ಸ್ಲಿಮ್ ಲುಕ್ಸ್ ನಲ್ಲಿ ಕಾಣಿಸಿಕೊಂಡ ರೆಬೆಲ್ ಸ್ಟಾರ್ ಪ್ರಭಾಸ್, ಆ ಸಿನೆಮಾಗಾಗಿ ತೂಕ ಕಡಿಮೆ ಮಾಡಿಕೊಂಡ್ರಾ?

ಟಾಲಿವುಡ್ ಸ್ಟಾರ್‍ ನಟ ಪ್ರಭಾಸ್ ಬಾಹುಬಲಿ ಸಿನೆಮಾದ ಮೂಲಕ ಇಡೀ ವಿಶ್ವದಾದ್ಯಂತ ಕ್ರೇಜ್ ಪಡೆದುಕೊಂಡು ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಒಂದೇ ಸಮಯದಲ್ಲಿ ಎರಡು ಸಿನೆಮಾಗಳಲ್ಲಿ ನಟಿಸಬಲ್ಲ ಕಲೆ ಹೊಂದಿದ ನಟರಲ್ಲಿ ಪ್ರಭಾಸ್ ಒಬ್ಬರು ಎನ್ನಬಹುದು. ಕೆಲವೊಮ್ಮೆ ಮೂರು ಸಿನೆಮಾಗಳಲ್ಲಿ ನಟಿಸೋಕೆ ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ. ಕೊನೆಯದಾಗಿ ಸಲಾರ್‍-1 ಪ್ಯಾನ್ ಇಂಡಿಯಾ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದ ರೆಬೆಲ್ ಸ್ಟಾರ್‍ ಪ್ರಭಾಸ್ ಇದೀಗ ತಮ್ಮ ಮುಂದಿನ ಸಿನೆಮಾಗಾಗಿ ಸ್ಲಿಮ್ ಆಗಿದ್ದಾರೆ. ಆ ಸಿನೆಮಾಗಾಗಿ 10 ಕೆಜಿ ತೂಕ ಕಡಿಮೆಯಾಗಿದ್ದಾರೆ ಎಂದು ಹೇಳಲಾಗಿದೆ.

ಸುಮಾರು 20 ವರ್ಷಗಳಿಂದ ಸಿನಿರಂಗದಲ್ಲಿ ಆಕ್ಟೀವ್ ಆಗಿರುವಂತಹ ಪ್ರಭಾಸ್ ನಟಿಸಿದ್ದು ಕೇವಲ 21 ಸಿನೆಮಾಗಳಲ್ಲಿ ಮಾತ್ರ. ಇದೀಗ ಪ್ರಭಾಸ್ ಸಾಲು ಸಾಲು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಸಲಾರ್‍ ಸಿನೆಮಾದ ಮೂಲಕ ಭಾರಿ ಸಕ್ಸಸ್ ಪಡೆದುಕೊಂಡರು. ಶೀಘ್ರದಲ್ಲೇ ಪ್ರಭಾಸ್ ಪ್ಯಾನ್ ವರ್ಲ್ಡ್‌ ಸಿನೆಮಾ ಎಂದೇ ಕರೆಯಲಾಗುತ್ತಿರುವ ಕಲ್ಕಿ 2898ಎಡಿ ಸಿನೆಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ಸಿನೆಮಾ ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದು, ಪ್ರಬಾಸ್ ಜೊತೆಗೆ ಬಾಲಿವುಡ್ ಸ್ಟಾರ್‍ ನಟಿ ದೀಪಿಕಾ ಪಡುಕೊಣೆ ಜೋಡಿಯಾಗಿದ್ದಾರೆ. ಇದೀಗ ಪ್ರಭಾಸ್ ಸ್ಲಿಮ್ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಸದ್ಯ ಪ್ರಭಾಸ್ ಹುನು ರಾಘವಪೂಡಿ ನಿರ್ದೇಶನದಲ್ಲಿ ಒಂದು ಸಿನೆಮಾ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಲಾರ್‍-2 ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ಸಿನೆಮಾಗಳಲ್ಲಿ ಪ್ರಭಾಸ್ ಯಾವ ಸಿನೆಮಾಗಾಗಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ ಎಂಬುದು ಇನಷ್ಟೆ ತಿಳಿದುಬರಬೇಕಿದೆ. ಇನ್ನೂ ಪ್ರಭಾಸ್ ರವರ ರಾಜಾ ಸಾಭ್ ಸಿನೆಮಾದ ಫಸ್ಟ್ ಸಿಂಗಲ್ ಶೀಘ್ರದಲ್ಲೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಥಮನ್ ಈ ಸಿನೆಮಾಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ರಾಜಾಸಾಬ್ ಸಿನೆಮಾ ಪ್ರಭಾಸ್ ರವರ ರೇಂಜ್ ಏರಿಸುತ್ತದೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ಕಲ್ಕಿ ಸಿನೆಮಾ ರಿಲೀಸ್ ಸಹ ಶೀಘ್ರದಲ್ಲಿ ಆಗಲಿದೆ. ಇನ್ನೂ ಬಿಡುಗಡೆಯ ದಿನಾಂಕ ಸ್ಪಷ್ಟವಾಗಿ ಘೋಷಣೆಯಾಗದ ಕಾರಣದಿಂದ ಅಭಿಮಾನಿಗಳು ಈ ಕುರಿತು ಚಿತ್ರತಂಡ ಅಪ್ಡೇಟ್ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.

ಸದ್ಯ ಪ್ರಭಾಸ್ ರವರ ಸ್ಲಿಮ್ ಲುಕ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಪ್ರಭಾಸ್ ರವರ ಈ ಲುಕ್ ತುಂಬಾ ಬೆಸ್ಟ್ ಎಂದು ಹೊಗಳುತ್ತಿದ್ದಾರೆ. ಇನ್ನೂ ಪ್ರಭಾಸ್ ರವರ ಸಿನೆಮಾಗಳು ಆರು ತಿಂಗಳಿಗೊಂದು ಸಿನೆಮಾದಂತೆ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗಿದೆ.