News

ಅಮಿತಾ ಶಾ ರವರನ್ನು ಗೂಂಡಾ ರೌಡಿ ಎಂದ ಸಿಎಂ ಪುತ್ರ ಯತೀಂದ್ರ, ದೂರು ನೀಡಿದ ಬಿಜೆಪಿ

ಕರ್ನಾಟಕ ರಾಜ್ಯದಲ್ಲಿ ಲೋಕಸಭಾ ಚುನಾವಣೆ ರಂಗೇರುತ್ತಿದ್ದು, ಕಾಂಗ್ರೇಸ್ ಹಾಗೂ ಬಿಜೆಪಿ ನಡುವೆ ನೇರಾ ಹೋರಾಟ ನಡೆಯುತ್ತಿದೆ. ಇದೀಗ ಸಭೆಯೊಂದರಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಕೆಂಡಾಮಂಡಲವಾದ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಬಿಜೆಪಿ ಎಂ,ಎಲ್.ಸಿಗಳಾದ ಛಲವಾದಿ ನಾರಾಯಣಸ್ವಾಮಿ ಹಾಗೂ ರವಿಕುಮಾರ್‍ ದೂರು ನೀಡಿದ್ದಾರೆ.

ದೂರು ನೀಡಿದ ಬಳಿಕ ಮಾತನಾಡಿದ ಬಿಜೆಪಿ ಮುಖಂಡ ಎನ್.ರವಿಕುಮಾರ್‍ ಯತೀಂದ್ರರವರು ಅಮಿತ್ ಶಾ ವೈಯುಕ್ತಿಕ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರ ವಿರುದ್ದ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ದೂರು ಸಹ ನೀಡಲಾಗಿದೆ. ಅವರ ವಿರುದ್ದ ಕ್ರಮ ತೆಗೆದುಕೊಳ್ಳದೇ ಇದ್ದರೇ ಪ್ರತಿಭಟನೆ ಮಾಡುತ್ತೇವೆ ಎಂದು ಸಹ ಹೇಳಿದ್ದಾರೆ. ಕೃಷ್ಣಾ ನದಿ ಚೆಕ್ ಪೋಸ್ಟ್ ಬಳಿ ವಾಹನ ತಡೆದು ಸಾಮಗ್ರಿ ಸುಟ್ಟಿದ್ದಾರೆ. ಪಕ್ಷದ ಧ್ವಜ ಹಾಗೂ ಬೇರೆ ವಸ್ತು ಸಾಗಿಸಲು ಅನುಮತಿ ಇತ್ತು. ಆದರೆ ಅಧಿಕಾರಿ ಸುಟ್ಟು ಹಾಕಿದ್ದಾರೆ ಅವರು ಕಾಂಗ್ರೇಸ್ ಪಕ್ಷದ ಬೆಂಬಲಿಗ ಇರಬೇಕು ಎಂದು ಕಿಡಿಕಾರಿದ್ದಾರೆ.

ಇನ್ನೂ ಸಭೆಯಲ್ಲಿ ಯತೀಂದ್ರ ರವರು ಮಾತನಾಡುತ್ತಾ, ಅಮಿತ್ ಶಾ ಒಬ್ಬ ಗೂಂಡಾ ಅವರ  ಮೇಲೆ ಕೊಲೆ ಆರೋಪವಿತ್ತು. ಅಂತಹವರನ್ನು ಪಕ್ಕದಲ್ಲಿಟ್ಟುಕೊಂಡು ಮೋದಿ ರಾಜಕೀಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಮಾತುಗಳು ಬಿಜೆಪಿ ನಾಯಕರನ್ನು ಕೆರಳಿಸಿದೆ. ಬಿಜೆಪಿ ನಾಯಕರು ಯತೀಂದ್ರ ವಿರುದ್ದ ಕಿಡಿಕಾರಿದ್ದಾರೆ. ಯತೀಂದ್ರ ಗೆ ಪ್ರಬುದ್ದತೆ ಇಲ್ಲ ಎಂದು ವಿಪಕ್ಷ ನಾಯಕ ಆರ್‍.ಅಶೋಕ್ ಹೇಳಿದ್ರೇ, ಶಾಸಕ ಅಶ್ವತ್ಥ್ ನಾರಾಯಣ ಯತೀಂದ್ರ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಮಾಜಿ ಸಚಿವ ಸಿ.ಟಿ.ರವಿ ಸಹ ಅಪ್ಪನ ಹಣ ಬೆಂಬಲದಿಂದ ಶಾಸಕ ಆದವರು ಹೀಗೆ ಮಾತನಾಡದೇ ಇನ್ನ್ಯಾವ ರೀತಿ ಮಾತ್ರಾಡ್ತಾರೆ ಎಂದು ಕುಟುಕಿದ್ದಾರೆ.

Most Popular

To Top