Film News

ನಾಲ್ಕು ಗಂಟೆ ಶೂಟಿಂಗ್ ಗಾಗಿ 3 ದೇಶಗಳು, 6 ನಗರಗಳನ್ನು ಸುತ್ತಾಡಿದ ನಟ ಪೃಥ್ವಿರಾಜ್, ವೈರಲ್ ಆದ ಕಾಮೆಂಟ್ಸ್……!

ಮಲಯಾಳಂ ಸ್ಟಾರ್‍ ನಟ ಪೃಥ್ವಿರಾಜ್ ಸುಕುಮಾರನ್ ವಿಭಿನ್ನ ರೀತಿಯ ಸಿನೆಮಾಗಳ ಮೂಲಕ ಭಾರಿ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಇತ್ತೀಚಿಗೆ ತೆರೆಕಂಡ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಸಿನೆಮಾ ಸಲಾರ್‍ ನಲ್ಲಿ ಸಹ ನಟಿಸಿ ಮತಷ್ಟು ಫೇಂ ಪಡೆದುಕೊಂಡರು. ಜೊತೆಗೆ ಕೆಲವು ದಿನಗಳ ಹಿಂದೆಯಷ್ಟೆ ತೆರೆಕಂಡ ಆಡು ಜೀವಿತಂ ಸಿನೆಮಾದ ಮೂಲಕ ಭಾರಿ ಹಿಟ್ ಪಡೆದುಕೊಂಡರು. ಈ ಸಿನೆಮಾ ಕಳೆದ ಮಾ.29 ರಂದು ತೆಲುಗು ಹಾಗೂ ಮಲಯಾಳಂ ನಲ್ಲಿ ರಿಲೀಜ್ ಆಗಿದ್ದು, ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ಈ ಸಿನೆಮಾ ವನ್ನು ಬರೊಬ್ಬರಿ ಹತ್ತು ವರ್ಷಗಳ ಕಾಲ ಶೂಟಿಂಗ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಸದ್ಯ ಸೌತ್ ಸಿನಿರಂಗದಲ್ಲಿ ಟಾಪ್ ಹಿರೋ ಆಗಿರುವ ಪೃಥ್ವಿರಾಜ್ ಸುಕುಮಾರ್‍ ಬಾಲಿವುಡ್ ಅಂಗಳಕ್ಕೂ ಕಾಲಿಡುತ್ತಿದ್ದಾರೆ. ಬಾಲಿವುಡ್ ಸಿನೆಮಾದಲ್ಲಿ ಅವರು ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಬಾಲಿವುಡ್ ಸ್ಟಾರ್‍ ಹಿರೋ ಅಕ್ಷಯ್ ಕುಮಾರ್‍ ಹಾಗೂ ಟೈಗರ್‍ ಶ್ರಾಫ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಡೆ ಮಿಯಾನ್, ಚೋಟೆ ಮಿಯಾನ್ ಎಂಬ ಸಿನೆಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಏ.10 ರಂದು ಬಿಡುಗೆಯಾಗಲಿದ್ದು, ಸಿನೆಮಾದ ಪ್ರಮೋಷನ್ ಸಹ ಭರದಿಂದ ಸಾಗುತ್ತಿದೆ. ಇತ್ತೀಚಿಗೆ ಈ ಸಿನೆಮಾದ ಟ್ರೈಲರ್‍ ಸಹ ಬಿಡುಗಡೆಯಾಗಿದ್ದು, ಒಳ್ಳೆಯ ಸ್ಪಂದನೆ ಪಡೆದುಕೊಳ್ಳುತ್ತಿದೆ. ಈ ಸಿನೆಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿದ್ದಾರೆ ಎಂಬ ಪ್ರಚಾರ ಜೋರಾಗಿ ನಡೆಯುತ್ತಿದೆ. ಆದರೆ ಟ್ರೈಲರ್‍ ನಲ್ಲಿ ಆತನ ಮುಖ ಮಾತ್ರ ಕಾಣಿಸಿಲ್ಲ. ಈ ಸಿನೆಮಾದಲ್ಲಿ ಆತನ ಪಾತ್ರಕ್ಕಾಗಿ ಮೂರು ದೇಶಗಳು, ಆರು ನಗರಗಳಲ್ಲಿ ಸುತ್ತಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚಿಗೆ ಈ ಸಿನೆಮಾದ ಸ್ಕ್ರಿಪ್ಟ್ ಕೇಳಿದಾಗ ನಾನು ಗ್ರೀನ್ ಸ್ಕ್ರೀನ್ ಮೇಲೆ ಸುಮಾರು 50 ದಿನಗಳ ಸ್ಡುಡಿಯೋದಲ್ಲಿ ಚಿತ್ರೀಕರಿಸುತ್ತಾರೆ ಅಂದುಕೊಂಡಿದ್ದೆ. ಆದರೆ ನನ್ನ ಇಂಟ್ರಡಕ್ಷನ್ ಸೀಕ್ವೆನ್ಸ್ ಅನ್ನು ಸ್ಕಾಟ್ ಲ್ಯಾಂಡ್ ನಲ್ಲಿ ಗ್ಲೇನ್ ನೆವಿಸ್ ನಲ್ಲಿ ಚಿತ್ರೀಕರಿಸಲಾಗಿತ್ತು. ಆ ಸಮಯದಲ್ಲಿ ನಾನು ಬೇರೆ ಸಿನೆಮಾದ ಶೂಟಿಂಗ್ ನಿಮಿತ್ತ ಮನಾಲಿಯಲ್ಲಿದ್ದೆ. ಅಲ್ಲಿಂದ ಕುಲುಕಿಗೆ ಅಲ್ಲಿಂದ ಚಂಡೀಗಡ್ ಗೆ ವಿಮಾನದಲ್ಲಿ ಹೋಗಿ, ಅಲ್ಲಿಂದ ದೆಹಲಿಗೆ ಹೋದೆ. ಅಲ್ಲಿಂದ ಮುಂಬೈ ಗೆ ಬಳಿಕ ದುಬೈ ಗೆ ಕೊನೆಯದಾಗಿ ದುಬೈ ನಿಂದ ಎಡಿನ್ ಬರ್ಗ್ ಗೆ ಹೋದೆ. ಬಳಿಕ ಗ್ಲೇನ್ ನೆವಿಸ್ ಗೆ ಹೋದೆ. ಅಲ್ಲಿ ಸುಮಾರು ನಾಲ್ಕು ತಿಂಗಳುಗಳ ಕಾಲ ಶೂಟಿಂಗ್ ಮಾಡಲಾಯಿತು. ಬಳಿಕ ನಾನು ಮನಾಲಿಗೆ ಈ ಹಿಂದೆ ಆಗುತ್ತಿದ್ದ ಶೂಟಿಂಗ್ ನಲ್ಲಿ ಭಾಗಿಯಾದೆ ಎಂದು ಹೇಳಿದ್ದಾರೆ. ಸದ್ಯ ಪೃಥ್ವಿರಾಜ್ ಹಂಚಿಕೊಂಡ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

Most Popular

To Top