Film News

ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ ಅಂಜಲಿ, ಆಕೆ ಮದುವೆಯಾಗಲಿರುವ ವರ ಅವರೇನಾ?

ಸೌತ್ ನಲ್ಲಿ ಹೆಚ್ಚು ಕ್ರೇಜ್ ಪಡೆದುಕೊಂಡ ನಟಿ ಅಂಜಲಿ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿದ್ದರು. ಇತ್ತಿಚಿಗೆ ಸ್ಪೇಷಲ್ ಸಾಂಗ್ ಗಳಲ್ಲೂ ಸಹ ನಟಿಸುವ ಮೂಲಕ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ನಟ ಜೈ ಜೊತೆಗೆ ಪ್ರೀತಿಯಲ್ಲಿದ್ದಾರೆ. ಅವರಿಬ್ಬರೂ ಶೀಘ್ರದಲ್ಲೇ ಮದುವೆ ಸಹ ಆಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ನಲ್ಲಿ ಜೋರಾಗಿಯೇ ಹರಿದಾಡಿತ್ತು. ಸುಮಾರು ದಿನಗಳ ಬಳಿಕ ಮತ್ತೆ ಅಂಜಲಿ ಮದುವೆಯ ಬಗ್ಗೆ ಸುದ್ದಿಯೊಂದು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ನಟಿ ಅಂಜಲಿ ಈ ಹಿಂದೆ ತಮಿಳು ನಟ ಜೈ ಜೊತೆಗೆ ಅಫೈರ್‍ ನಡೆಸುತ್ತಿದ್ದರು ಎಂದು ರೂಮರ್‍ ಗಳು ಹರಿದಾಡಿದ್ದವು. ಇಬ್ಬರೂ ಲಿವಿಂಗ್ ರಿಲೇಷನ್ ಶಿಪ್ ನಲ್ಲೂ ಸಹ ಅನೇಕ ತಿಂಗಳು ಗಳ ಕಾಲ ಇದ್ದರು ಎಂದು ಸುದ್ದಿಗಳು ಹರಿದಾಡಿತ್ತು. ಇದರಿಂದ ಆಕೆಯ ಸಿನೆಮಾ ಕೆರಿಯರ್‍ ಮೇಲೂ ಸಹ ಬ್ಲಾಕ್ ಮಾರ್ಕ್ ಬಿತ್ತು. ಜೊತೆಗೆ ಆಕೆಗೆ ಅವಕಾಶಗಳೂ ಸಹ ಕಡಿಮೆಯಾದವು. ಇನ್ನೂ ಇಬ್ಬರೂ ಮದುವೆಯಗುತ್ತಾರೆ ಎಂದು ಸಹ ಅನೇಕರು ಭಾವಿಸಿದ್ದರು. ಕೆಲವು ದಿನಗಳ ಬಳಿಕ ಈ ಜೋಡಿ ಬ್ರೇಕಪ್ ಮಾಡಿಕೊಂಡರು. ಅಲ್ಲಿಂದ ಆಕೆ ತನ್ನ ಸಂಪೂರ್ಣ ಗಮನ ಸಿನೆಮಾಗಳ ಮೇಲಿಟ್ಟರು. ಸೀನಿಯರ್‍ ನಟರ ಸಿನೆಮಾಗಳಲ್ಲಿ ನಟಿಸುತ್ತಾ ಆಕೆ ಕೆರಿಯರ್‍ ಸಾಗಿಸುತ್ತಿದ್ದಾರೆ.

ಇನ್ನೂ ಅಂಜಲಿ ಬಗ್ಗೆ ಕಾಲಿವುಡ್ ಅಂಗಳದಲ್ಲಿ ಕೆಲವೊಂದು ಸುದ್ದಿಗಳು ಹರಿದಾಡುತ್ತಿವೆ. ಶೀಘ್ರದಲ್ಲೇ ಅಂಜಲಿ ಮದುವೆಯಾಗಲಿದ್ದಾರೆ. ಆತ ಸಿನೆಮಾ ರಂಗಕ್ಕೆ ಸೇರಿದ ವ್ಯಕ್ತಿಯಲ್ಲವಂತೆ. ಆಕೆಯ ಮದುವೆ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಂದೆ ತಾಯಿಯವರಿಗೆ ಅಂಜಲಿ ನೀಡಿದ್ದಾರಂತೆ. ಆಕೆಯ ಪೋಷಕರು ಸಹ ಒಬ್ಬ ಹುಡುಗನನ್ನು ನೋಡಿದ್ದಾರಂತೆ. ಆ ಹುಡುಗ ಸಹ ತೆಲುಗು ಮೂಲದ ಹುಡುಗ ಎಂದು ಹೇಳಲಾಗುತ್ತಿದೆ. ಸದ್ಯ ಅಂಜಲಿ ಪೋಷಕರು ವಿದೇಶದಲ್ಲಿದ್ದಾರೆ. ಆದರೆ ತನ್ನ ಮಗಳಿಗಾಗಿ ಚೆನೈನಲ್ಲಿರುವ ತೆಲುಗು ಕುಟುಂಬದ ಯುವಕನನ್ನು ನೋಡಿದ್ದಾರಂತೆ. ಶೀಘ್ರದಲ್ಲೇ ಅಂಜಲಿ ತಂದೆ ತಾಯಿಯವರು ಸಹ ಇಂಡಿಯಾಗೆ ಬಂದು ಮದುವೆ ಕೆಲಸಗಳೂ ಸಹ ಪ್ರಾರಂಭ ಮಾಡುತ್ತಾರೆ ಎಂದು ಸುದ್ದಿಗಳು ಕೇಳಿ ಬರುತ್ತಿವೆ.

ನಟಿ ಅಂಜಲಿ ಸದ್ಯ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ ನಟನಾಗಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನೆಮಾ RC15 ಲೀಡ್ ಕ್ಯಾರೆಕ್ಟರ್‍ ನಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಬಳಿಕ ಅಂಜಲಿ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಸುದ್ದಿ ಕಾಲಿವುಡ್ ಅಂಗಳದಲ್ಲಿ, ಸೌತ್ ಸಿನಿರಂಗದಲ್ಲಿ ಹಾಗೂ ಸೊಷಿಯಲ್ ಮಿಡಿಯಾದಲ್ಲೂ ಸಹ ಸಖತ್ ಸದ್ದು ಮಾಡುತ್ತಿದೆ. ಇನ್ನೂ ಈ ಬಗ್ಗೆ ಅಂಜಲಿ ಯಾವ ರೀತಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top