Film News

ದೀಪಾವಳಿಯಂದು ಓವರ್ ಆಯ್ತು ಪ್ರಿಯಾಂಕಾ ಚೋಪ್ರಾ ಮೇಕಪ್, ದಾರುಣವಾಗಿ ಟ್ರೋಲ್ ಮಾಡಿದ ನೆಟ್ಟಿಗರು….!

ಸಿನೆಮಾ ಸೆಲಬ್ರೆಟಿಗಳು ಏನೇ ಮಾಡಿದರೂ ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ಕೆಲ ಕೆಲಸಗಳು ಮೆಚ್ಚುಗೆಗೆ ಪಾತ್ರವಾದರೇ ಕೆಲವು ಕೆಲಸಗಳು ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ. ಅದರಲ್ಲೂ ನಟಿಯರು ಹೆಚ್ಚಾಗಿ ಟ್ರೋಲರ್‍ ಗಳಿಗೆ ಆಹಾರವಾಗುತ್ತಾರೆ ಎನ್ನಬಹುದಾಗಿದೆ. ಈ ಹಾದಿಯಲ್ಲೇ ದೀಪಾವಳಿ ಹಬ್ಬದಂದು ಪ್ರಿಯಾಂಕಾ ಚೋಪ್ರಾ ಮಾಡಿಕೊಂಡ ಮೇಕಪ್ ಕಾರಣದಿಂದ ಆಕೆಯನ್ನು ಟ್ರೋಲರ್‍ ಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ಬಾಲಿವುಡ್ ಸಿನೆಮಾಗಳಿಂದ ಹಾಲಿವುಡ್ ಸಿನೆಮಾಗಳ ವರೆಗೂ ಸ್ಟಾರ್‍ ಡಮ್ ಪಡೆದುಕೊಂಡ ನಟಿಯರ ಸಾಲಿನಲ್ಲಿ ಪ್ರಿಯಾಂಕಾ ಚೋಪ್ರಾ ಮೊದಲ ಸ್ಥಾನದಲ್ಲೇ ಇರುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಂ ಸಂಪಾದಿಸಿಕೊಂಡ ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಗ್ಲೋಬಲ್ ಸ್ಟಾರ್‍ ಆಗಿ ಫೇಂ ಪಡೆದುಕೊಂಡ ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್ ನಲ್ಲೇ ಸೆಟಲ್ ಆಗಿದ್ದು, ಅಲ್ಲಿನ ನಟಿಯರಿಗೆ ತೀವ್ರ ಪೈಪೋಟಿ ಕೊಡುತ್ತಿದ್ದಾರೆ. ಅಮೇರಿಕಾದಲ್ಲೇ ಪ್ರಿಯಾಂಕಾ ಚೋಪ್ರಾ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಎಲ್ಲಾ ಸೆಲೆಬ್ರೆಟಿಗಳಂತೆ ಪ್ರಿಯಾಂಕಾ ಸಹ ಆಕೆಯ ಪತಿ ನಿಕ್ ಜೋನಸ್ ಜೊತೆಗೆ ಲಾಸ್ ಏಂಜಲ್ಸ್ ನಲ್ಲಿ ಸ್ನೇಹಿತರು, ಬಂಧುಗಳ ಜೊತೆಗೆ ಗ್ರಾಂಡ್ ಪಾರ್ಟಿ ಮಾಡಿದ್ದಾರೆ.

ಈ ಸಂಭ್ರಮದಲ್ಲಿ ಪ್ರಿಯಾಂಕಾ ಹಾಗೂ ನಿಕ್ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಸಂಪ್ರದಾಯದಂತೆ ವಸ್ತ್ರಗಳನ್ನು ಧರಿಸಿ ಮಿಂಚಿದ್ದಾರೆ. ಈ ಪಾರ್ಟಿ ತುಂಬಾನೆ ಗ್ರಾಂಡ್ ಆಗಿತ್ತು ಎನ್ನಲಾಗಿದೆ. ಈ ಸಂಭ್ರಮದ ಪೊಟೋ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಟಿ ಪ್ರಿಯಾಂಕಾ ಚೋಪ್ರಾ ವೆಲ್ವೇಟ್ ಮೆರೂನ್ ಬ್ವೌಜ್ ನಲ್ಲಿ ಡ್ಯುಯಲ್ ಟೋನ್ ಲೆಹಂಗಾ ಧರಿಸಿ, ತಲೆಯಲ್ಲಿ ಗುಲಾಬಿ ಹೂವುಗಳನ್ನು ಮುಡಿದಿದ್ದರು. ಗೋಲ್ಡ್ ಕಲರ್‍ ಮೆರೂನ್ ಕಲರ್‍ ಲಿಪ್ ಸ್ಟಿಕ್ ಹಚ್ಚಿಕೊಂಡಿದ್ದರು. ಬಿಂದಿ, ಸಿಂಧೂರ ಸಹ ಹಾಕಿಕೊಂಡಿದ್ದರು. ಅದಕ್ಕೆ ತಕ್ಕಂತೆ ಡೈಮಂಡ್ ನೆಕ್ಲೇಸ್ ಹಾಕಿಕೊಂಡು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ನಿಕ್ ಸಹ ವೈಟ್ ಕುರ್ತಾ ಹಾಗೂ ಹೂಗಳ ಪ್ರಿಂಟ್ ಇರುವಂತಹ ಕೋಟ್ ಧರಿಸಿದ್ದರು.

ಇನ್ನೂ ಪ್ರಿಯಾಂಕಾ ಹಾಗೂ ನಿಕ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮೇಕಪ್ ವಿಚಾರದಲ್ಲಿ ಪ್ರಿಯಾಂಕ ವಿಚಿತ್ರವಾಗಿ ಕಾಣಿಸಿಕೊಂಡಿದ್ದಾರೆ. ಅಯ್ಯೋ ಇದು ಯಾವ ಸೀಮೆ ಮೇಕಪ್, ನಿಮ್ಮ ಮೇಕಪ್ ತುಂಬಾ ಭಯಂಕರವಾಗಿದೆ, ಭಾರತದಲ್ಲಿ ಇದೀಗ ಯಾರೂ ಈ ರೀತಿಯ ಮೇಕಪ್ ಮಾಡಿಕೊಳ್ಳುತ್ತಿಲ್ಲ ಎಂಬೆಲ್ಲಾ ಕಾಮೆಂಟ್ ಗಳ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

Most Popular

To Top