ಲಿಫ್ಟ್ ನಲ್ಲಿ ಹಾಟ್ ಪೋಸ್ ಕೊಟ್ಟ ಮೆಗಾ ಸೊಸೆ ಲಾವಣ್ಯ ತ್ರಿಪಾಠಿ, ಮೈ ಪ್ರೆಟಿಯೆಸ್ಟ್ ಎಂದ ನಿಹಾರಿಕಾ…..!

Follow Us :

ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಕಳೆದ ವರ್ಷ ನ.1 ರಂದು ಅದ್ದೂರಿಯಾಗಿ ಮದುವೆಯಾದರು. ಇಟಲಿಯಲ್ಲಿ ಈ ಸ್ಟಾರ್‍ ಗಳ ಮದುವೆ ಡೆಸ್ಟಿನೇಷನ್ ವೆಡ್ಡಿಂಗ್ ಹೆಸರಿನಲ್ಲಿ ತುಂಬಾ ಅದ್ದೂರಿಯಾಗಿ ನಡೆದಿತ್ತು. ಸದ್ಯ ಈ ಜೋಡಿ ತಮ್ಮ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಲಾವಣ್ಯ ತ್ರಿಪಾಠಿ ಇದೀಗ ಲಿಫ್ಟ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ತಮ್ಮ ಅತ್ತಿಗೆಯ ಪೋಸ್ ನೋಡಿದ ನಿಹಾರಿಕಾ ಮೈ ಪ್ರೆಟಿಯೆಸ್ಟ್ ಎಂದು ಕಾಮೆಂಟ್ ಮಾಡಿದ್ದಾರೆ.

ಮೆಗಾ ಕುಟುಂಬದ ವರುಣ್ ಹಾಗೂ ಲಾವಣ್ಯ ಮದುವೆ ಸಂಭ್ರಮದಲ್ಲಿ ಮೆಗಾಸ್ಟಾರ್‍ ಚಿರಂಜೀವಿ, ಪವನ್ ಕಲ್ಯಾಣ್, ನಾಗಬಾಬು, ಅಲ್ಲು ಅರ್ಜುನ್, ರಾಮಚ್ ಚರಣ್, ಸಾಯಿಧರಮ್ ತೇಜ್, ವೈಷ್ಣವ್, ಅಲ್ಲು ಶಿರಿಷ್ ಸೇರಿದಂತೆ ಮೆಗಾ ಕುಟುಂಬ ಹಾಗೂ ಅಲ್ಲು ಕುಟುಂಬದ ಸದಸ್ಯರು ಹಾಜರಿದ್ದರು. ಅವರಿಬ್ಬರ ನಡುವೆ ಲವ್ ಇಟಲಿಯಲ್ಲಿ ಶುರುವಾದ ಕಾರಣದಿಂದ ಇಟಲಿಯಲ್ಲೇ ಅವರು ಮದುವೆ ಮಾಡಿಕೊಂಡರು. ಸದ್ಯ ವರುಣ್ ತೇಜ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಮ್ಯಾರೇಜ್ ಲೈಫ್ ಸಹ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚಿಗೆ ಈ ಜೋಡಿ ಕೆಲವೊಂದು ಪ್ರದೇಶಗಳಿಗೆ ವೆಕೇಷನ್ ಗೆ ಸಹ ಹಾರಿದ್ದರು. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಲಾವಣ್ಯ ತ್ರಿಪಾಠಿ ಆಕ್ಟೀವ್ ಆಗಿದ್ದು, ಪೊಟೋಗಳ‌ನ್ನು ಹಂಚಿಕೊಳ್ಳುತ್ತಿರುತ್ತಾ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದಾರೆ.

ಟಾಲಿವುಡ್ ನ ಬ್ಯೂಟಿಪುಲ್ ಕಪಲ್ ವರುಣ್ ಹಾಗೂ ಲಾವಣ್ಯ ವೈವಾಹಿಕ ಜೀವನದ ಜೊತೆಗೆ ಸಿನೆಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಇದೀಗ ಲಾವಣ್ಯ ತ್ರಿಪಾಠಿ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿವೆ. ಲಿಫ್ಟ್ ನಲ್ಲಿ ಆಕೆ ಬ್ಲೂ ಕಲರ್‍ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲೇಜರ್‍ ಧರಿಸಿದ್ದು, ಅದನ್ನು ಕೊಂಚ ಸರಿಸಿ ಮಾದಕ ನೋಟ ಬೀರಿದ್ದಾರೆ. ಲಿಫ್ಟ್ ನಲ್ಲಿದ್ದರೇನು, ಜಸ್ಟ್ ಸ್ಟ್ರೀಕಿಂಗ್ ಫೋಸ್ ಎಂದು ಆಕೆ ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಲಾವಣ್ಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಜೊತೆಗೆ ಅತ್ತಿಗೆಯ ಪೋಸ್ ಗಳನ್ನು ಕಂಡ ನಿಹಾರಿಕಾ ಕೊಣಿದೆಲಾ ಮೈ ಪ್ರೆಟಿಯೆಸ್ಟ್ ಎಂದು ಅತ್ತಿಗೆಯ ಸೌಂದರ್ಯವನ್ನು ಹೊಗಳಿದ್ದಾರೆ.