Film News

ತನ್ನ ಬಹುದಿನಗಳ ಬಯಕೆಯನ್ನು ಹೊರಹಾಕಿದ ಲೇಡಿ ಸೂಪರ್ ಸ್ಟಾರ್ ನಯನತಾರಾ….!

ಸೌತ್ ಸಿನಿರಂಗದಲ್ಲಿ ಮದುವೆಯಾದರೂ ಸಹ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿರುವ ನಯನತಾರಾ ಲೇಡಿ ಸೂಪರ್‍ ಸ್ಟಾರ್‍ ಆಗಿಯೇ ಫೇಮಸ್ ಆಗಿದ್ದಾರೆ. ತುಂಬಾ ಕಷ್ಟ ಪಟ್ಟು ಸಿನಿರಂಗದಲ್ಲಿ ಬೆಳೆದು ಇದೀಗ ಲೇಡಿ ಸೂಪರ್‍ ಸ್ಟಾರ್‍ ಆಗಿ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸಿ ಅನೇಕ ಹಿಟ್ ಗಳನ್ನು ನೀಡಿದ್ದಾರೆ. ಇನ್ನೂ ಆಕೆಯಲ್ಲಿದ್ದ ಬಹುದಿನಗಳ ಕನಸನ್ನು ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಹೊರಹಾಕಿದ್ದಾರೆ. ಅಷ್ಟಕ್ಕೂ ಆಕೆಯ ಬಹುದಿನಗಳ ಆಸೆಯೇನು ಎಂಬ ವಿಚಾರಕ್ಕೆ ಬಂದರೇ,

ನಟಿಯಾಗಿ ದೊಡ್ಡ ಮಟ್ಟದಲ್ಲೇ ಖ್ಯಾತಿ ಪಡೆದುಕೊಂಡ ನಯನತಾರಾಗೆ ಮತಷ್ಟು ಸಾಧನೆ ಮಾಡಬೇಕೆಂಬ ಹಂಬಲವಿದೆ. ನಯನತಾರಾ ರವರಂತೆ ಅನೇಕ ನಟಿಯರು ತಮ್ಮ ಮನದಾಸೆಗಳನ್ನು ಕೆಲವೊಂದು ಸಮಯದಲ್ಲಿ ಹೊರಹಾಕಿದ್ದಾರೆ. ಇದೀಗ ನಯನತಾರಾ ಸಹ ತನ್ನ ಮನಸ್ಸಿನಲ್ಲಿರುವ ಬಹುಕಾಲದ ಆಸೆಯನ್ನು ಹೊರಹಾಕಿದ್ದಾರೆ. ಕಾಲಿವುಡ್ ನಲ್ಲಿ ನಡೆದಂತಹ ಅವಾರ್ಡ್ ಫಂಕ್ಷನ್ ಒಂದರಲ್ಲಿ ಆಕೆ ತನ್ನ ಮನದಾಳದ ಆಸೆಯನ್ನು ಹೊರಹಾಕಿದ್ದಾರೆ. ಖ್ಯಾತ ನಿರ್ದೇಶಕ ಮಣಿಶರ್ಮಾ ರವರಿಂದ ಅವಾರ್ಡ್ ಪಡೆದುಕೊಂಡ ನಯನತಾರಾ ಅವರ ಪಾದಗಳಿಗೆ ನಮಸ್ಕರಿಸಿ ಆರ್ಶಿವಾದ ಪಡೆದುಕೊಂಡಿದ್ದಾರೆ. ಜೊತೆಗೆ ತನ್ನ ಬಹುದಿನಗಳ ಬಯಕೆಯ ಬಗ್ಗೆ ಸಹ ಮಾತನಾಡಿದ್ದಾರೆ.

ಇನ್ನೂ ವೇದಿಕೆಯಲ್ಲಿ ಮಾತನಾಡಿದ ನಯನತಾರಾ, ಈ ಅವಾರ್ಡ್ ಅನ್ನು ಮಣಿರತ್ನಂ ರವರ ಕೈಯಲ್ಲಿ ಪಡೆದುಕೊಳ್ಳುತ್ತಿರುವುದು ತುಂಬಾ ಸಂತೋಷಕರವಾಗಿದೆ. ಜೊತೆಗೆ ಅತ್ಯಂತ ಗರ್ವ ಸಹ ಪಡುತ್ತೇನೆ. ಸಿನಿರಂಗದ ಅನೇಕರು ಮಣಿಶರ್ಮಾ ರವರ ಸಿನೆಮಾಗಳಲ್ಲಿ ನಟಿಸಲು ತುಂಬಾ ಕಾತುರ, ಬಯಕೆ ಇರುತ್ತದೆ. ಅವರಂತೆ ನನಗೂ ಸಹ ಮಣಿಶರ್ಮಾ ರವರ ಸಿನೆಮಾದಲ್ಲಿ ನಟಿಸಲು ಉತ್ಸುಕಳಾಗಿದ್ದೇನೆ. ಅವರ ಸಿನೆಮಾದಲ್ಲಿ ನಟಿಸುವುದು ನನಗೆ ಬಹುದಿನಗಳ ಕನಸಾಗಿದೆ. ಈ ಹಿಂದೆ ಸಹ ಕೆಲವೊಂದು ಅವಕಾಶಗಳು ಬಂದವು. ಆದರೆ ಕೆಲವೊಂಧು ಕಾರಣಗಳಿಂದ ನಟಿಸಲು ಆಗಲಿಲ್ಲ. ಸದ್ಯ ನಯನತಾರಾ ರವರೇ ಮನಸ್ಸು ಬಿಚ್ಚಿ ಅವಕಾಶ ಕೇಳಿದ್ದು, ಮಣಿಶರ್ಮಾ ರವರು ಅವಕಾಶ ಕೊಡುತ್ತಾರಾ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.  ಇನ್ನೂ ಶೀಘ್ರದಲ್ಲೇ ಮಣಿರತ್ನಂ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ನಲ್ಲಿ ಸಿನೆಮಾ ಒಂದು ತೆರೆಗೆ ಬರಲಿದೆ. ಈ ಸಿನೆಮಾ ಈಗಾಗಲೇ ಘೋಷಣೆ ಸಹ ಆಗಿದ್ದು, ಈ ಸಿನೆಮಾದಲ್ಲಿ ನಯನತಾರಾ ಅವಕಾಶ ಪಡೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಮದುವೆಯಾದರೂ ಸಹ ನಯನತಾರಾ ಭಾರಿ ಸಂಭಾವನೆಯನ್ನು ಪಡೆದುಕೊಳ್ಳುತ್ತಾ ಭಾರಿ ಪ್ರಾಜೆಕ್ಟ್ ಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸದ್ಯ ಆಕೆ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಜೊತೆಗೆ ಜವಾನ್ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾಗಾಗಿ ಆಕೆ ಭಾರಿ ಮೊತ್ತದ ಸಂಭಾವನೆಯನ್ನು ಸಹ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಈ ಸಿನೆಮಾದಲ್ಲಿ ಆಕೆ ಸುಮಾರು ದಿನಗಳ ಬಳಿಕ ಬಿಕಿನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.

Most Popular

To Top