Film News

ಮಾನಸಿಕವಾಗಿ ತುಂಬಾ ನೊಂದಿದ್ದೇನೆ, ನನ್ನನ್ನು ಗಾಢವಾಗಿ ಪ್ರೀತಿಸುವ ವ್ಯಕ್ತಿ ಬೇಕು ಎಂದ ಗೋವಾ ಬ್ಯೂಟಿ ಇಲಿಯಾನಾ……!

ತೆಲುಗಿನ ದೇವದಾಸು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಇಲಿಯಾನ ಮೊದಲನೇ ಸಿನೆಮಾದ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಬಳಿಕ ಮಹೇಶ್ ಬಾಬು ರವರ ಪೋಕಿರಿ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದರು. ಬಳಿಕ ಸ್ಟಾರ್‍ ನಟಿಯಾಗಿ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡರು. ಕೆರಿಯರ್‍ ಪೀಕ್ ಲೆವೆಲ್ ನಲ್ಲಿರುವಾಗ ಆಕೆ ತೆಗೆದುಕೊಂಡ ಕೆಲವೊಂದು ತಪ್ಪು ನಿರ್ಣಯಗಳ ಕಾರಣದಿಂದ ಆಕೆಯ ಕೆರಿಯರ್‍ ಸಂಪೂರ್ಣವಾಗಿ ಫೇಡ್ ಔಟ್ ಆಗಿತ್ತು. ಆದರೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಕಾಮೆಂಟ್ ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ.

ಬಿಕಿನಿ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡ ಇಲಿಯಾನಾ  ಸ್ಟಾರ್‍ ನಟರಿಂದ ಯಂಗ್ ಹಿರೋಗಳ ಜೊತೆಗೆ ನಟಿಸಿದ್ದರು. ಆದರೆ ತೆಗೆದುಕೊಂಡ ಕೆಲವೊಂದು ತಪ್ಪು ನಿರ್ಣಯಗಳ ಕಾರಣದಿಂದ ಆಕೆ ಸಿನಿರಂಗದಿಂದ ದೂರ ಉಳಿಯಬೇಕಾಯಿತು. ಬಾಲಿವುಡ್ ಸಿನೆಮಾಗಳ ಮೇಲಿನ ಮೋಜಿನಿಂದ ಆಕೆ ಟಾಲಿವುಡ್ ಬಿಟ್ಟು ಬಾಲಿವುಡ್ ಗೆ ಹಾರಿದರು. ಆದರೆ ಬಾಲಿವುಡ್ ನಲ್ಲಿ ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಆಕೆ ಕೆಲವೊಂದು ವೈಯುಕ್ತಿಕ ಕಾರಣಗಳಿಂದ ಸಿನೆಮಾಗಳಿಂದ ದೂರವೇ ಉಳಿದರು. ಇದೇ ಸಮಯದಲ್ಲಿ ಆಕೆ ಆಸ್ಟ್ರೇಲಿಯನ್ ಪೊಟೋಗ್ರಾಫರ್‍ ಜೊತೆಗೆ ಪ್ರೇಮಾಯಣ ನಡೆಸಿ ಬಳಿಕ ಅವರ ನಡುವೆ ಬ್ರೇಕಪ್ ಆದ ಕಾರಣದಿಂದ ಆಕೆ ಡಿಪ್ರೆಷನ್ ಗೆ ಸಹ ಹೋಗಿದ್ದರು. ಬಳಿಕ ಡಿಪ್ರೆಷನ್ ನಿಂದ ಹೊರಬಂದ ಬಳಿಕ ಬೇರೆ ವ್ಯಕ್ತಿಯನ್ನು ಪ್ರೀತಿಸಿ ಮದುಗೂ ಮುಂಚೆ ಮಗುವಿಗೆ ಜನ್ಮ ಕೊಟ್ಟರು. ಸದ್ಯ ಮಗ ಹಾಗೂ ತನ್ನ ಪತಿಯೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿರುತ್ತಾರೆ.

ಇನ್ನೂ ನಟಿ ಇಲಿಯಾನಾ ಆಗಾಗ ಸಣ್ಣ ಪುಟ್ಟ ಸಿನೆಮಾಗಳಲ್ಲಿ ನಟಿಸುತ್ತಿರುತ್ತಾರೆ. ಇತ್ತೀಚಿಗೆ ಆಕೆ ಅಭಿನಯದ ದೊ ಔರ್‍ ದೋ ಪ್ಯಾರ್‍ ಸಿನೆಮಾಗೆ ಒಳ್ಳೆಯ ರೆಸ್ಪಾನ್ಸ್ ಬಂದಿತ್ತು. ಈ ಸಿನೆಮಾ ಪ್ರಚಾರ ಕಾರ್ಯಕ್ರಮದ ನಿಮಿತ್ತ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ಆಕೆ ನೀಡಿದ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತವೆ. ಈ ಸಿನೆಮಾದಲ್ಲಿ ಆಕೆ ನೋರಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತನ್ನ ಈ ಪಾತ್ರ ಹಾಗೂ ಆಕೆಯ ರಿಯಲ್ ಜೀವನಕ್ಕೂ ತುಂಬಾ ಹತ್ತಿರ ಇರುತ್ತದೆಯಂತೆ. ನೋರಾ ಪಾತ್ರದಂತೆ ನಾನು ಸಹ ತುಂಬಾ ಸೆನ್ಸಿಟೀವ್. ನನ್ನನ್ನು ಗಾಢವಾಗಿ ಪ್ರೀತಿಸುವ ವ್ಯಕ್ತಿ ಬೇಕು ಎಂದು ಬಯಸಿದ್ದೆ. ನನ್ನ ಪ್ರೀತಿಸುವಂತಹ ವ್ಯಕ್ತಿಯನ್ನು ಪಬ್ಲಕ್ ಆಗಿ ಹಗ್ ಮಾಡುವುದು, ಮುತ್ತಿಡುವುದನ್ನು ಮಾಡಲು ನಾನು ಹಿಂದೆ ಮುಂದೆ ನೋಡಲ್ಲ ಎಂದು ಹೇಳಿದ್ದಾರೆ. ಇನ್ನೂ ಈ ಸಿನೆಮಾದ ಕಥೆಯನ್ನು ಹೇಳಿದ ಕೂಡಲೇ ಒಪ್ಪಿಕೊಂಡೆ. ಅದಕ್ಕೆ ಕಾರಣ ಈ ಪಾತ್ರ ನನ್ನ ರಿಯಲ್ ಲೈಫ್ ಗೆ ಹತ್ತಿರವಾಗಿದೆ.

ಇನ್ನೂ ನನ್ನ ಪಾತ್ರಕ್ಕಾಗಿ ಶಾರೀರಕವಾಗಿ ಜಿಮ್ ನಲ್ಲಿ ವರ್ಕೌಟ್ ಮಾಡಬೇಕು ಎಂದು ಹೇಳುತ್ತಾರೆ ಎಂದು ಭಯಪಟ್ಟಿದ್ದೆ. ಏಕೆಂದರೇ ನಾನು ಈಗ ಮಾನಸಿಕವಾಗಿ ತುಂಬಾ ನೊಂದಿದ್ದೇನೆ. ಆದ್ದರಿಂದ ವರ್ಕೌಟ್ಸ್ ಮಾಡಿ ನನ್ನ ದೇಹವನ್ನು ಬದಲಿಸಕೊಳ್ಳು ಸಾಮರ್ಥ್ಯ ನನಗಿಲ್ಲ. ತೂಕ ಕಡಿಮೆಯಾಗೋದು ನನಗೆ ಆಗೊಲ್ಲ ಎಂದು ನಿರ್ದೇಶಕಿ ಶಿರೀಷಗೆ ಹೇಳಿಬಿಟ್ಟೆ ಎಂದು ಹೇಳಿದ್ದಾರೆ. ಸದ್ಯ ಇಲಿಯಾನಾ ಪತಿ ಹಾಗೂ ಮಗನೊಂದಿಗೆ ಸಂತೋಷವಾಗಿದ್ದಾರೆ ಈ ಸಮಯದಲ್ಲಿ ಆಕೆ ಮಾನಸಿಕವಾಗಿ ಕುಗ್ಗಿದ್ದೇನೆ ಎಂದು ಹೇಳಿಕೆ ನೀಡಿದ್ದು ಏಕೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

Most Popular

To Top