. ಈ ಕಾರಣದಿಂದ ಆಲಿಯಾ ಬಗ್ಗೆ ಅನೇಕ ಟ್ರೋಲ್ ಗಳೂ ಸಹ ಬಂದಿತ್ತು. ಮದುವೆಗೂ ಮುಂಚೆಯೇ ಆಲಿಯಾ ಗರ್ಭಿಣಿಯಾಗಿದ್ದಾರೆ. ಆ ಕಾರಣದಿಂದಲೇ ಬೇಗ ಮದುವೆ ನಡೆಯಿತು ಎಂಬ ಮಾತುಗಳೂ ಸಹ ಕೇಳಿಬಂದವು.

ಇನ್ನೂ ಆಲಿಯಾ ತಮ್ಮ ಮಗುವಿಗೆ ರಾಹಾ ಕಪೂರ್‍ ಎಂದು ನಾಮಕರಣ ಮಾಡಿದ್ದರು. ಆಲಿಯಾ ಹುಟ್ಟಿದಾಗಿನಿಂದ ಮಿಡಿಯಾಗೆ ರಾಹಾ ಮುಖ ಕಾಣಿಸಿದಂತೆ ಎಚ್ಚರಿಕೆ ತೆಗೆದುಕೊಂಡಿದ್ದರು. ಆದರೆ ಮೊದಲ ಬಾರಿಗೆ ಆಲಿಯಾ ರಣ್ಬೀರ್‍ ಪುತ್ರಿ ರಾಹಾ ಮುಖವನ್ನು ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ತೋರಿಸಿದ್ದಾರೆ. ಕ್ರಿಸ್ ಮಸ್ ಹಬ್ಬದ ಅಂಗವಾಗಿ ಮಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳು ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗಿದೆ. ನೆಟ್ಟಿಗರು ರಾಹಾ ಸೋ ಕ್ಯೂಟ್ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ. ಅದರಲ್ಲೂ ಕೆಲವರು ಇಂಟ್ರಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ರಾಹಾ ಅಕ್ಷರಶಃ ರಣ್ಬೀರ್‍ ಕಪೂರ್‍ ತಂದೆ ರಿಷಿ ಕಪೂರ್‍ ರವರಂತೆ ಕಾಣುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೂ ರಣ್ಬೀರ್‍ ಕಪೂರ್‍ ಕೊನೆಯದಾಗಿ ಯಾನಿಮಲ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ಮದುವೆ ಹಾಗೂ ತಾಯಿಯಾದ ಕಾರಣದಿಂದ ಆಲಿಯಾ ಸಿನೆಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಆಲಿಯಾ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಆಲಿಯಾ ಜಿಗ್ರ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top