Film News

ಕೊಳದಲ್ಲಿ ಜಳಕ ಆಡುತ್ತಾ ನೆವರ್ ಬಿಪೋರ್ ಎಂಬಂತೆ ಪೋಸ್ ಕೊಟ್ಟ ಡಸ್ಕಿ ಬ್ಯೂಟಿ ಅಮಲಾಪಾಲ್, ಪೊಟೋಸ್ ವೈರಲ್…!

ನಟಿ ಅಮಲಾ ಪಾಲ್ ಸಿನೆಮಾಗಳಲ್ಲಿ ಬೋಲ್ಡ್ ಆಗಿ ನಟಿಸುವ ವಿಭಿನ್ನ ರೀತಿಯ ಫೇಮ್ ಪಡೆದುಕೊಂಡಿದ್ದಾರೆ. ಅದರಲ್ಲೂ ಆಕೆ ನ್ಯೂಡ್ ಸಿನೆಮಾದಲ್ಲೂ ಸಹ ನಟಿಸಿ ಅನೇಕ ವಿಮರ್ಶೆಗಳಿಗೆ ತುತ್ತಾಗಿದ್ದರು. ಇದೀಗ ಆಕೆ ಗ್ಲಾಮರ್‍ ರೋಲ್ಸ್ ಪಕ್ಕಕ್ಕಿಟ್ಟು ಕಥೆಗೆ ಪ್ರಾಧಾನ್ಯತೆ ಇರುವಂತಹ ಸಿನೆಮಾಗಳಲ್ಲಿ ನಟಿಸುತ್ತಾ ಕ್ರೇಜಿ ನಟಿಯಾಗಿದ್ದಾರೆ. ಸದ್ಯ ಅಮಲಾ ಪಾಲ್ ಆಧ್ಯಾತ್ಮಿಕತೆಯಲ್ಲಿದ್ದಾರೆ. ಇತ್ತೀಚಿಗೆ ಆಕೆ ಹಿಂದೂ ದೇವಾಲಯದಲ್ಲಿ ಭಕ್ತಿಪರವಶರಾಗಿದ್ದಾರೆ. ಅಲ್ಲಿನ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ನಟಿ ಅಮಲಾಪಾಲ್ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಿಕೊಳ್ಳಲು ಇಂಡೋನೇಷಿಯಾದ ಬಾಲಿಗೆ ತೆರಳಿದ್ದಾರೆ. ಇಂಡೋನೇಷಿಯಾದ ಬಾಲಿಯಲ್ಲಿನ  ಹಿಂದೂ ದೇವಾಲಯದಲ್ಲಿ ಶಿವರಾತ್ರಿ ಹಬ್ಬವನ್ನು ಆಚರಿಸಿದ್ದಾರೆ. ಇನ್ನೂ ದೇವಾಲಯದಲ್ಲಿರುವ ಕೊಳದಲ್ಲಿ ಸ್ನಾನ ಮಾಡುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಪೊಟೊಗಳನ್ನು ಆಕೆ ತನ್ನ ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ ಅಮಲಾಪಾಲ್. ಕೊಳದಲ್ಲಿ ಜಳಕ ಆಡುತ್ತಾ ಪೋಸ್ ಕೊಟ್ಟಿದ್ದು, ಯುವಕರನ್ನು ಮಂತ್ರಮುಗ್ದರನ್ನಾಗಿ ಮಾಡಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟ ವೈರಲ್ ಆಗುತ್ತಿದೆ. ಇನ್ನೂ ಅಭಿಮಾನಿಗಳೂ ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಅಮಲಾಪಾಲ್ ಈ ಪೊಟೋಗಲ ಜತೆಗೆ ಇಂಟ್ರಸ್ಟಿಂಗ್ ನೋಟ್ ಒಂದನ್ನು ಸಹ ಹಂಚಿಕೊಂಡಿದ್ದಾರೆ. ನಾನು ಬದಲಾಯಿಸಲಾಗದಂತಹವನ್ನು ಅಂಗೀಕರಿಸಲು ನನಗೆ ಈ ನೀರಿನ ಮೂಲಕ ಶಕ್ತಿ ನೀಡಿ, ನಾನು ಮಾಡಲು ಸಾಧ್ಯವಾಗಿರುವಂತಹವುದಕ್ಕೆ ಬೇಕಾಗುವಂತಹ ಶಕ್ತಿ ಧೈರ್ಯ ಬೇಕಿದೆ ಎಂದು ಪೊಟೋಗಳಿಗೆ ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಅಮಲಾಪಾಲ್ ಕ್ರಿಶ್ಚಿಯನ್ ಆಗಿದ್ದಾರೆ. ಆದರೂ ಸಹ ಹಿಂದೂ ದೇವಾಲಯಗಳನ್ನು ಸಂದರ್ಶನ ಮಾಡುತ್ತಿರುವುದು ಹಾಗೂ ಹಿಂದೂ ದೇವರನ್ನು ಗೌರವದಿಂದ ನೋಡುತ್ತಿರುವುದು ಅನೇಕರ ಮೆಚ್ಚುಗೆಗೆ ಕಾರಣವಾಗಿದೆ. ಸದ್ಯ ಇಂಡೋನೇಷಿಯದ ವೇಕೇಷನ್ ನಲ್ಲಿದ್ದಾರೆ ಅಮಲಾಪಾಲ್, ಅಲ್ಲಿನ ಪ್ರತಿಯೊಂದು ಸುಮಧುರ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ನಟಿ ಅಮಲಾಪಾಲ್ ಇತ್ತೀಚಿಗೆ ವಿಭಿನ್ನವಾದ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ನ್ಯೂಡ್ ಸಿನೆಮಾದಲ್ಲೂ ನಟಿಸಿದ ಅಮಲಾಪಾಲ್ ಇದೀಗ ನಟನೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಆಕೆ ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಬಾಲಿವುಡ್ ನಲ್ಲೂ ಸಹ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ.

Most Popular

To Top