ರಾಹುಲ್ ಗಾಂಧಿ ಮಂಗಳ ಗ್ರಹದಿಂದ ಬಂದಂತೆ ವಿಚಿತ್ರವಾಗಿದ್ದಾರೆ ಎಂದ ಕಾಂಟ್ರವರ್ಸಿ ಕ್ವೀನ್ ಕಂಗನಾ…..!

Follow Us :

ಬಾಲಿವುಡ್ ಸಿನಿರಂಗದ ಸ್ಟಾರ್‍ ನಟಿ ಕಂಗನಾ ಯಾವುದೇ ವಿಚಾರವಿದ್ದರೂ ಸಹ ನೇರವಾಗಿ ಮಾತನಾಡುವಂತಹ ಸ್ವಭಾವ ಹೊಂದಿದ್ದಾರೆ. ಈ ಕಾರಣದಿಂದ ಆಕೆ ಅನೇಕ ವಿವಾದಗಳಿಗೆ ಗುರಿಯಾಗುತ್ತಿರುತ್ತಾರೆ. ಬಾಲಿವುಡ್ ಸ್ಟಾರ್‍ ನಟರೂ ಸೇರಿದಂತೆ ಅನೇಕ ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇದೀಗ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ಟೀಕೆ ಮಾಡಿದ್ದು, ರಾಹುಲ್ ಗಾಂಧಿ ಒಂದು ತರಹ ಮಂಗಳ ಗ್ರಹದಿಂದ ಬಂದಂತೆ ವಿಚಿತ್ರವಾಗಿದ್ದಾರೆ ಎಂದು ಹೇಳಿದ್ದಾರೆ.

ನಟಿ ಕಂಗನಾ ಇತ್ತೀಚಿಗಷ್ಟೆ ಅಧಿಕೃತವಾಗಿ ರಾಜಕೀಯಕ್ಕೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಪಕ್ಷ್ಕಕೆ ಆಕೆ ಸೇರ್ಪಡೆಯಾಗಿದ್ದು, ಕಾಂಗ್ರೇಸ್ ಪಕ್ಷದ ವಿರುದ್ದ ಟೀಕೆ ಮಾಡಲು ಶುರು ಮಾಡಿದ್ದಾರೆ. ಬಾಲಿವುಡ್ ನಲ್ಲಿರುವ ನೆಪೋಟಿಸಂ ಬಗ್ಗೆ ಫೈರ್‍ ಆಗುತ್ತಿದ್ದ ಕಂಗನಾ ಇದೀಗ ಕಾಂಗ್ರೇಸ್ ಪಕ್ಷದಲ್ಲಿರುವ ನೆಪೋಟಿಸಂ ಬಗ್ಗೆ ಗುಡುಗಿದ್ದಾರೆ. ರಾಹುಲ್ ಗಾಂಧಿ ನೆಪೋಟಿಸಂ ಮಗು ಎಂದು ಕಂಗನಾ ಹೇಳಿದ್ದಾರೆ. ಕಂಗನಾ ರಾಣಾವತ್ ರವರಿಗೆ ನೆಪೋಟಿಸಂ ಎಂದರೇ ಆಗೋದೇ ಇಲ್ಲ. ಅವಕಾಶಗಳು ವಂಶ ಪಾರಂಪರ್ಯಯವಾಗಿ ಸಿಗುವುದನ್ನು ಕಂಗನಾ ವಿರೋಧಿಸುತ್ತಾ ಬಂದಿದ್ದಾರೆ. ಇದೇ ವಿಚಾರವನ್ನು ಆಕೆ ಖ್ಯಾತ ಖಾಸಗಿ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಕಂಗನಾ ನನ್ನ ಪಾಲಿಗೆ ಕಾಂಗ್ರೇಸ್ ಪಕ್ಷ ಯಾವಾಗೂ ಕೆಟ್ಟ ಪಕ್ಷವಾಗಿತ್ತು. ಈ ಪಕ್ಷದಲ್ಲಿರುವ ನೆಪೋಟಿಸಂ ನನಗೆ ಇಷ್ಟವಾಗೋಲ್ಲ. ಏಕೆಂದರೇ ನೆಪೋಟಿಸಂ ಕಾರಣದಿಂದಲೇ ನಾನು ಬಾಲಿವುಡ್ ನಲ್ಲಿ ಟಾರ್ಗೆಟ್ ಆಗಿದ್ದೆ. ಗುಂಪುಗಾರಿಕೆ, ನೆಪೋಟಿಸಂ ಎಂಬುದು ಪಾರಂಪರ್ಯವಾಗಿರುವ ರಾಜಕೀಯ. ಈ ಕಾರಣದಿಂದ ನನಗೆ ಕಾಂಗ್ರೇಸ್ ಪಕ್ಷ ಇಷ್ಟವಾಗೊಲ್ಲ. ಸೋನಿಯಾಗಾಂಧಿ ರವರ ಮಕ್ಕಳಾದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿಯವರ ಬಗ್ಗೆ ಒಂದು ಪದದಲ್ಲಿ ಉತ್ತರಿಸಿ ಎಂದು ಆಂಕರ್‍ ಕೇಳಿದಕ್ಕೆ ಕಂಗನಾ ನೇರವಾಗಿ ನೆಪೋಟಿಸಂ ಮಕ್ಕಳು ಎಂದಿದ್ದಾರೆ. ಜೊತೆಗೆ ಅವರು ಮಂಗಳ ಗ್ರಹದಿಂದ ಬಂದಿದ್ದಾರೆಯೇ ಎಂಬಂತೆ ವಿಚಿತ್ರವಾಗಿದ್ದಾರ ಎಂದು ಟೀಕಿಸಿದ್ದಾರೆ.

ಇನ್ನೂ ಕಂಗನಾ ಹಂಚಿಕೊಂಡ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಕುರಿತು ರಾಹುಲ್ ಅಥವಾ ಪ್ರಿಯಾಂಕಾ ಗಾಂಧಿಯವರು ಯಾವ ರೀತಿಯಲ್ಲಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಕಂಗನಾಗೆ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ನೀಡಿದ್ದು, ಅವರು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.