ಇನ್ಸ್ಟಾಗ್ರಾಂ ನಲ್ಲಿ ಹುಟ್ಟಿದ ಲವ್, 80 ವರ್ಷ ವೃದ್ದನನ್ನು ವರಿಸಿದ 34ರ ಮಹಿಳೆ….!

Follow Us :

ಸದ್ಯ ಸೋಷಿಯಲ್ ಮಿಡಿಯಾ ಜಮಾನಾ ಎಂದೇ ಹೇಳಬಹುದು. ಸೋಷಿಯಲ್ ಮಿಡಿಯಾ ಬಳಸದಂತ ವ್ಯಕ್ತಿಗಳು ಇರೋದು ತುಂಬಾನೆ ಕಡಿಮೆ ಎಂದು ಹೇಳಬಹುದು. ಸೋಷಿಯಲ್ ಮಿಡಿಯಾ ಮೂಲಕವೇ ಅನೇಕ ಲವ್ ಸ್ಟೋರಿಗಳು ಸಹ ನಡೆದಿದೆ. ಕೆಲವು ಲವ್ ಸ್ಟೋರಿಗಳು ಸಕ್ಸಸ್ ಆಗಿ ಮದುವೆಯವರೆಗೂ ಹೋಗಿದ್ದರೇ, ಮತ್ತೆ ಕೆಲವು ಸ್ಟೋರಿಗಳು ಮೋಸದಿಂದ ಕೊನೆಯಾಗಿದೆ ಎನ್ನಲಾಗುತ್ತಿದೆ. ಇದೀಗ ಇನ್ಸ್ಟಾದಲ್ಲಿ ಹುಟ್ಟಿಕೊಂಡ ಲವ್ ಮದುವೆಯವರೆಗೂ ತಲುಪಿದೆ. ಅಷ್ಟಕ್ಕೂ ಈ ಇನ್ಸ್ಟಾ ಲವ್ ಸ್ಟೋರಿ ಬಗ್ಗೆ ತಿಳಿಯೋಕೆ ಮುಂದೆ ಓದಿ…

ಇನ್ಸ್ಟಾಗ್ರಾಂ ಬಳಸುತ್ತಿದ್ದ 80 ವರ್ಷದ ಮಧ್ಯಪ್ರದೇಶದ ಬಲುರಾಮ್ ಹಾಗೂ 34 ವರ್ಷದ ಮಹಾರಾಷ್ಟ್ರದ ಶೀಲಾ ಇಬ್ಬರೂ ಮದುವೆಯಾಗಿದ್ದಾರೆ. ಇನ್ಸ್ಟಾ ಮೂಲಕ ಪರಿಚಯ ಮಾಡಿಕೊಂಡ ಇಬ್ಬರೂ ಪ್ರೀತಿಸಿಕೊಂಡಿದ್ದು ಮದುವೆಯಾಗಿದ್ದಾರೆ. 80 ರ ವಯಸ್ಸಿನಲ್ಲೂ ಬಲುರಾಮ್ ಇನ್ಸ್ಟಾಗ್ರಾಂನಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಬಲುರಾಮ್ ನ ಸ್ನೇಹಿತ ವಿಷ್ಣು ಗುಜ್ಜರ್‍ ಎಂಬಾತನ ಸಹಾಯದಿಂದ ಇನ್ಸ್ಟಾ ದಲ್ಲಿ ಕಾಮಿಡಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದರು. ಆತನ ರೀಲ್ಸ್ ನೋಡಿದ ಶೀಲಾ ಆತನಿಗೆ ಸಂದೇಶ ಕಳುಹಿಸಲು ಆರಂಭಿಸಿದ್ದರು. ಬಳಿಕ ಹಂತ ಹಂತವಾಗಿ ಇಬ್ಬರಲ್ಲೂ ಪ್ರೀತಿ ಚಿಗುರಿದೆ. ಬಳಿಕ ಮದುವೆಯಾಗಲು ನಿರ್ಧಾರ ಮಾಡಿ ಮದುವೆಯಾಗಿದ್ದಾರೆ. ಅವರ ಲವ್ ಸ್ಟೋರಿ ಇದೀಗ ಸೊಷಿಯಲ್ ಮಿಡಿಯಾ ತುಂಬಾ ಹರಿದಾಡುತ್ತಿದೆ.

ಇನ್ನೂ ಬಲುರಾಮ್ ಗೆ ಒಬ್ಬ ಪುತರ ಹಾಗೂ ಮೂರು ಮಂದಿ ಪುತ್ರಿಯರಿದ್ದರು. ಎಲ್ಲಾ ಮಕ್ಕಳಿಗೂ ಮದುವೆಯಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಬಲುರಾಮ್ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿಯ ಮರಣದ ಬಳಿಕ ಬಲುರಾಮ್ ಖಿನ್ನತೆಗೆ ಗುರಿಯಾಗಿದ್ದರಂತೆ. ಬಳಿಕ ಆತನ ಸ್ನೇಹಿತ ವಿಷ್ಣು ಗುಜ್ಜರ್‍ ಎಂಬ ವ್ಯಕ್ತಿಯ ಸಹಾಯದಿಂದ ಹೊಟೆಲ್ ಒಂದರಲ್ಲಿ ಕೆಲಸ ಮಾಡಲು ಶುರು ಮಾಡಿದ್ದ. ಬಳಿಕ ಇನ್ಸ್ಟಾದಲ್ಲೂ ಸಕ್ರೀಯರಾಗಿ ಕಾಮಿಡಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಈ ವಿಡಿಯೋಗಳನ್ನು ನೋಡಿದ ಶೀಲಾಗೆ ಬಲುರಾಮ್ ಜೊತೆಗೆ ಪ್ರೇಮಾಂಕುರವಾಗಿದೆ. ಕಳೆದ ಏ.1 ರಂದು ಈ ಜೋಡಿ ಹಿಂದೂ ಪದ್ದತಿಯಂತೆ ಮದುವೆಯಾಗಿದ್ದಾರೆ.