ಪತಿಯೊಂದಿಗೆ ಸಮಸ್ಯೆಗಳ ಬಗ್ಗೆ ಒಪೆನ್ ಆದ ಸಿಂಗರ್ ಕೌಸಲ್ಯ, ಎರಡನೇ ಮದುವೆಯ ಬಗ್ಗೆ ಪ್ರಸ್ತಾಪ….!

Follow Us :

ಸಿನಿರಂಗದ ಸೆಲೆಬ್ರೆಟಿಗಳು ತೆರೆಯ ಮೇಲೆ ಎಷ್ಟು ಸಂತೋಷ ವಾಗಿರುತ್ತಾರೋ, ಪ್ರೇಕ್ಷಕರನ್ನು ರಂಜಿಸುತ್ತಾರೋ ಅದೇ ರೀತಿ ಅವರ ವೈಯುಕ್ತಿಕ ಜೀವನದಲ್ಲೂ ಅನೇಕ ಸಮಸ್ಯೆಗಳನ್ನು, ನೋವುಗಳನ್ನು ಸಹ ಹೊಂದಿರುತ್ತಾರೆ. ಕೆಲವೊಂದು ಸಮಯದಲ್ಲಿ ಎಲ್ಲವೂ ಹೊರಬರುತ್ತಿರುತ್ತದೆ. ಪ್ಲೇ ಬ್ಯಾಕ್ ಸಿಂಗರ್‍ ಆಗಿ ಫೇಂ ಪಡೆದುಕೊಂಡ ಸಿಂಗರ್‍ ಕೌಸಲ್ಯ ಸಹ ತನ್ನ ವೈಯುಕ್ತಿಕ ಜೀವನದಲ್ಲಿ ತುಂಬಾನೆ ಸಮಸ್ಯೆಗಳನ್ನು ಎದುರಿಸಿದ್ದಾರಂತೆ. ತನ್ನ ಪತಿ ನೀಡಿದ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಜೊತೆಗೆ ಎರಡನೇ ಮದುವೆಯ ಪ್ರಸ್ತಾಪವನ್ನು ಸಹ ತಿಳಿಸಿದ್ದಾರೆ.

ಸಿಂಗರ್‍ ಕೌಸಲ್ಯ ಅನೇಕ ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡರು. ಅದರಲ್ಲೂ ತೆಲುಗು ಹಾಡುಗಳ ಮೂಲಕ ವಿಶೇಷವಾಗಿ ತೆಲುಗು ಅಭಿಮಾನಿಗಳನ್ನು ಪಡೆದುಕೊಂಡರು. ಆದರೆ ಇತ್ತಿಚಿಗೆ ಆಕೆ ಆಕ್ಟೀವ್ ಆಗಿ ಕಾಣಿಸಿಕೊಂಡಿರಲಿಲ್ಲ. ಇನ್ನೂ ವೈಯುಕ್ತಿಕ ಕಾರಣಗಳು ಹಾಗೂ ವೈಯುಕ್ತಿಕ ಜೀವನದಲ್ಲಿನ ಸ್ಟ್ರಗಲ್ ಗಳ ಕಾರಣದಿಂದ ಆಕೆ ಹಾಡುವುದನ್ನು ಕಡಿಮೆ ಮಾಡಿದ್ದಾರೆ. ಆದರೆ ಇತ್ತಿಚಿಗೆ ಆಕೆ ಮತ್ತೆ ಆಕ್ಟೀವ್ ಆಗಿದ್ದು, ಆಕೆ ತನ್ನ ಪತಿಯೊಂದಿಗೆ ಎದುರಿಸಿದ ಸಮಸ್ಯೆಗಳನ್ನು ಆಕೆ ಹೇಳಿಕೊಂಡಿದ್ದಾರೆ. ಇತ್ತಿಚಿಗೆ ನಡೆದ ಸಂದರ್ಶನದಲ್ಲಿ ಆಕೆ ತನ್ನ ವೈಯುಕ್ತಿಕ ಸಮಸ್ಯೆಗಳ ಬಗ್ಗೆ ರಿಯಾಕ್ಟ್ ಆಗಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಅವರು ತಮ್ಮ ವೈವಾಹಿಕ ಜೀವನದ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮದುವೆಯಾದ ಬಳಿಕ ಆಕೆಯ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾಗಿ, ತನ್ನ ಮಕ್ಕಳಿಗಾಗಿ ತನ್ನಲ್ಲೇ ಆ ನೋವನ್ನೆಲ್ಲಾ ಅಡಗಿಸಿಟ್ಟುಕೊಂಡಿದ್ದರಂತೆ. ತನ್ನ ಮಗ ಚಿಕ್ಕವನಾದ ಕಾರಣದಿಂದ ಎಲ್ಲವನ್ನೂ ಮನಸ್ಸಿನೊಳಗೆ ಇಟ್ಟುಕೊಂಡು ನೋವನ್ನು ಅನುಭವಿಸಿದ್ದರಂತೆ. ಆದರೂ ನೋವು ಹೆಚ್ಚಾದಾಗ ತನ್ನ ತಂಗಿ, ತಾಯಿಯೊಂದಿಗೆ ಹಂಚಿಕೊಳ್ಳುತ್ತಿದ್ದರಂತೆ. ಕೌಸಲ್ಯ ತನ್ನ ತಾಯಿಯ ಬಳಿ ಎಲ್ಲಾ ವಿಚಾರವನ್ನು ಹೇಳಿಕೊಳ್ಳುತ್ತಿದ್ದರಂತೆ. ತನ್ನ ಪತಿ ಬೇರೆ ಮದುವೆ ಆಗಬೇಕು ಎಂದುಕೊಳ್ಳುವರೆಗೂ ತಡೆದುಕೊಂಡು ಎಲ್ಲವನ್ನೂ ಸಹಿಸಿಕೊಂಡೆ. ಆದರೆ ಕೊನೆಯದಾಗಿ ಆತ ಬೇರೆ ಮದುವೆಯಾಗಿ ಬೇರೆಯಾದರು ಎಂದು ತನ್ನಲ್ಲಿನ ನೋವನ್ನು ಹಂಚಿಕೊಂಡಿದ್ದಾರೆ.

ಸದ್ಯ ಕೌಸಲ್ಯ ತನ್ನ ಮಗನೊಂದಿಗೆ ಸಂತೋಷದಿಂದ ಇದ್ದಾರಂತೆ. ಆದರೆ ಇದೀಗ ಆಕೆಗೆ ಮತ್ತೊಂದು ಸಮಸ್ಯೆ ಉದ್ಬವಿಸಿದೆಯಂತೆ. ಇದೀಗ ತನ್ನನ್ನು ಮತ್ತೆ ಮದುವೆಯಾಗು ಎಂದು ತನ್ನ ಮಗನೇ ಒತ್ತಾಯಿಸುತ್ತಿದ್ದಾನಂತೆ. ನನ್ನ ಜೀವನದಲ್ಲಿ ಸಂತೋಷ ನೋಡಲು ನನ್ನ ಮಗನಿಗೆ ಆಸೆ ಆ ಕಾರಣದಿಂದಲೇ ಮತ್ತೆ ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದಾನೆ. ಸದ್ಯ ಕೌಸಲ್ಯ ತನ್ನ ಜೀವನದಲ್ಲಾದ ಅನೇಕ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ.