ಮನೋಜ್ ಮದುವೆಯ ಬಗ್ಗೆ ಮೊದಲ ರಿಯಾಕ್ಷನ್, ಆನೆಗಳು ಹೋಗುತ್ತಿದ್ದರೇ ನಾಯಿಗಳು ಬೊಗಳುತ್ತೆ ಎಂದ ಮೋಹನ್ ಬಾಬು…!

ಟಾಲಿವುಡ್ ನ ಮಂಚು ಕುಟುಂಬದ ಮಂಚು ಮನೋಜ್ ಹಾಗೂ ಭೂಮಾ ಮೋನಿಕಾರೆಡ್ಡಿ ಮದುವೆ ಕೆಲವು ದಿನಗಳ ಹಿಂದೆಯಷ್ಟೆ ನೆರವೇರಿತ್ತ. ಅವರ ಮದುವೆಯ ಸುದ್ದಿ ದೊಡ್ಡ ಮಟ್ಟದಲ್ಲೇ ವೈರಲ್ ಆಗಿತ್ತು. ಈ ಜೋಡಿಯ ಮದುವೆ ಮಂಚು ಕುಟುಂಬಕ್ಕೆ ಇಷ್ಟವಿರಲಿಲ್ಲ. ಮನೋಜ್ ತಂದೆ ಮೋಹನ್ ಬಾಬು ರವರಿಗೂ ಸಹ ಇಷ್ಟವಿಲ್ಲದ ಕಾರಣ ಮಂಚು ಲಕ್ಷ್ಮೀ ರವರೇ ಮದುವೆಯ ಎಲ್ಲಾ ಕೆಲಸಗಳನ್ನು ನೋಡಿಕೊಂಡರು ಎಂದು ಸುದ್ದಿಗಳು ಹರಿದಾಡಿದ್ದವರು. ಇದೀಗ ಮೊದಲ ಬಾರಿಗೆ ಮೋಹನ್ ಬಾಬು ಈ ಕುರಿತು ರಿಯಾಕ್ಟ್ ಆಗಿದ್ದು, ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಕಳೆದ ವರ್ಷದ ಗಣೇಶ ಉತ್ಸವದ ಸಮಯದಲ್ಲಿ ಮಂಚು ಮನೋಜ್ ಹಾಗೂ ಭೂಮಾ ಮೋನಿಕಾ ರೆಡ್ಡಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಂದಿನಿಂದ ಅವರ ಮದುವೆಯ ಬಗ್ಗೆ ರೂಮರ್‍ ಗಳು ಹುಟ್ಟಿಕೊಂಡಿತ್ತು. ಅಂದಿನಿಂದ ಅವರ ಮದುವೆಯ ಆಗ ನಡೆಯುತ್ತೆ, ಈಗ ನಡೆಯುತ್ತೆ ಎಂದು ಸುದ್ದಿಗಳು ಹರಿದಾಡಿತ್ತು. ಆದರೆ ಅವರ ಮದುವೆ ಮಾ.3 ರಂದು ಸರಳವಾಗಿಯೇ ನೆರವೇರಿತ್ತು. ಈ ಮದುವೆಯ ಎಲ್ಲಾ ಕರ್ತವ್ಯಗಳನ್ನು ಜವಾಬ್ದಾರಿಗಳನ್ನೂ ಸಹ ಮಂಚು ಲಕ್ಷ್ಮೀ ರವರೇ ನೋಡಿಕೊಂಡರು. ಮಂಚು ಲಕ್ಷ್ಮೀ ರವರ ಮನೆಯಲ್ಲಿಯೇ ಮನೋಜ್ ಮದುವೆ ಸಹ ನಡೆದಿತ್ತು. ಇನ್ನೂ ಮದುವೆಯ ಬಗ್ಗೆ ಅನೇಕ ವಿಚಾರಗಳು ಹರಿದಾಡಿದವು. ಮಂಚು ಕುಟುಂಬಕ್ಕೆ ಈ ಮದುವೆ ಇಷ್ಟವಿಲ್ಲ. ಮೋಹನ್ ಬಾಬು ರವರಿಗೂ ಸಹ ಈ ಮದುವೆ ಇಷ್ಟ ಇಲ್ಲ ಎಂದು ಸಹ ಸುದ್ದಿಗಳು ಕೇಳಿಬಂದವು.

ಇನ್ನೂ ಮೊದಲ ಬಾರಿಗೆ ಮನೋಜ್ ಮದುವೆಯ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಮೋಹನ್ ಬಾಬು ರವರ ಹುಟ್ಟುಹಬ್ಬದ ಅಂಗವಾಗಿ ಅವರು ಇತ್ತಿಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಮನೋಜ್ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಮೋಹನ್ ಬಾಬು ರವರು ನೀಡಿದ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮದುವೆಯ ಬಗ್ಗೆ ಮೋಹನ್ ಬಾಬು ರವರಿಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಮೋಹನ್ ಬಾಬು ಉತ್ತರಿಸಿದ್ದಾರೆ. ಮನೋಜ್ ನನ್ನ ಬಳಿ ಬಂದು ಆ ಹುಡುಗಿಯನ್ನು ನಾನು ಮದುವೆಯಾಗುತ್ತೇನೆ ಎಂದು ಹೇಳಿದ. ನಾನು ಆತನಿಗೆ ಒಂದು ಬಾರಿ ಯೋಚಿಸು ಎಂದು ಹೇಳಿದೆ. ಅದಕ್ಕೆ ಮನೋಜ್ ನಾನು ತೆಗೆದುಕೊಂಡ ನಿರ್ಣಯ ಸರಿಯಾಗಿದೆ ಎಂದು ಹೇಳಿದ. ಬಳಿಕ ಬೆಸ್ಟ್ ಆಫ್ ಲಕ್ ಎಂದು ಹೇಳಿದ್ದೆ. ನಾವು ಮಾಡಿದ ಕೆಲಸ ಒಳ್ಳೆಯದಾಗಿದ್ದರೇ ಬೇರೆಯವರ ಬಗ್ಗೆ ಯೋಚಿಸಿ ಅಲ್ಲಿಯೇ ನಿಲ್ಲಬಾರದು. ರಸ್ತೆಯಲ್ಲಿ ಆನೆಗಳು ಹೋಗುತ್ತಿದ್ದರೇ ನಾಯಿಗಳು ಬೊಗಳುತ್ತಿರುತ್ತವೆ ನಾವು ಎಷ್ಟು ನಾಯಿಗಳನ್ನು ತಡೆಯಲು ಸಾಧ್ಯ ಎಂದು ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ.

ಇನ್ನೂ ಮಂಚು ಮನೋಜ್ ಮದುವೆಯ ಬಗ್ಗೆ ವಿಮರ್ಶೆ ಮಾಡುವಂತಹವರನ್ನು ನಾಯಿಗಳಿಗೆ ಹೋಲಿಕೆ ಮಾಡಿದ್ದಾರೆ. ಸದ್ಯ ಮೋಹನ್ ಬಾಬು ರವರ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಮನೋಜ್ ಹಾಗೂ ಮೋನಿಕಾ ಮದುವೆಯ ಬಗ್ಗೆ ನಮ್ಮ ಕುಟುಂಬದ ಎಲ್ಲರ ಒಪ್ಪಿಗೆ ಇತ್ತು ಎಂಬುದನ್ನು ಈ ಮೂಲಕ ಮೋಹನ್ ಬಾಬು ತಿಳಿಸಿದ್ದಾರೆ.