ತ್ರಿಷಾ ಹಾಗೂ ದಳಪತಿ ವಿಜಯ್ ಪೊಟೋ ವೈರಲ್, ನಾರ್ವೆಯಲ್ಲಿ ಕಾಣಿಸಿಕೊಂಡ ಜೋಡಿ, ಮತ್ತೊಮ್ಮೆ ಡಿವೋರ್ಸ್ ರೂಮರ್…..!

Follow Us :

ಕಾಲಿವುಡ್ ಸ್ಟಾರ್‍ ನಟ ದಳಪತಿ ವಿಜಯ್ ಅವರ ಪತ್ನಿ ಸಂಗೀತಾ ನಡುವೆ ವಿಬೇದಗಳು ಹುಟ್ಟಿಕೊಂಡಿದ್ದು ಶೀಘ್ರದಲ್ಲೇ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಲೇ ಇದೆ. ಈ ರೂಮರ್‍ ಇನ್ನೂ ಹಸಿಯಾಗಿರುವಾಗಲೇ ತ್ರಿಷಾ ಹಾಗೂ ದಳಪತಿ ವಿಜಯ್ ರವರ ಪೊಟೋ ಒಂದು ಸೊಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ಮತ್ತೊಮ್ಮೆ ವಿಜಯ್ ವಿಚ್ಚೇದನದ ರೂಮರ್‍ ಹರಿದಾಡುತ್ತಿದೆ. ಅಂದಹಾಗೆ ತ್ರಿಷಾ ಹಾಗೂ ವಿಜಯ್ ಲಿಯೋ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

ಸ್ಟಾರ್‍ ನಟ ವಿಜಯ್ ಹಾಗೂ ತ್ರಿಷಾ ಈ ಹಿಂದೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದರು. ಅವರ ಅಭಿನಯದ ಅನೇಕ ಸಿನೆಮಾಗಳೂ ಸಹ ಸೂಪರ್‍ ಹಿಟ್ ಆಗಿದ್ದವು. ಕೊನೆಯದಾಗಿ ಅವರು 2008ರಲ್ಲಿ ತೆರೆಕಂಡ ಕುರುವಿ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದ ಬಳಿಕ ಸುಮಾರು ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಈ  ಜೋಡಿ ತೆರೆಯ ಮೇಲೆ ಸದ್ದು ಮಾಡಲಿದೆ. ಲೋಕೇಶ್ ಕನಕರಾಜ್ ನಿರ್ದೇಶನ ಬಹುನಿರೀಕ್ಷಿತ ಲಿಯೋ ಸಿನೆಮಾದ ಮೂಲಕ ಈ ಜೋಡಿ ಮತ್ತೆ ಒಂದಾಗಿದೆ. ಸದ್ಯ ಲಿಯೋ ಸಿನೆಮಾದ ಶೂಟಿಂಗ್ ನಿಂದ ವಿರಾಮ ಪಡೆದುಕೊಂಡ ವಿಜಯ್ ನಾರ್ವೆಗೆ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಈ ಟ್ರಿಪ್ ನಲ್ಲಿ ವಿಜಯ್ ಜೊತೆಗೆ ತ್ರಿಷಾ ಸಹ ಕಾಣಿಸಿಕೊಂಡಿದ್ದು, ಹಲವು ರೂಮರ್‍ ಗಳಿಗೆ ಕಾರಣವಾಗಿದೆ.

ಇನ್ನೂ ನಾರ್ವೆ ಪ್ರವಾಸದಲ್ಲಿರುವ ವಿಜಯ್ ಜೊತೆಗೆ ಅಲ್ಲಿನ ಶಾಪಿಂಗ್ ಮಾಲ್ ಬಳಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದೀಗ ಅವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂದೂ ರೂಮರ್‍ ಜೋರಾಗಿ ಹರಿದಾಡುತ್ತಿದೆ. ಇನ್ನೂ ತ್ರಿಷಾ ಕಳೆದೊಂದು ವಾರದಿಂದ ಯೂರೋಪ್ ಪ್ರವಾಸದಲ್ಲಿದ್ದಾರೆ. ಸುಮಾರು ವರ್ಷಗಳ ಬಳಿಕ ತ್ರಿಷಾ ಹಾಗೂ ವಿಜಯ್ ಮತ್ತೆ ಪ್ರೀತಿಗೆ ಬಿದ್ದಿದ್ದಾರಾ ಎಂಬ ಪ್ರಶ್ನೆಗಳು ಮೂಡುವಂತೆ ಮಾಡಿದ್ದಾರೆ. ನಾರ್ವೆಯಲ್ಲಿ ಈ ಜೋಡಿ ಓಡಾಡುತ್ತಿರುವ ಪೊಟೋಗಳು ವೈರಲ್ ಆಗುತ್ತಿದ್ದು, ಇದೀಗ ವಿಜಯ್ ತನ್ನ ಪತ್ನಿಯಿಂದ ಡಿವೋರ್ಸ್ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್‍ ಗೆ ಮತಷ್ಟು ಬಲ ತಂದುಕೊಡುವಂತೆ ಮಾಡಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಈ ಬಗ್ಗೆ ಜೋರಾದ ಚರ್ಚೆ ಸಹ ಶುರುವಾಗಿದೆ.

ಇನ್ನೂ ಬಹುನಿರೀಕ್ಷಿತ ಲಿಯೋ ಸಿನೆಮಾ ಇದೇ ಅ.18 ರಂದು ತಮಿಳು ಸೇರಿದಂತೆ ಕನ್ನಡ, ತೆಲುಗು, ಹಿಂದಿ ಭಾಷೆಯಲ್ಲೂ ಸಹ ರಿಲೀಸ್ ಆಗಲಿದೆ. ಈ ಸಿನೆಮಾದ ಪೋಸ್ಟರ್‍ ಸಹ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿಸಿದೆ. ಇದೀಗ ಈ ವಿಜಯ್ ಹಾಗೂ ಸಂಗೀತಾ ವಿಚ್ಚೇದನ ಪಡೆಯಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಅವರು ಯಾವ ರೀತಿಯಲ್ಲಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.