ಆ ಸಿನೆಮಾದ ಸಮಯದಲ್ಲಿ ಪ್ರತಿನಿತ್ಯ ಅಳುತ್ತಿದ್ದೇ, ಅದೇ ನನ್ನ ಕೊನೆಯ ಸಿನೆಮಾ ಅಂದುಕೊಂಡೆ ಎಂದ ಮೃಣಾಲ್ ಠಾಕೂರ್…..!

Follow Us :

ಮರಾಠಿ ಮೂಲದ ನಟಿ ಮೃಣಾಲ್ ಠಾಕೂರ್‍ ಇತ್ತೀಚಿಗೆ ಒಳ್ಳೆಯ ಆಫರ್‍ ಗಳನ್ನು ಪಡೆದುಕೊಂಡು ಪುಲ್ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಅದರಲ್ಲೂ ಸೀತಾರಾಮಂ ಸಿನೆಮಾದ ಬಳಿಕ ಮೃಣಾಲ್ ಓವರ್‍ ನೈಟ್ ಸ್ಟಾರ್‍ ಆದರು ಎಂದೇ ಹೇಳಬಹುದು. ಈ ಸಿನೆಮಾದಲ್ಲಿ ಆಕೆ ಸೀತಾಮಹಾಲಕ್ಷ್ಮಿ ಎಂಬ ಪಾತ್ರದಲ್ಲಿ ನಟಿಸಿ ಎಲ್ಲರನ್ನೂ ಮೆಚ್ಚುವಂತೆ ಮಾಡಿದ್ದರು. ಈ ಸಿನೆಮಾದ ಬಳಿಕ ಆಕೆಗೆ ಆಫರ್‍ ಗಳೂ ಸಹ ಹರಿದುಬಂದವು. ಇದೀಗ ಆಕೆ ಫ್ಯಾಮಿಲಿ ಸ್ಟಾರ್‍ ಎಂಬ ಸಿನೆಮಾದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ನಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರಿಗೆ ತುಂಬಾನೆ ಹತ್ತಿರವಾದರು. ಇತ್ತೀಚಿಗಷ್ಟೆ ಆಕೆ ಹಾಯ್ ನಾನ್ನ ಎಂಬ ಸಿನೆಮಾದಲ್ಲೂ ಸಹ ನಟಿಸಿದ್ದರು. ಈ ಸಿನೆಮಾದ ಮೂಲಕ ಆಕೆ ಮತ್ತೊಂದು ಸಕ್ಸಸ್ ಕಂಡುಕೊಂಡರು. ಇದೀಗ ಆಕೆ ಫ್ಯಾಮಿಲಿ ಸ್ಟಾರ್‍ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದು, ಮತ್ತೊಂದು ಸಕ್ಸಸ್ ಗಾಗಿ ಕಾಯುತ್ತಿದ್ದಾಳೆ. ನಿರ್ದೇಶಕ ಪರಶುರಾಮ್ ಸಾರಥ್ಯದಲ್ಲಿ ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್‍ ಕಾಂಬಿನೇಷನ್ ನಲ್ಲಿ ಈ ಸಿನೆಮಾ ತೆರೆಗೆ ಬರಲಿದೆ. ಏ.5 ರಂದು ಈ ಸಿನೆಮಾ ತೆರೆಗೆ ಬರಲಿದ್ದು, ಸಿನೆಮಾದ ಪ್ರಮೋಷನ್ ಸಹ ಭರದಿಂದ ಸಾಗುತ್ತಿದೆ. ಈ ಸಿನೆಮಾದ ಪ್ರಮೋಷನ್ ನಿಮಿತ್ತ ಸಂದರ್ಶನದಲ್ಲಿ ಭಾಗಿಯಾಗಿದ್ದ ಮೃಣಾಲ್ ನೀಡಿದ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಸಂದರ್ಶನದಲ್ಲಿ ಮಾತನಾಡಿದ ಮೃಣಾಲ್ ಠಾಕೂರ್‍ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಅವರು ಸಖತ್ ವೈರಲ್ ಆಗುತ್ತಿವೆ. ಭಾಷೆ ಬರದೇ ಹೋದರೇ ನಟಿಸೋದು ತುಂಬಾನೆ ಕಷ್ಟ ಆಗುತ್ತದೆ. ಸೀತಾರಾಮಂ ಸಿನೆಮಾದ ಸಮಯದಲ್ಲಿ ನನಗೆ ತೆಲುಗು ಬಾರದ ಕಾರಣ ನಾನು ಪ್ರತಿನಿತ್ಯ ಅಳುತ್ತಿದ್ದೆ. ಇದೇ ಸಿನೆಮಾ ಕೊನೆಯದಾಗುತ್ತದೆಯೇನೋ ಎಂಬ ಭಯ ನನಗೆ ಕಾಡಿತ್ತು. ಆದರೆ ಸಿನೆಮಾ ಬಿಡುಗಡೆಯಾದ ಬಳಿಕ ನಾನು ಪಟ್ಟ ಕಷ್ಟವನ್ನೆಲ್ಲಾ ಮರೆತಯ ಬಿಟ್ಟೆ. ಮಹಾರಾಣಿ ಪಾತ್ರದಲ್ಲಿ ನಟಿಸೋದು ನನಗೆ ಬಾಲ್ಯದ ಕನಸು. ಅದಕ್ಕಾಗಿಯೇ ಈ ಸಿನೆಮಾದ ಕಥೆ ಹೇಳಿದ ಕೂಡಲೇ ಒಪ್ಪಿಕೊಂಡೆ. ಈ ಸಿನೆಮಾಗಾಗಿ ಮೂರು ಭಾಷೆಯಲ್ಲಿ ಡಬ್ಬಿಂಗ್ ಹೇಳಬೇಕಾಗಿತ್ತು. ತೆಲುಗು ಡೈಲಾಗ್ ಗಳನ್ನು ಇಂಗ್ಲೀಷ್ ನಲ್ಲಿ ಬರೆದುಕೊಂಡು ರಾತ್ರಿಯೆಲ್ಲಾ ಪ್ರಾಕ್ಟೀಸ್ ಮಾಡಿದೆ. ಹಿಂದಿ, ಮರಾಠಿಗಿಂತ ತೆಲುಗಿನಲ್ಲಿ ಡೈಲಾಗ್ ಹೇಳುವುದು ತುಂಬಾ ಕಷ್ಟ ಅನ್ನಿಸಿತ್ತು. ಸೀತಾರಾಮಂ ಸಿನೆಮಾ ನನ್ನ ಮೊದಲ ಹಾಗೂ ಕೊನೆಯ ಸಿನೆಮಾ ಎಂದು ಕಾಶ್ಮೀರ್‍ ನಲ್ಲಿ ನಡೆದ ಶೂಟಿಂಗ್ ಸಮಯದಲ್ಲಿ ದುಲ್ಕರ್‍ ಜೊತೆ ಹೇಳಿದ್ದೆ ಎಂದು ಮೃಣಾಲ್ ಕಾಮೆಂಟ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.