ಮಲಯಾಳಂ ಮೂಲದ ನಟಿ ಅಮಲಾಪಾಲ್ ವಿಭಿನ್ನವಾದ ನಟಿಯೆಂದೇ ಕರೆಯಬಹುದು. ಸಿನೆಮಾಗಳ ಜೊತೆಗೆ ಆಕೆ ವೈಯುಕ್ತಿಕ ಕಾರಣಗಳಿಂದಲೂ ಸಹ ಸುದ್ದಿಯಾಗುತ್ತಿರುತ್ತಾರೆ. ಜೊತೆಗೆ ಕೆಲವೊಂದು ವಿವಾದಗಳಿಗೂ ಸಹ ಗುರಿಯಾಗುತ್ತಿರುತ್ತಾರೆ. ಇನ್ನೂ ಆಕೆ ಅನೇಕ ವರ್ಷಗಳ ಹಿಂದೆ ವಿಚ್ಚೇದನ ಪಡೆದುಕೊಂಡರು. ಇದೀಗ ಎರಡನೇ ಮದುವೆಗೆ ಸಿದ್ದವಾಗುತ್ತಿದ್ದಾರಂತೆ ಅಮಲಾಪಾಲ್. ಆದರೆ ತನ್ನನ್ನು ಮದುವೆಯಾಗುವ ವ್ಯಕ್ತಿಗೆ ಕೆಲವೊಂದು ಕಂಡಿಷನ್ಸ್ ಅಪ್ಲೈ ಅಂತಿದ್ದಾರಂತೆ. ಅಷ್ಟಕ್ಕೂ ಅಮಲಾಪಾಲ್ ಎರಡನೇ ಮದುವೆಯ ಬಗ್ಗೆ ಹೇಳಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,
ನಟಿ ಅಮಾಲಾಪಾಲ್ ಕೆರಿಯರ್ ವಿಭಿನ್ನವಾದ ಸಿನೆಮಾಗಳ ಮೂಲಕ ಸಾಗುತ್ತಿದೆ. ಗ್ಲಾಮರ್ ಪಾತ್ರಗಳುಳ್ಳ ಸಿನೆಮಾಗಳಿಂದ ದೂರವುಳಿದು ಕಥೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಇನ್ನೂ ಈ ಹಿಂದೆಗಿಂತ ಪ್ರಸ್ತುತ ಅಮಲಾಪಾಲ್ ಕ್ರೇಜ್ ಏರಿದೆ ಎಂದೇ ಹೇಳಬಹುದು. ಇದೀಗ ಮತ್ತೊಮ್ಮೆ ಬೋಲ್ಡ್ ಪಾತ್ರದ ಸಿನೆಮಾದಲ್ಲಿ ನಟಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಅಭಿನಯದ ಆಡು ಜೀವಿತಂ ಎಂಬ ಸಿನೆಮಾದಲ್ಲಿ ಅಮಲಾಪಾಲ್ ತುಂಬಾನೆ ಬೋಲ್ಡ್ ಆಗಿ ನಟಿಸಿದ್ದಾರೆ. ವಿಭಿನ್ನವಾದ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ಅಮಲಾಪಾಲ್ ವೈಯುಕ್ತಿಕ ಜೀವನದ ಮೂಲಕ ಸಹ ಸುದ್ದಿಯಾಗಿದ್ದಾರೆ. ಈ ಹಿಂದೆ ಕಾಲಿವುಡ್ ನಿರ್ದೇಶಕ ವಿಜಯ್ ಎಂಬಾತನನ್ನು ಪ್ರೀತಿಸಿ ಮದುವೆಯಾದರು. ಮದುವೆಯಾದ ಕೆಲವೇ ದಿನಗಳಲ್ಲಿ ಅವರಿಬ್ಬರ ನಡುವೆ ವಿಬೇದಗಳು ಹುಟ್ಟಿ ವಿಚ್ಚೇದನ ಪಡೆದುಕೊಂಡರು. ವಿಚ್ಚೇದನ ಪಡೆದುಕೊಂಡ ಸುಮಾರು ದಿನಗಳ ಬಳಿಕ ಇದೀಗ ಅಮಲಾಪಾಲ್ ಮತ್ತೆ ಮದುವೆಯಾಗಲಿದ್ದಾರೆ ಎಂಬ ರೂಮರ್ ಗಳು ಕೇಳಿಬರುತ್ತಿವೆ.
ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರುವ ಅಮಲಾಪಾಲ್ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಮತ್ತೆ ಮದುವೆಯಾಗುವ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನಾನು ಮತ್ತೆ ಮದುವೆ ಮಾಡಿಕೊಳ್ಳುತ್ತೇನೆ. ಆದರೆ ನಾನು ಮದುವೆಯಾಗುವ ವ್ಯಕ್ತಿ ಬೆಡ್ ರೂಂ ನಲ್ಲಿ ಸಿಂಹದಂತಿರಬೇಕು. ಮಾಂಸ ಖಂಡಗಳು ತಿರುಗಿದ ವ್ಯಕ್ತಿಯಾಗಿರಬೇಕು. ಜೊತೆಗೆ ಪ್ರೀತಿ, ದಯೆ, ಕರುಣೆ ಮುಖ್ಯವಾಗಿರಬೇಕು. ಸದಾ ಲವಲವಿಕೆಯಿಂದ ಇರಬೇಕು. ಅಂತಹ ವ್ಯಕ್ತಿ ಸಿಕ್ಕರೇ ಮತ್ತೆ ಮದುವೆಯಾಗುತ್ತೇನೆ. ನನ್ನ ಮದುವೆಯಾಗುವ ವ್ಯಕ್ತಿಯ ವಿಚಾರದಲ್ಲಿ ನನ್ನ ತಂದೆ ನನಗೆ ಆದರ್ಶ, ನನ್ನ ತಂದೆಗೆ ಬೇರೆಯವರ ಮೇಲೆ ದಯೆ, ಪ್ರೀತಿ, ಕರುಣೆ ತುಂಬಾನೆ ಇದೆ. ಆದ್ದರಿಂದ ನಮ್ಮ ತಂದೆಯಂತೆ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿ ಸಿಕ್ಕರೇ ಎರಡನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಅಮಲಾಪಾಲ್ ಎರಡನೇ ಮದುವೆಯ ಬಗ್ಗೆ ವಿಚಾರಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಅಮಾಲಾಪಾಲ್ ವೆಕೇಷನ್ ನಲ್ಲಿದ್ದು, ಅಲ್ಲಿನ ಸುಂದರ ತಾಣಗಳಲ್ಲಿ ವಿಹರಿಸುತ್ತಾ, ಬೋಲ್ಡ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
