Film News

ಸೌತ್ ಸಿನಿರಂಗದ ಸೀನಿಯರ್ ನಟ ಶರತ್ ಬಾಬು ಇನ್ನಿಲ್ಲ, ತೀವ್ರ ವಿಷಾದದಲ್ಲಿ ಸಿನಿರಂಗ….!

ಸೌತ್ ಸಿನಿರಂಗದ ಸೀನಿಯರ್‍ ನಟ ಶರತ್ ಬಾಬು ಸುಮಾರು ದಿನಗಳಿಂದ ಅನಾರೋಗ್ಯಕ್ಕೆ ಗುರಿಯಾಗಿದ್ದರು. ಅನಾರೋಗ್ಯಕ್ಕೆ ಗುರಿಯಾದ ಶರತ್ ಬಾಬು ರವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು (ಮೇ.22) ರಂದು ಇಹಲೋಕ ತ್ಯೆಜಿಸಿದ್ದಾರೆ. ಇನ್ನೂ ಶರತ್ ಬಾಬು ಮರಣಕ್ಕೆ ಇಡೀ ಸಿನಿರಂಗವೇ ಶೋಕಸಾಗರದಲ್ಲಿ ಮುಳುಗಿದೆ. ಸಿನೆಮಾ ಸೆಲೆಬ್ರೆಟಿಗಳು, ಅಭಿಮಾನಿಗಳು ಸೇರಿದಂತೆ ಅನೇಕರು ಶ್ರದ್ದಾಂಜಲಿಯನ್ನು ಅರ್ಪಿಸುತ್ತಿದ್ದಾರೆ.

ಕಳೆದ ವರ್ಷ ಸಿನಿರಂಗದ ಅನೇಕ ದಿಗ್ಗಜ ನಟರು ಮೃತಪಟ್ಟಿದ್ದರು. ಇದೀಗ ಸೀನಿಯರ್‍ ನಟ ಶರತ್ ಬಾಬು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಹೈದರಾಬಾದ್ ನ ಎ.ಐ.ಜಿ ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅವರ ಆರೋಗ್ಯ ಹದೆಗಟ್ಟಿದ್ದು ಚೆನೈನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಹೈದರಾಬಾದ್ ಗೆ ಕರೆತರಲಾಗಿತ್ತು. ಬಳಿಕ ಅವರ ಆರೋಗ್ಯ ಮತಷ್ಟು ಕ್ಷೀಣಿಸಿದೆ ಎಂಬ ಮಾಹಿತಿಯನ್ನು ತಿಳಿಸಿದ್ದರು. ಅವರು ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳೂ ಸೇರಿದಂತೆ ಅನೇಕರು ಪ್ರಾರ್ಥನೆ ಮಾಡಿದರು. ಆದರೆ ಅವರ ಪ್ರಾರ್ಥನೆಗೆ ದೇವರು ಸ್ಪಂದಿಸಿಲ್ಲ. ಶರತ್ ಬಾಬು ರವರು ತಮ್ಮ 71ನೇ ವಯಸ್ಸಿನಲ್ಲಿ ಕೊನೆಯ ಉಸಿರನ್ನೇಳೆದಿದ್ದಾರೆ.

ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಶರತ್ ಬಾಬು ಗುರಿಯಾಗಿದ್ದು,  ಚೆನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಬಳಿಕ ಮತ್ತೆ ಅನಾರೋಗ್ಯಕ್ಕೆ ಗುರಿಯಾಗಿದ್ದರು.  ಏ.20 ರಂದು ಬೆಂಗಳೂರಿನಿಂದ ಹೈದರಾಬಾದ್ ಗೆ ಕರೆದುಕೊಂಡು ಗಚ್ಚಿಬೌಲಿನಲ್ಲಿ ಏಐಜಿ ಆಸ್ಪತ್ರೆಗೆ ದಾಖಲಿಸಿದ್ದರು. ಶರತ್ ಬಾಬು ಮಲ್ಟಿ ಆರ್ಗಾನ್ ಫೈಲ್ಯೂರ್‍ ನಿಂದ ಬಳಲುತ್ತಿದ್ದು, ಸುಮಾರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಸುಮಾರು ದಿನಗಳ ಕಾಲ ವೆಂಟಿಲೇಟರ್‍ ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟರು. ಇನ್ನೂ ಶರತ್ ಬಾಬು ಆಂಧ್ರಪ್ರದೇಶ ಶ್ರೀಕಾಕುಳಂ ಜಿಲ್ಲೆಯ ಆಮುದಾಲವಲಸಲೋ ಎಂಬಲ್ಲಿ 1951 ರಲ್ಲಿ ಜನಿಸಿದರು. ಆತ 1973ರಲ್ಲೇ ನಟನಾಗಿ ಪಾದಾರ್ಪಣೆ ಮಾಡಿದರು. ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನೆಮಾಗಳಲ್ಲೂ ಸಹ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದರು.

ಇನ್ನೂ ಇತ್ತಿಚಿಗಷ್ಟೆ ಸಿನಿರಂಗದ ದಿಗ್ಗಜರಾದ ಕೃಷ್ಣಂರಾಜು, ಸೂಪರ್‍ ಸ್ಟಾರ್‍ ಕೃಷ್ಣ, ಕೈಕಾಲ ಸತ್ಯನಾರಾಯಣ, ಚಲಪತಿರಾವು, ನಂದಮೂರಿ ತಾರಕರತ್ನ, ಜಮುನ, ವಾಣಿ ಜಯರಾಂ, ಕೆ.ವಿಶ್ವನಾಥ್ ಸೇರಿದಂತೆ ಹಲವರು ಮೃತಪಟ್ಟಿದ್ದರು. ಇದೀಗ ಶರತ್ ಬಾಬು ಮರಣ ಸಿನಿರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

Most Popular

To Top