Film News

ಖ್ಯಾತ ಖಳನಾಯಕ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ ನಿಧನ, ಕಂಬನಿ ಮಿಡಿದ ಸಿನಿರಂಗ….!

ಸೌತ್ ಸಿನಿರಂಗದ ಅನೇಕ ಸಿನೆಮಾಗಳಲ್ಲಿ ಖಳನಾಯಕನಾಗಿ ನಟಿಸಿದ್ದ ಡೇನಿಯಲ್ ಬಾಲಾಜಿ ಶುಕ್ರವಾರ ಹೃದಯಾಘಾತದಿಂದ ಇಹಲೋಕ ತ್ಯೆಜಿಸಿದ್ದಾರೆ. ಏಕಾಏಕಿ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಚೆನೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಅವರ ಪಾರ್ಥಿವ ಶರೀರವನ್ನು ಪುರಸೈವಾಲ್ಕಂನಲ್ಲಿರುವ ಅವರ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ ಎಂದು ಕೆಲವೊಂದು ಮೂಲಗಳಿಂದ ತಿಳಿದುಬಂದಿದೆ.

ದಿವಂಗತ ನಟ ಡೇನಿಯಲ್ ಬಾಲಾಜಿ ರವರು ಮಾ.29 ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿದ್ದು, ತಮಿಳು ಸಿನೆಮಾಗಳಲ್ಲಿ ಹೆಚ್ಚು ಗುರ್ತಿಸಿಕೊಂಡಿದ್ದರು. ಜೊತೆಗೆ ಕನ್ನಡ ಹಾಗೂ ಮಲಯಾಳಂ ಸಿನೆಮಾಗಳಲ್ಲೂ ಸಹ ನಟಿಸಿದ್ದಾರೆ. ನಟ ಡೇನಿಯಲ್ ಬಾಲಾಜಿ ಬಾಲಾಜಿ ಕನ್ನಡದ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಕುಟುಂಬದ ಸದಸ್ಯರಾಗಿದ್ದಾರೆ. ಕನ್ನಡದ ಕಿರಾತಾಕ, ಬೆಂಗಳೂರು ಅಂಡರ್‍ ವರ್ಲ್ಡ್, ಡವ್, ಶಿವಾಜಿನಗರ ಮೊದಲಾದ ಸಿನೆಮಾಗಳಲ್ಲಿ ನಟಿಸಿದ್ದರು. ತಮಿಳಿನಲ್ಲೂ ಸೂರ್ಯ ನಟನೆಯ ಕಾಖ-ಕಾಖ ಸಿನೆಮಾದಲ್ಲೂ ಸಹ ನಟಿಸಿ ಫೇಮಸ್ ಆಗಿದ್ದರು. ಜೊತೆಗೆ ಪ್ರೊಡಕ್ಷನ್ ಮ್ಯಾನೇಜರ್‍ ಆಗಿಯೂ ಸಹ ಕೆಲಸ ಮಾಡಿದ್ದರು.  ವಟ್ರೈಯಾಡು ವಿಲೈಯಾಡು, ಭಗವಾನ್, ಡ್ಯಾಡಿ ಕೂಲ್ ಮೊದಲಾದ ಸಿನೆಮಾಗಳಲ್ಲಿ ವಿಲನ್ ಆಗಿ ನಟಿಸಿದ್ದರು. ವಿಲನ್ ಲುಕ್ ಹಾಗೂ ಕಂಠದ ಮೂಲಕವೇ ಜನಪ್ರಿಯತೆ ಪಡೆದುಕೊಂಡಿದ್ದರು.

ಇನ್ನೂ ಡೇನಿಯಲ್ ಬಾಲಾಜಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸೌತ್ ಸಿನಿರಂಗ ಹಾಗೂ ಅವರ ಅಭಿಮಾನಿಗಳಲ್ಲಿ ನೋವನ್ನುಂಟು ಮಾಡಿದೆ. ಟಿವಿ ಸೀರಿಯಲ್ ಹಾಗೂ ಸಿನೆಮಾಗಳ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಪಡೆದುಕೊಂಡ ಡೇನಿಯಲ್ ರವರ ಅಕಾಲಿಕ ಮರಣ ಅವರ ಅಭಿಮಾನಿಗಳಿಗೆ ನೋವನ್ನು ತಂದಿದೆ. ನಟನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಸಹ ಅವರು ಭಾಗಿಯಾಗುತ್ತಿದ್ದರು. ಅವಡಿಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಹೊಸ ದೇವಾಲಯ ಸಹ ನಿರ್ಮಾಣ ಮಾಡುತ್ತಿದ್ದರು ಎಂದೂ ಸಹ ತಿಳಿದುಬಂದಿದೆ. ಇನ್ನೂ ಡೇನಿಯಲ್ ಬಾಲಾಜಿಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರ ಅಭಿಮಾನಿಗಳು ಹಾಗೂ ಸಿನೆಮಾ ಗಣ್ಯರು ಸೇರಿದಂತೆ ಅನೇಕರು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

Most Popular

To Top