ಹೌದು ಅರೆನಗ್ನವಾಗಿ ನಟಿಸಿದ್ದೇನೆ ಸೋ ವಾಟ್ ಎಂದ ಆಂಡ್ರಿಯಾ, ವೈರಲ್ ಆದ ಶಾಕಿಂಗ ಕಾಮೆಂಟ್ಸ್……!

Follow Us :

ಸೌತ್ ಸಿನಿರಂಗದ ನಟಿ ಆಂಡ್ರಿಯಾ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ಸೆಕೆಂಡ್ ಹಿರೋಯಿನ್ ಆಗಿ ತುಂಬಾನೆ ಕ್ರೇಜ್ ಪಡೆದುಕೊಂಡಿದ್ದಾರೆ. ಮಲ್ಟಿ ಟ್ಯಾಲೆಂಟೆಡ್ ನಟಿಯರಲ್ಲಿ ಆಂಡ್ರಿಯಾ ಸಹ ಒಬ್ಬರಾಗಿದ್ದಾರೆ. ಸಿಂಗರ್‍ ಆಗಿ, ಸಿನೆಮಾಗಳಲ್ಲಿ ನಟಿಯಾಗಿ ಬೋಲ್ಡ್ ಪಾತ್ರಗಳಲ್ಲಿ ನಟಿಸಲು ಸಹ ಆಕೆ ಸೈ ಎನ್ನುತ್ತಿರುತ್ತಾರೆ. ಇನ್ನೂ ಆಕೆಯ ಸಿನಿ ಕೆರಿಯರ್‍ ನಲ್ಲಿ ಅನೇಕ ವಿವಾದಗಳೂ ಸಹ ಮನೆ ಮಾಡಿದೆ.  ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುವ ಈಕೆ ಇದೀಗ ಕೆಲವೊಂದು ಬೋಲ್ಡ್ ಕಾಮೆಂಟ್ ಗಳನ್ನು ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ನಟಿ ಕಂ ಸಿಂಗರ್‍ ಆಂಡ್ರಿಯಾ ಜೀವನದಲ್ಲಿ ತುಂಬಾನೆ ವಿವಾದಗಳಿವೆ. ಸುಚಿ ಲೀಕ್ಸ್ ನಲ್ಲಿ ಆಕೆಯ ಹೆಸರು ತುಂಬಾನೆ ಕೇಳಿಬಂತು. ಸೌತ ಮ್ಯೂಸಿಕ್ ಡೈರೆಕ್ಟರ್‍ ಅನಿರುಧ್ ಜೊತೆಗೆ ಆಕೆ ಡೇಟ್ ನಡೆಸಿದ್ದಾರೆ. ಆತನೊಂದಿಗೆ ತುಂಬಾ ಕ್‌ಓಜ್ ಆಗಿರುವಂತಹ ಪೊಟೋಗಳೂ ಸಹ ಲೀಕ್ ಆಗಿತ್ತು. ಅವರಿಬ್ಬರ ನಡುವೆ ಅಫೈರ್‍ ಇದೆ ಎಂಬ ಸುದ್ದಿಗಳೂ ಸಹ ಹರಿದಾಡಿತ್ತು. ಸಿನಿರಂಗದಲ್ಲಿ ಏನೇ ವಿಚಾರವಿದ್ದರೂ ನೇರವಾಗಿಯೇ ಮಾತನಾಡುವಂತಹ ವ್ಯಕ್ತಿತ್ವವುಳ್ಳ ನಟಿಯರಲ್ಲಿ ಆಂಡ್ರಿಯಾ ಸಹ ಒಬ್ಬರಾಗಿದ್ದಾರೆ. ಸದಾ ಒಂದಲ್ಲ ಒಂದು ರೀತಿಯ ವಿವಾದದಲ್ಲಿ ಸಿಲುಕಿಕೊಳ್ಳುವಂತಹ ಆಂಡ್ರಿಯಾ ಇದೀಗ ಮತ್ತೊಮ್ಮೆ ಬೋಲ್ಡ್ ಕಾಮೆಂಟ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಇನ್ನೂ ಆಂಡ್ರಿಯಾ ಈ ಹಿಂದೆ ಅನೆಲ್ ಮೆಲೆ ಪನಿ ತುಲ್ಲಿ ಎಂಬ ಸಿನೆಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ಈ ಸಿಎನಮಾ ಲೇಡಿ ಓರಿಯೆಂಟೆಡ್ ಸಿನೆಮಾ ಆಗಿದ್ದು,  ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿರ್ಮಾಣ ಮಾಡಿದ್ದು, ಕೈಸರ್‍ ಆನಂದ್ ನಿದೇರ್ಶಿಸಿದ್ದರು. ಈ ಸಿನೆಮಾದಲ್ಲಿ ಆಂಡ್ರಿಯಾ ಅರೆನಗ್ನವಾಗಿ ನಟಿಸಿದ್ದರು. ಈ ಕಾರಣದಿಂದ ಆಕೆ ಕೆಲವೊಂದು ವಿಮರ್ಶೆಗಳನ್ನು ಸಹ ಎದುರಿಸಿದ್ದರು. ಇದೀಗ ಈ ಬಗ್ಗೆ ಮತ್ತೊಮ್ಮೆ ರಿಯಾಕ್ಟ್ ಆಗಿದ್ದಾರೆ. ಹೌದು ನಾನು ಈ ಸಿನೆಮಾದಲ್ಲಿ ಅರೆನಗ್ನವಾಗಿ ನಟಿಸಿದ್ದೇನೆ. ಆ ಸನ್ನಿವೇಶ ಮಾಡುವಾಗ ನನಗೆ ತುಂಬಾ ಭಯವಾಗಿತ್ತು. ಆದರೂ ಅರೆನಗ್ನವಾಗಿ ನಟಿಸಿದರೇ ತಪ್ಪೇನು. ನನ್ನ ನಿಜ ಜೀವನದಲ್ಲಿ ಅದಕ್ಕಿಂತ ಹೆಚ್ಚಾದ ಸಮಸ್ಯೆಗಳನ್ನು ಎದುರಿಸಿದ್ದೇನೆ ಎಂದು ಆಂಡ್ರಿಯಾ ಹೇಳಿದ್ದು, ಆಕೆಯ ಕಾಮೆಂಟ್ ಗಳು ಇದೀಗ ವೈರಲ್ ಆಗುತ್ತಿವೆ.

ಸದ್ಯ ಆಂಡ್ರಿಯಾ ಕೈಯಲ್ಲಿ ಆರಕ್ಕು ಹೆಚ್ಚು ಸಿನೆಮಾಗಳಿವೆ. ವೆಂಕಟೇಶ್ ರವರ ಸೈಂಧವ್ ಎಂಬ ಸಿನೆಮಾದಲ್ಲೂ ಸಹ ಆಂಡ್ರಿಯಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನೆಮಾದ ಜೊತೆಗೆ ಆಕೆ ಪಿಶಾಚಿ-2, ಕಾ, ಮಾಳಿಗೈ, ನೋ ಎಂಟ್ರಿ ಸೇರಿದಂತೆ ಮತಷ್ಟು ಸಿನೆಮಾಗಳಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಆಗಾಗ ಸಿಂಗರ್‍ ಆಗಿಯೂ ಸಹ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.