ವಯಸ್ಸಾದರೂ ಯಂಗ್ ಬ್ಯೂಟಿಯಂತೆ ಪೋಸ್ ಕೊಟ್ಟ ಚಂದಮಾಮ, ಕಾಜಲ್ ಅಗರ್ವಾಲ್ ಸೌಂದರ್ಯಕ್ಕೆ ಫಿದಾ ಆದ ಫ್ಯಾನ್ಸ್……!

ಸೌತ್ ಸಿನಿರಂಗವನ್ನು ಸುಮಾರು ವರ್ಷಗಳ ಕಾಲ ಆಳಿದಂತಹ ನಟಿಯರಲ್ಲಿ ಕಾಜಲ್ ಅಗರ್ವಾಲ್ ಸಹ ಒಬ್ಬರಾಗಿದ್ದಾರೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಆಕೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಮದುವೆಯಾದರು. ಮದುವೆ, ಮಗು ಆದ ಬಳಿಕ ಆಕೆ ಇದೀಗ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಮದುವೆಯಾದರೂ ಸಹ ಆಕೆಯ ಸೌಂದರ್ಯ ಮಾತ್ರ ಕಡಿಮೆಯಾಗಿಲ್ಲ ಎಂದು ಹೇಳಬಹುದಾಗಿದೆ. ಸದ್ಯ ಆಕೆಯ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

2007 ರಲ್ಲಿ ತೆರೆಕಂಡ ಲಕ್ಷ್ಮೀ ಕಲ್ಯಾಣಂ ಎಂಬ ಸಿನೆಮಾದ ಮೂಲಕ ಎಂಟ್ರಿ ಕೊಟ್ಟ ನಟಿ ಕಾಜಲ್ ಅಗರ್ವಾಲ್ ಸೋಷಿಯಲ್ ಮಿಡಿಯಾದಲ್ಲಿ  ಪುಲ್ ಆಕ್ಟೀವ್ ಆಗಿರುತ್ತಾರೆ. ಮದುವೆ ಹಾಗೂ ಮಗು ಕಾರಣದಿಂದ ಸಿನೆಮಾಗಳಿಂದ ದೂರವೇ ಉಳಿದರೂ ಸಹ ಸೋಷಿಯಲ್ ಮಿಡಿಯಾದ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದರು. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಕುಟುಂಬ ನಿರ್ವಹಣೆಯ ಜೊತೆಗೆ ಸಿನೆಮಾಗಳಲ್ಲಿ ಸಹ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ಕಾಜಲ್ ಇದೀಗ ಲೇಟೆಸ್ಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನೂ ಸಹ ರಂಜಿಸಿದ್ದಾರೆ.

ಇನ್ನೂ ಕಾಜಲ್ ಸಿನೆಮಾಗಳ ಜೊತೆಗೆ ತಮ್ಮ ಅಭಿಮಾನಿಗಳನ್ನು ಸೋಷಿಯಲ್ ಮಿಡಿಯಾ ಮೂಲಕವೂ ಸಹ ರಂಜಿಸುತ್ತಿದ್ದಾರೆ. ತಮ್ಮ ಸಿನೆಮಾ ಅಪ್ಡೇಟ್ ಗಳ ಜೊತೆಗೆ ವೈಯುಕ್ತಿಕ ವಿಚಾರಗಳು, ತನ್ನ ಮಗನ ವಿಡಿಯೋ ಪೊಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಟಚ್ ನಲ್ಲಿರುತ್ತಾರೆ. ಇದೀಗ ಆಕೆ ಬ್ಲೂ ಕಲರ್‍ ಶರ್ಟ್‌ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಕಣ್ಣು ಕುಕ್ಕುವಂತಹ ಪೋಸ್ ಗಳ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆ ಲುಕ್ಸ್ ಗೆ ಫಿದಾ ಆಗದೇ ಇರಲು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ. ನಲವತ್ತರ ವಯಸ್ಸಾದರೂ ಸಹ ಆಕೆ ಯಂಗ್ ಬ್ಯೂಟಿಯರನ್ನೂ ನಾಚಿಸುವಂತಹ ಬೋಲ್ಡ್ ಲುಕ್ಸ್, ಹಾಟ್ ಪೋಸ್ ಗಳನ್ನು ಕೊಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಸದ್ಯ ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ.

ಇನ್ನೂ ಕಾಜಲ್ ಅಗರ್ವಾಲ್ ಸದ್ಯ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಭಾರಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಿದ್ದಾರೆ. ಶಂಕರ್‍ ಹಾಗೂ ಕಮಲ್ ಹಾಸನ್ ರವರ ಕಾಂಬಿನೇಷನ್ ನಲ್ಲಿ ತೆರೆಗೆ ಬರಲಿರುವ ಇಂಡಿಯನ್-2 ಸಿನೆಮಾದಲ್ಲಿ ಹಾಗೂ ಬಾಲಯ್ಯ – ಅನೀಲ್ ರಾವಿಪೂಡಿ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ ಭಗವಂತ್ ಕೇಸರಿ ಸಹ ಪ್ರಧಾನ ಪಾತ್ರದಲ್ಲಿ ಕಾಜಲ್ ನಟಿಸುತ್ತಿದ್ದಾರೆ. ಇದರ ಜೊತೆಗೆ ಸತ್ಯಭಾಮ ಎಂಬ ಲೇಡಿ ಓರಿಯೆಂಟೆಡ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಮತಷ್ಟು ಸಿನೆಮಾಗಳು ಚರ್ಚೆಯ ಹಂತದಲ್ಲಿವೆ ಎಂದು ಹೇಳಲಾಗಿದೆ.