News

ಶ್ರೀಕೃಷ್ಣನ ವಿಗ್ರಹದೊಂದಿಗೆ ಮದುವೆಯಾದ 23 ವರ್ಷದ ಯುವತಿ, ವೈರಲ್ ಆದ ಪೊಟೋಸ್….!

ನಮ್ಮ ಸುತ್ತಮುತ್ತಲಿನಲ್ಲಿ ಆಗಾಗ ಕೆಲವೊಂದು ವಿಚಿತ್ರ ಅಥವಾ ವಿಭಿನ್ನ ಘಟನೆಗಳು ನಡೆಯುತ್ತಿರುವುದನ್ನು ಕಂಡಿರುತ್ತೇವೆ. ಅದರಲ್ಲೂ ಇತ್ತೀಚಿಗೆ ಸೋಷಿಯಲ್ ಮಿಡಿಯಾದ ಪುಣ್ಯ ಎಂಬಂತೆ ಅಂತಹ ಘಟನೆಗಳು ನಡೆದರೇ ಗಂಟೆಗಳಲ್ಲೇ ವಿಶ್ವದಾದ್ಯಂತ ಪ್ರಚಾರ ಆಗುತ್ತಿರುತ್ತದೆ. ಇದೀಗ ಶ್ರೀಕೃಷ್ಣನ ಮೂರ್ತಿಯನ್ನು 23 ರ ಯುವತಿಯೊಬ್ಬಳು ವಿವಾಹವಾಗಿದ್ದಾಳೆ. ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‍ ನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಮಧ್ಯಪ್ರದೇಶದ ಗ್ವಾಲಿಯರ್‍ ನ ನ್ಯೂ ಬ್ರಜ್ ವಿಹಾರ್‍ ಕಾಲೋನಿಯ ರಾಮ್ ಪ್ರತಾಪ್ ಪರಿಹಾರ್‍ ಹಾಗೂ ಮೀರಾ ಪರಿಹಾರ್‍  ದಂಪತಿಯ ಶಿವಾನಿ ಪರಿಹಾರ್‍ (23) ಶ್ರೀಕೃಷ್ಣನ ಮೂರ್ತಿಯೊಂದಿಗೆ ವಿವಾಹವಾಗಿದ್ದಾರೆ. ಬಾಲ್ಯದಿಂದಲೂ ಶ್ರೀಕೃಷ್ಣನನ್ನು ಆರಾಧಿಸುತ್ತಾ ಬೆಳೆದಿದ್ದಾಳೆ. ಆಕೆಗೆ ಕೃಷ್ಣನ ಮೇಲಿರುವ ಪ್ರೀತಿಯನ್ನು ಕಂಡು ಪ್ರಾರಂಭದಲ್ಲಿ ಪೋಷಕರು ತಮ್ಮ ಮಗಳಿಗೆ ಕೃಷ್ಣನ ಮೇಲಿರುವ ಪ್ರೀತಿಯನ್ನು ಕಂಡು ಪ್ರಾರಂಭದಲ್ಲಿ ಈ ಮದುವೆಗೆ ಒಪ್ಪಿರಲಿಲ್ಲ ಎನ್ನಲಾಗಿದೆ. ಆದರೆ ಪಟ್ಟು ಬಿಡದೇ ಎಲ್ಲರನ್ನೂ ಒಪ್ಪಿಸಿ ಬಂಧುಗಳ ಸಮ್ಮುಖದಲ್ಲಿ ವೈಭವದಿಂದ ಶ್ರೀಕೃಷ್ಣನ ಮೂರ್ತಿಯನ್ನು ವಿವಾಹವಾಗಿದ್ದಾರೆ. ಬಾಲ್ಯದಿಂದಲೂ ಶ್ರೀಕೃಷ್ಣನನ್ನು ಆರಾಧಿಸುತ್ತಾ ಬೆಳೆದ ಯುವತಿಯೊಬ್ಬಳು ಇದೀಗ ಶ್ರೀ ಕೃಷ್ಣನ ಮೂರ್ತಿಯನ್ನೇ ವಿವಾಹವಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಈಕೆಯ ಕೃಷ್ಣನ ಮೇಲಿರುವ ಪ್ರೀತಿಯನ್ನು ಕಂಡು ಪ್ರಾರಂಭದಲ್ಲಿ ಪೋಷಕರು ಮತ್ತು ಸಂಬಂಧಿಕರು ಮದುವೆಗೆ ಒಪ್ಪಿಕೊಳ್ಳಲಿಲ್ಲ. ಕೊನೆಗೆ ಎಲ್ಲರನ್ನೂ ಒಪ್ಪಿಸಿ ಬಂಧುಗಳ ಸಮ್ಮುಖದಲ್ಲಿ ವೈಭವದಿಂದ ಶ್ರೀಕೃಷ್ಣನ ಮೂರ್ತಿಯನ್ನು ವಿವಾಹವಾಗಿದ್ದಾಳೆ.

ಇನ್ನೂ ಮೊದಲಿಗೆ ಪೋಷಕರು ಈ ಮದುವೆ ಒಪ್ಪಿಕೊಂಡಿರಲಿಲ್ಲ. ಆದರೆ ಮಗಳು ಹಠ ಮಾಡಿ ಎಲ್ಲರನ್ನೂ ಒಪ್ಪಿಸಿ ಕಳೆದ ಏಪ್ರಿಲ್ 18 ರಂದು ಶ್ರೀಕೃಷ್ಣನ ಮೂರ್ತಿಯೊಂದಿಗೆ ಸಂಪ್ರದಾಯಿಕ ರೀತಿಯಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಏ.15 ರಿಂದಲೇ ಶಿವಾನಿ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿತ್ತು. ಎಲ್ಲಾ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಈ ಮದುವೆ ಅದ್ದೂರಿಯಾಗಿ ನಡೆದಿದೆ. ಇಂತಹ ಅಪರೂಪದ ವಿವಾಹ ಸಮಾರಂಭವನ್ನು ನೋಡಲು ನೂರಾರು ಮಂದಿ ಈ ಮದುವೆಗೆ ಹಾಜರಾಗಿದ್ದರು.

Most Popular

To Top