ನಾದಿನಿಯನ್ನು ಮಂಚಕ್ಕೆ ಕರೆದ ಅಕ್ಕನ ಗಂಡನನ್ನೆ ಬರ್ಬರವಾಗಿ ಕೊಲೆ ಮಾಡಿಸಿಬಿಟ್ಲು….!

Follow Us :

ಲೈಂಗಿಕ ಆಸೆಗಳ ಕಾರಣದಿಂದ ಅನೇಕ ಅಪರಾಧಗಳು ನಡೆಯುತ್ತಿರುವುದನ್ನು ನಾವು ದಿನನಿತ್ಯ ಕೇಳುತ್ತಲೇ ಇರುತ್ತೇವೆ. ಮನೆಯಲ್ಲಿ ಮುದ್ದಾದ ಹೆಂಡತಿಯಿಂದರೂ ಲೈಂಗಿಕ ಆಸೆಯಿಂದ ನಾದಿನಿಯ ಮೇಲೆ ಕಣ್ಣು ಹಾಕಿದ್ದ ವ್ಯಕ್ತಿಯನ್ನು ಬರ್ಬವಾಗಿ ಕೊಲೆ ಮಾಡಿಸಿದ ಘಟನೆ ನಡೆದಿದೆ. ಈ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ.

ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಓಕಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆಗೂ ಮುಂಚೆ ಪ್ರೀತಿಯಲ್ಲಿ ಬಿದ್ದಿದ್ದ ನಾದಿನಿಯೇ ತನ್ನ ಅಕ್ಕನ ಗಂಡನನ್ನು ಕೊಲೆ ಮಾಡಿಸಿದ್ದಾಳೆ. ಹೆಂಡತಿ ಪ್ರತಿನಿತ್ಯ ಮನೆಯಿಂದ ಹೊರಗೆ ಹೋದಾಗ ಆಕೆಯನ್ನು ಮಂಚಕ್ಕೆ ಕರೆಯುತ್ತಿದ್ದನಂತೆ ಈ ಕಾರಣದಿಂದಲೇ ಕೊಲೆ ಮಾಡಿಸಿದ್ದಾಳೆ ಎನ್ನಲಾಗಿದೆ. ಕಳೆದ ಡಿ.31 ರಂದು ಈ ಕೊಲೆ ನಡೆದಿತ್ತು. ನಿರ್ಜನ ಪ್ರದೇಶದಲ್ಲಿ ಮೃತ ದೇಹ ಸಿಕ್ಕಿದ್ದು, ಮೊದಲಿಗೆ ಇದೊಂದು ಅಪಘಾತ ಇರಬಹುದು ಎಂದು ಪೊಲೀಸರು ತಿಳಿದುಕೊಂಡಿದ್ದರಂತೆ. ಆದರೆ ಮೃತದೇಹ ನೋಡಿದ ಬಳಿಕ ಕೊಲೆಯಾಗಿರಬಹುದು ಎಂಬ ಅನುಮಾನ ಮೂಡಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಿದಾಗ ಕೊಲೆಯಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಬಳಿಕ ಈ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಈ ವೇಳೆ ಆತನ ಪತ್ನಿ ಹಾಗೂ ನಾದಿನಿಯ ಮೇಲೆ ಅನುಮಾನ ಮೂಡಿದೆ. ಬಳಿಕ ನಾದಿನಿಯನ್ನು ವಿಚಾರಣೆ ನಡೆಸಿದಾಗ ನಡೆದ ಘಟನೆಯ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ನಮ್ಮ ಭಾವ ಹೆಂಡತಿ ಇದ್ದರೂ ನನ್ನ ಮೇಲೆ ಕಣ್ಣು ಹಾಕಿದ್ದ, ಅಕ್ಕನ ಗಂಡ ಕಾಟ ಕೊಡುತ್ತಿದ್ದರೂ ಅಕ್ಕನ ಸಂಸಾರ ಹಾಳಾಗಬಾರದು ಎಂದು ಎಲ್ಲವನ್ನೂ ಸಹಿಸಿಕೊಂಡಿದ್ದೆ. ಆದರೆ ಆತನ ಕಿರುಕುಳ ತಾಳಲಾರದೆ ನನ್ನ ಪ್ರಿಯಕರನ ಬಳಿ ಹೇಳಿದೆ. ಭಾವನನ್ನು ಹೊರಗೆ ಕರೆದುಕೊಂಡು ಬಾ ಬಳಿಕ ಕೊಲೆ ಮಾಡೋಣ ಎಂದು ಹೇಳಿದ್ದ. ಬಳಿಕ ಗ್ರಾಮದ ಹೊರಗೆ ಕರೆದುಕೊಂಡು ಕೊಲೆ ಮಾಡಿಲಾಗಿದೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಕೊಲೆಯಾದ ವ್ಯಕ್ತಿಯನ್ನು ಅಂಬಾರಾಯ ಎಂದು ಗುರ್ತಿಸಿದ್ದು, ಆರೋಪಿಯನ್ನು ಅಂಬಿಕಾ ಎಂದು ಗುರ್ತಿಸಲಾಗಿದೆ. ಈ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದ್ದು, ಮುಂದಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.