ಕರ್ನಾಟಕದಲ್ಲಿ ಮೋದಿ ಅಬ್ಬರ, ಬಾಂಬ್ ಸ್ಟೋಟ, ನೇಹಾ ಹತ್ಯೆ ಉಲ್ಲಂಘಿಸಿ ಕಾಂಗ್ರೇಸ್ ಗೆ ಟಾಂಗ್ ಕೊಟ್ಟ ಮೋದಿ…..!

Follow Us :

ಲೋಕಸಭಾ ಚುನಾವಣೆ 2024 ರ ನಿಮಿತ್ತ ಕರ್ನಾಟಕದಲ್ಲಿ ಮೋದಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ಆಯೋಜಿಸಿದ್ದ ಬೃಹತ್ ಸಮಾವೇಶಗಳಲ್ಲಿ ಮೋದಿ ಕಾಂಗ್ರೇಸ್ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ನಡೆದಂತಹ ಕೆಲವೊಂದು ಘಟನೆಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ. ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಯುತ್ತಿದೆ, ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಪೋಟ ಆಗುತ್ತಿದೆ. ಭಜನೆ ಮಾಡಿದರೂ ಹಲ್ಲೆಯಾಗುತ್ತದೆ, ಇದು ಸಾಮಾನ್ಯ ಘಟನೆಯಲ್ಲ, ನಾನು ಕರ್ನಾಟಕ ಜನತೆಯನ್ನು ಆಗ್ರಹಿಸುತ್ತೇನೆ,  ಕಾಂಗ್ರೇಸ್ ನಿಂದ ನೀವು ಎಚ್ಚರಿಕೆಯಿಂದ ಇರಬೇಕೆಂದು ಮೋದಿ ನುಡಿದಿದ್ದಾರೆ.

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ, ಜೈ ಶ್ರೀರಾಮ್ ಹಾಡು ಹಾಕಿದ್ದಕ್ಕೆ ಹಲ್ಲೆ, ರಾಮನವಮಿ ದಿನ ರಾಮನ ಭಾವುಟ ಹಾಕಿದ್ದಕ್ಕಾಗಿ ಹಿಂದೂ ಯುವಕರ ಮೇಲೆ ಹಲ್ಲೆ, ನೇಹಾ ಕೊಲೆ ಪ್ರಕರಣಗಳನ್ನು ಮೋದಿ ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ. ಅಂತಹ ಘಟನೆಗಳು ಮರುಕಳಿಸುತ್ತಿರುವುದು ಕಾಂಗ್ರೇಸ್ ನ ಕುಮ್ಮಕ್ಕಿನಿಂದಲೇ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಕಾಂಗ್ರೇಸ್ ನಿಂದ ಜನರು ಎಚ್ಚರಿಕೆ ವಹಿಸಬೇಕು.  ನಿಮ್ಮ ಕನಸು ನನ್ನ ಸಂಕಲ್ಪವಾಗಿದೆ. ನನ್ನ ಕಣ ಕಣ ನಿಮಗಾಗಿ ಹಾಗೂ ದೇಶಕ್ಕಾಗಿ ಮಿಡಿಯುತ್ತಿದೆ. ದಿನದ ಪ್ರತಿ ಕ್ಷಣ2047 ಕನಸಿಗಾಗಿ ಶ್ರಮವಹಿಸುತ್ತೇನೆ.  ಈ ಬಾರಿ ಬಿಜೆಪಿ ಪಕ್ಷಕ್ಕೆ ಅತೀ ಹೆಚ್ಚಿನ ಮತಗಳನ್ನು ನೀಡಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಸುಭದ್ರ ಹಾಗೂ ಸುರಕ್ಷಿತ ಜೀವನಕ್ಕಾಗಿ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.

ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರ 6 ಸಾವಿರ, ರಾಜ್ಯ ಸರ್ಕಾರ 4 ಸಾವಿರ ನೀಡುತ್ತಿತ್ತು. ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಅದನ್ನು ತಡೆಹಿಡಿದು ರೈತರಿಗೆ ಅನ್ಯಾಯ ಮಾಡಿದೆ. ಕಾಂಗ್ರೇಸ್ ಜನಧನ್ ಖಾತೆ ವಿರೋಧಿಸಿತ್ತು, ಡಿಜಿಟಲ್ ಪೇಮೆಂಟ್ ವಿರೋಧಿಸಿತ್ತು. ಕೋವಿಡ್ ಸಮಯದಲ್ಲಿ ಬೆಂಗಳೂರಿನ ಐಟಿ ಕ್ಷೇತ್ರ ವಿಶ್ವಕ್ಕೆ ನೆರವು ನೀಡಿತ್ತು. ಆದರೆ ದೇಶದಲ್ಲಿ ತಯಾರಾದ ಮೇಡ್ ಇನ್ ಇಂಡಿಯಾ ಕೊರೋನಾ ವ್ಯಾಕ್ಸಿನ್ ಸಹ ವಿರೋಧಿಸಿತ್ತು. ಭಾರತವನ್ನು ಫಾರ್ಮಾ ಹಬ್, ಎಲೆಕ್ಟ್ರಿಕ್ ವಾಹನ ಹಬ್, ಸೆಮಿಕಂಡಕ್ಟರ್‍ ಹಬ್, ಗ್ರೀನ್ ಹಬ್ ಮಾಡುತ್ತೇವೆ. ಆ ಮೂಲಕ ಭಾರತ ಗ್ಲೋಬಲ್ ಎಕಾನಮಿಕ್ ಹಬ್ ಆಗಲಿದೆ. ಆದರೆ ಕಾಂಗ್ರೇಸ್ ನವ ಉದ್ಯಮಿಗಳ ವಿರೋಧಿ ಆಗಿದೆ ಎಂದು ಅಬ್ಬರಿಸಿದರು.