ಮಲಯಾಳಂ ಸ್ಟಾರ್ ಮೋಹನ್ ಲಾಲ್ ರನ್ನು ಭೇಟಿಯಾದ ರಿಷಭ್, ಕಾಂತಾರ-2 ರಲ್ಲಿ ನಟಿಸಲಿದ್ದಾರಾ ಮೋಹನ್ ಲಾಲ್?

Follow Us :

ಕನ್ನಡದ ಸ್ಟಾರ್‍ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ಸಿನೆಮಾದ ಮೂಲಕ ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಕ್ರೇಜ್ ಪಡೆದುಕೊಂಡರು. ಕಡಿಮೆ ಬಜೆಟ್ ನಲ್ಲಿ ತಯಾರಾದ ಕಾಂತಾರ ಸಿನೆಮಾ ಭಾರಿ ಸಕ್ಸಸ್ ಕಂಡಿತ್ತು. ಜೊತೆಗೆ ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಈ ಸಿನೆಮಾ ಸಕ್ಸಸ್ ಕಂಡುಕೊಂಡಿತ್ತು. ಇದೀಗ ಕಾಂತಾರ ಪ್ರೀಕ್ವೇಲ್ ಘೋಷಣೆ ಮಾಡಿದ್ದು, ಈ ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿದೆ. ಇದೀಗ ರಿಷಭ್ ಶೆಟ್ಟಿ ಮಲಯಾಳಂ ಸ್ಟಾರ್‍ ನಟ ಮೋಹನ್ ಲಾಲ್ ರವರನ್ನು ಭೇಟಿ ಮಾಡಿದ್ದ ಹಿನ್ನೆಲೆಯಲ್ಲಿ ಮೋಹನ್ ಲಾಲ್ ರವರೂ ಈ ಸಿನೆಮಾದಲ್ಲಿ ನಟಿಸುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಕನ್ನಡದ ಸಿನೆಮಾ ಕಾಂತಾರ ಬಿಡುಗಡೆಯಾದ ಕಲವೇ ದಿನಗಳಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದೆ. ಇಡೀ ದೇಶದಾದ್ಯಂತ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ಜೊತೆಗೆ ಬಾಕ್ಸ್ ಆಫೀಸ್ ನಲ್ಲೂ ಸಹ ಭರ್ಜರಿಯಾಗಿ ಕಲೆಕ್ಷನ್ ಮಾಡಿದೆ. ಇನ್ನೂ ಸಿನಿರಂಗದ ಅನೇಕ ಸ್ಟಾರ್‍ ಗಳು ಈ ಸಿನೆಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಹಾದಿಯಲ್ಲೇ ಕಾಲಿವುಡ್ ಸೂಪರ್‍ ಸ್ಟಾರ್‍ ರಜನಿಕಾಂತ್ ಸಹ ಕಾಂತಾರ ಸಿನೆಮಾ ನೋಡಿ ಫೀದಾ ಆಗಿದ್ದು, ರಿಷಭ್ ರನ್ನು ಮನೆಗೆ ಕರೆಸಿಕೊಂಡು ಮನಸಾರೆ ಪ್ರಶಂಸೆ ಮಾಡಿದ್ದರು. ದಕ್ಷಿಣ ಕನ್ನಡದ ಸಂಸ್ಕೃತಿಯ ಭಾಗವಾದ ಭೂತಕೊಲ ಕಥೆಯನ್ನು ಆಧರಿಸಿ ಈ ಸಿನೆಮಾ ತೆರೆಕಂಡಿದ್ದು, ಅತ್ಯಂತ ಯಶಸ್ವಿಯಾಗಿತ್ತು. ಡಿವೋಷನಲ್ ಆಕ್ಷನ್ ಸಿನೆಮಾ ಆಗಿ ತೆರೆಗೆ ಬಂದ ಈ ಸಿನೆಮಾ ರಿಲೀಸ್ ಆದಂತಹ ಎಲ್ಲಾ ಭಾಷೆಗಳಲ್ಲೂ ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ಮೂಲಗಳ ಪ್ರಕಾರ ಬರೊಬ್ಬರಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೀಗ ಕಾಂತಾರ ಚಾಪ್ಟರ್‍-1 ಘೋಷಣೆಯಾಗಿದ್ದು, ಸಿದ್ದತೆಗಳು ಭರದಿಂದ ಸಾಗುತ್ತಿವೆ.

ಸದ್ಯ ಕಾಂತಾರ ಚಾಪ್ಟರ್‍-1 ಸಿನೆಮಾಗಾಗಿ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿದ್ದು, ಸದ್ಯ ಪಾತ್ರಗಳ ಆಯ್ಕೆಯಲ್ಲಿ ರಿಷಭ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ಈ ಸಮಯದಲ್ಲೇ ರಿಷಭ್ ಶೆಟ್ಟಿ ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ರವರನ್ನು ಭೇಟಿಯಾಗಿದ್ದಾರೆ. ಈ ಸಂಬಂಧ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಮೋಹನ್ ಲಾಲ್ ರವರನ್ನು ಭೇಟಿಯಾಗಿದ್ದ ಕಾರಣದಿಂದ ಅವರನ್ನು ಕಾಂತಾರ-1 ಸಿನೆಮಾದಲ್ಲಿ ನಟಿಸಲು ಆಹ್ವಾನ ನೀಡಿದ್ದಾರೆಯೇ ಎಂಬ ಅನುಮಾನ ಹಾಗೂ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಕೆಲವು ದಿನಗಳ ಹಿಂದೆಯಷ್ಟೆ ಕಾಂತಾರ ಪ್ರೀಕ್ವೆಲ್ ನಲ್ಲಿ ಯಂಗ್ ಟೈಗರ್‍ ಜೂನಿಯರ್‍ ಎನ್.ಟಿ.ಆರ್‍ ರವರೂ ಸಹ ನಟಿಸಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬಂದಿತ್ತು. ಇದೀಗ ಮೋಹನ್ ಲಾಲ್ ರವರ ಬಗ್ಗೆ ಸುದ್ದಿ ಕೇಳಿಬರುತ್ತಿದ್ದು, ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಅಪ್ಡೇಟ್ ನೀಡಿದ ಬಳಿಕ ಸತ್ಯಾಂಶ ಹೊರಬರಲಿದೆ ಎನ್ನಲಾಗಿದೆ.

ಕಾಂತಾರ ಸಿನೆಮಾದ ಕಥೆ ನಡೆಯುವುದಕ್ಕೂ ಮುಂಚೆ ಏನಾಗಿತ್ತು ಎಂಬುದನ್ನು ಕಾಂತಾರ ಚಾಪ್ಟರ್‍-1 ರಲ್ಲಿ ತೋರಿಸಲಾಗುತ್ತದೆ ಎಂದು ಹೇಳಲಾಗಿದೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಸಿನೆಮಾದ ಪೋಸ್ಟರ್‍ ರಿಲೀಸ್ ಆಗಿದ್ದು ಭಾರಿ ಸದ್ದು ಮಾಡಿದೆ. ಈ ಸಿನೆಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಸೇರಿದಂತೆ ಇಂಗ್ಲೀಷ್ ಭಾಷೆಯಲ್ಲಿ ಸಿನೆಮಾ ತೆರೆಕಾಣಲಿದೆ.