ತೆಲುಗಿನ ಆ ಇಬ್ಬರ ನಟಿಯರ ವರ್ತನೆ ನೋಡಿ ನೀವು ಲೆಸ್ಬಿಯನ್ಸ್ ಎಂದ ನೆಟ್ಟಿಗರು…..!

Follow Us :

ಸೋಷಿಯಲ್ ಮಿಡಿಯಾದಲ್ಲಿ ಸಾಮಾನ್ಯರಿಂದ ಹಿಡಿದು, ನಟಿಯರು, ಕಿರುತೆರೆ ನಟಿಯರೂ ಸಹ ತುಂಬಾನೆ ಬ್ಯುಸಿಯಾಗಿರುತ್ತಾರೆ. ತಮ್ಮ ಅಪ್ಡೇಟ್ ಗಳ ಬಗ್ಗೆ ಸೋಷಿಯಲ್ ಮಿಡಿಯಾ ಮೂಲಕ ತಿಳಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಕಿರುತೆರೆಯಲ್ಲಿ ಪುಲ್ ಫೇಮಸ್ ಆದ ರಿತೂ ಚೌಧರಿ ಹಾಗೂ ವಿಷ್ಣುಪ್ರಿಯಾ ಸಹ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಕೆಲವೊಂದು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗಳು ಇದೀಗ ವೈರಲ್ ಆಗುತ್ತಿದ್ದು, ಅವರಿಬ್ಬರೂ ಲೆಸ್ಬಿಯನ್ಸ್ ಆಗಿದ್ದೀರಾ ಎಂಬ ಅನುಮಾನಗಳನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

ಕಿರುತೆರೆಯ ಸ್ಟಾರ್‍ ಗಳಾದ ರೀತೂ ಚೌದರಿ ಹಾಗೂ ಆಂಕರ್‍ ವಿಷ್ಣುಪ್ರಿಯಾ ಇಬ್ಬರೂ ಕ್ಲೋಜ್ ಫ್ರೆಂಡ್ಸ್. ಸೀರಿಯಲ್ ನಟಿಯಾದ ರೀತೂ ಜಬರ್ದಸ್ತ್ ಶೋ ಮೂಲಕ ಫೇಂ ಪಡೆದುಕೊಂಡರು. ವಿಷ್ಣು ಪ್ರಿಯಾ ಯೂಟ್ಯೂಬ್ ವಿಡಿಯೋಗಳು ಹಾಗೂ ಶಾರ್ಟ್ ಫಿಲಂಸ್ ಗಳ ಮೂಲಕ ಫೇಂ ಪಡೆದುಕೊಂಡು ಬಳಿಕ ಪೋವೇ ಪೋರಾ ಎಂಬ ಶೋ ಮೂಲಕ ಆಂಕರ್‍ ಆದರು. ಸದ್ಯ ಆಕೆ ಸಿನೆಮಾಗಳ ಮೇಲೆ ಹೆಚ್ಚು ಪೋಕಸ್ ಇಟ್ಟಿದ್ದಾರೆ. ಇತ್ತೀಚಿಗಷ್ಟೆ ತೆರೆಕಂಡ ದಯಾ ವೆಬ್ ಸಿರೀಸ್ ನಲ್ಲೂ ವಿಷ್ಣು ಪ್ರಿಯಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ರಿತೂ ಹಾಗೂ ವಿಷ್ಣುಪ್ರಿಯಾ ಇಬ್ಬರೂ ಸ್ನೇಹಿತರಾಗಿದ್ದು, ವೆಕೇಷನ್ ಗಳಿಗೆ ಇಬ್ಬರೂ ಜೊತೆಗೆ ಹೋಗುತ್ತಿರುತ್ತಾರೆ. ಒಳ್ಳೆಯ ಸ್ನೇಹಿತರಾಗಿದ್ದ ಇವರು ಸೋಷಿಯಲ್ ಮಿಡಿಯಾದಲ್ಲಿ ಜೊತೆಯಾಗಿ ರೀಲ್ಸ್ ಮಾಡುತ್ತಿರುತ್ತಾರೆ.

ಇದೀಗ ರಿತೂ ಹಾಗೂ ವಿಷ್ಣುಪ್ರಿಯಾ ಇಬ್ಬರೂ ಒಳ್ಳೆಯ ಸ್ನೇಹಿತರು. ಇದೀಗ ಅವರಿಬ್ಬರದ್ದು ಸ್ನೇಹಬಂಧ ಮಾತ್ರವಲ್ಲ ಬೇರೆಯದ್ದೇ ಎಂದು ಕೆಲ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅದಕ್ಕೆ ಅವರು ಹಂಚಿಕೊಂಡ ಲೇಟೆಸ್ಟ್ ವಿಡಿಯೋ ಎನ್ನಬಹುದು. ಯಾನಿಮಲ್ ಸಿನೆಮಾದ ಫೇಮಸ್ ಹಾಡಾದ ಜಮಾಲ್ ಕುಡು ಹಾಡಿಗೆ ರಿತೂ ಹಾಗೂ ವಿಷ್ಣುಪ್ರಿಯಾ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರ ಕೈಯಲ್ಲಿ ವೊಡ್ಕಾ ಗ್ಲಾಸ್ ಇಟ್ಟುಕೊಂಡಿದ್ದಾರೆ. ಬಾಬಿ ಡಿಯೋಲ್ ನಂತೆ ತಲೆಯ ಮೇಲೆ ಗ್ಲಾಸ್ ಇಟ್ಟುಕೊಂಡು ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅನೇಕರು ಇಬ್ಬರ ನಡುವಣ ಸಂಬಂಧದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ವಿಡಿಯೋ ನೋಡಿದ ಓರ್ವ ವ್ಯಕ್ತಿ ನೀವು ಲೆಸ್ಬಿಯನ್ ಗಳಾ, ಯಾವಾಗಲೂ ಜೊತೆಗೆ ಇರುತ್ತೀರಾ ಎಂದು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್ ಗೆ ಅನೇಕರು ಸಮ್ಮತಿ ಸೂಚಿಸುತ್ತಿದ್ದಾರೆ. ಈ ಬಗ್ಗೆ ಇಬ್ಬರಲ್ಲಿ ಯಾರೋ ಒಬ್ಬರು ರಿಯಾಕ್ಟ್ ಆಗಬೇಕಿದೆ. ಇನ್ನೂ ರಿತೂ ಹಾಗೂ ವಿಷ್ಣು ಪ್ರಿಯಾ ಇಬ್ಬರೂ ನಟಿಯಾಗಿ ಸಕ್ಸಸ್ ಕಾಣಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.