ನಿಂದಕರ ಮಾತುಗಳಿಂದ ನಮ್ಮ ತಾಯಿ ಸರಿಯಾಗಿ ಊಟ ಮಾಡ್ತಿಲ್ಲ ಎಂದು ಕಣ್ಣೀರಿಟ್ಟ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೊಷ್….!

Follow Us :

ಕನ್ನಡದ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ವರ್ತೂರ್‍ ಸಂತೋಷ್ ಈ ಶೋ ಮೂಲಕ ರಾಜ್ಯದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಬಿಗ್ ಬಾಸ್ ಮನೆಯಲ್ಲಿ ಅವರು ತಮ್ಮ ನೇರ ನುಡಿಗಳ ಮೂಲಕ ಎಲ್ಲರನ್ನು ರಂಜಿಸಿದ್ದರು. ಇದೀಗ ವರ್ತೂರ್‍ ಸಂತೋಷ್ ಸೆಲೆಬ್ರೆಟಿಯಾಗಿದ್ದಾರೆ. ಮನೆಯಲ್ಲಿದ್ದಾಗೂ ವರ್ತೂರ್‍ ಸಂತೋಷ ಬಗ್ಗೆ ಕೆಲವೊಂದು ವಿವಾದಗಳು ಹುಟ್ಟಿಕೊಂಡಿದ್ದವು. ಹೊರಬಂದಾಗಲೂ ಕೆಲವೊಂದು ವಿವಾದಗಳು ಸೃಷ್ಟಿಯಾಗಿದೆ. ಇದೀಗ ನಿಂದಕರ ಮಾತುಗಳಿಗೆ ಮನನೊಂದು ಕಣ್ಣೀರಾಕಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಿಗ್ ಬಾಸ್ ಸ್ಪರ್ಧಿ ವರ್ತೂರ್‍ ಸಂತೋಷ್ ಬಿಗ್ ಬಾಸ್ ನಿಂದ ಬಂದ ಬಳಿಕ ಸೋಷಿಯಲ್ ಮಿಡಿಯಾದಲ್ಲೂ ಮತಷ್ಟು ಫೇಮಸ್ ಆಗಿದ್ದಾರೆ. ಇದೀಗ ಅವರು ಟ್ರೋಲರ್‍ ಗಳ ಮಾತುಗಳಿಗೆ ಮನನೊಂದು ಕಣ್ಣೀರಾಕಿದ್ದಾರೆ. ಟ್ರೋಲರ್‍ ಗಳಿಗೆ ತಕ್ಕ ಶಾಸ್ತಿ ಕಲಿಸಬೇಕೆಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮಾತನಾಡುತ್ತಾ ನಾನು ಯಾರಿಗೂ ಮೋಸ ಮಾಡಿವನಲ್ಲ, ಯಾರ ಆಹಾರ ಕಿತ್ತುಕೊಂಡವನಲ್ಲ. ನನ್ನ ಮನೆಯ ಅನ್ನ ತಿಂದು, ನನ್ನ ಬಳಿ ಸಾವಿರ ಎರಡು ಸಾವಿರ ಹಣಕ್ಕೆ ಬರುತ್ತಿದ್ದ ಯಲಹಂಕ ಮಂಜು ನನ್ನ ವಿರುದ್ದ ಬಾಯಿಗೆ ಬಂದಂತೆ ಕೆಟ್ಟ ಮಾತುಗಳನ್ನು ಆಡುತ್ತಿದ್ದಾರೆ. ವಿಡಿಯೋ ಮುಂದೆ ಬಂದು ಮಾತನಾಡಬೇಕಾದರೇ ಅವರವರ ನೋವು ಅವರಿಗೆ ಗೊತ್ತಾಗುತ್ತದೆ. ನಮ್ಮ ತಾಯಿ ನಮ್ಮ ತಂದೆಯನ್ನು ಕಳೆದುಕೊಂಡ ಮೇಲೆ ನನ್ನನ್ನು ಅಷ್ಟೇ ಗೌರವದಿಂದ ಸಾಕಿದ್ದಾರೆ. ನಮ್ಮ ರೇಸ್ ನಲ್ಲಿ ಇವರೆಲ್ಲಾ ಸಾವಿರ-ಎರಡು ಸಾವಿರಕ್ಕೆ ಬಂದವರು. 2022ರಲ್ಲಿ ರೇಸ್ ಮಾಡಿದಾಗ ಬಂದು ನನ್ನ ಎಂಜಲು ಕಾಸು ತಿಂದ ಮಕ್ಕಳು ಇವರು. ನಮ್ಮ ಅನ್ನ ತಿಂದು ನಮಗೆ ಮಾತಾಡುತ್ತಾರೆ. ಅದಕ್ಕೆ ಆ ಭಗವನಂತನೇ ಸಾಕ್ಷಿ ಎಂದಿದ್ದಾರೆ.

ನಮ್ಮ ತಾಯಿ, ಸ್ನೇಹಿತರು, ಬಂಧುಗಳು ಹಾಗೂ ನನ್ನ ಸಂಸಾರದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ. ನಾನು ಕಣ್ಣಿರು ಹಾಕಿದ್ರೆ ಡ್ರಾಮಾ ಅಂತಾರೆ. ಜನರೇ ಧರ್ಮ ದೇವತೆಗಳು, ನಾನು ಯಾವ ಊರಿಗೆ ಹೋದರೂ ಸಹ ನನಗೆ ತುಂಬಾ ಮರ್ಯಾದೆ ಕೊಡ್ತಾರೆ. ನಾನು ಮಾನ ಮರ್ಯಾದೆಗಾಗಿ ಬದುಕುತ್ತಿದ್ದೇವೆ. ಅವರು ಆಡುವಂತಹ ಕೆಟ್ಟ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ. ನನ್ನ ಜನರೇ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ ನಿಂದಕರಿಗೆ ತಕ್ಕ ಬುದ್ದಿ ಕಲಿಸಬೇಕು ಎಂದು ವರ್ತೂರ್‍ ಸಂತೋಷ್ ಕಣ್ನೀರು ಹಾಕಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.