News

ಪಾಕಿಸ್ತಾನದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹಿಂದೂ ಯುವತಿಯ ಮೇಲೆ ಮುಸ್ಲೀಂ ವೈದ್ಯನಿಂದ ಕ್ರೂರವಾಗಿ ಅತ್ಯಾಚಾರ…..!

ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ಸುರಕ್ಷತೆ ಕಡಿಮೆ ಎಂಬ ಚರ್ಚೆ ನಡೆಯುತ್ತಲೇ ಇರುತ್ತದೆ. ಇದೀಗ ಇದೇ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಿಡ್ನಿ ಸಮಸ್ಯೆಯಿಂದ ಪಾಕಿಸ್ತಾನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿಂದೂ ಯುವತಿಯ ಮೇಲೆ ಮುಸ್ಲೀಂ ವೈದ್ಯನಿಂದಲೇ ಕ್ರೂರವಾಗಿ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ. ಈ ಘಟನೆ ಮತ್ತೆ ಪಾಕಿಸ್ತಾನದ ಹಿಂದೂಗಳ ರಕ್ಷಣೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಪಾಕಿಸ್ತಾನದ ಸಿಂಧ್ ನ ಇಂಡಸ್ ಮೆಡಿಕಲ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಸೀಮಾ ಸುಮ್ರೋ ಎಂಬ ಹಿಂದೂ ಸಂತ್ರಸ್ತೆ ಯುವತಿ ದಾಖಲಾಗಿದ್ದರು. ಕಿಡ್ನಿಗೆ ಸಂಬಂಧಿಸಿದ ಅನಾರೋಗ್ಯದಿಂದ ಆಕೆ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಸಿಂಧ್ ನ ತಾಂಡೋ ಮೊಹಮ್ಮದ್ ಖಾನ್ ಸಿಟಿಯಿಂದ ಬಂದಿದ್ದ ಕುಟುಂಬ ಮಗಳನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಅದೇ ಆಸ್ಪತ್ರೆಯ ಮತಾಂಧ ಹಾಗೂ ತೀವ್ರಗಾಮಿ ಇಸ್ಲಾಮಿಸ್ಟ್ ವೈದ್ಯನೋರ್ವ ಚಿಕಿತ್ಸೆ ನೀಡುವ ನೆಪದಲ್ಲಿ ಸಂತ್ರಸ್ತೆ ಬಾಲಕಿಗೆ ಡ್ರಗ್ಸ್ ನೀಡಿ ಬಳಿಕ ಆಕೆ ಪ್ರಜ್ಞೆ ತಪ್ಪಿದ ಬಳಿಕ ಕ್ರೂರವಾಗಿ ಅತ್ಯಾಚಾರ ಮಾಡಿದ್ದಾನೆ.

ಇನ್ನೂ ಬಡ ಹಿಂದೂ ಸಂತ್ರಸ್ತೆಯ ದೈಹಿಕ ಆರೋಗ್ಯ ಸ್ಥಿತಿ ಹದೆಗಟ್ಟಿದ್ದು, ಯುವತಿ ಮೇಲೆ ಅತ್ಯಾಚಾರ ನಡೆದ ಘಟನೆ ಬಯಲಾಗಿದೆ. ಕೂಡಲೇ ದುಷ್ಕರ್ಮಿ ವೈದ್ಯ ಹಾಗೂ ಆತನ ಸಹಚರರು ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ಈ ಹೃದಯ ವಿದ್ರಾವಕ ಘಟನೆಯಿಂದ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂ ಯುವತಿಯರು ಎಂತಹ ದುಸ್ಥಿತಿಯಲ್ಲಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ. ಪಾಕಿಸ್ತಾನದಲ್ಲಿನ ಧಾರ್ಮಿಕ ಉಗ್ರಗಾಮಿಗಳ ಮೊದಲ ಟಾರ್ಗೆಟ್ ಅಪ್ತಾಪ್ತ ಹಿಂದೂ ಯುವತಿಯರು ಆಗುತ್ತಿದ್ದಾರೆ. ಅದರಲ್ಲೂ ಅಂತಹ ಘಟನೆಗಳು ಸಿಂಧ್ ಪ್ರಾಂತ್ಯದಲ್ಲೇ ಹೆಚ್ಚಾಗಿ ನಡೆಯುತ್ತಿವೆ. ಹಿಂದೂ ಯುವತಿಯರನ್ನು ಅಪಹರಣ, ಅತ್ಯಾಚಾರ ಮಾಡಿ ಬಲವಂತವಾಗಿ ಮತಾಂತರ ಸಹ ಮಾಡುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

Most Popular

To Top