Film News

ಸಂಚಲನಾತ್ಮಕ ಟ್ವೀಟ್ ಮಾಡಿದ ಕಾಂಟ್ರವರ್ಸಿ ಕ್ವೀನ್ ಕಂಗನಾ, ನಾನು ಅವರಂತೆ ಹಿರೋಗಳ ಕೋಣೆಗೆ ಹೋಗಿಲ್ಲ ಎಂದ ನಟಿ…!

ಬಾಲಿವುಡ್ ಫೈರ್‍ ಬ್ರಾಂಡ್ ಕಂಗನಾ ರಾಣಾವತ್ ಬಾಲಿವುಡ್ ಸ್ಟಾರ್‍ ನಟರೂ ಸೇರಿದಂತೆ ಅನೇಕ ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಸದಾ ಒಂದಲ್ಲ ಒಂದು ವಿವಾದಿತ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುತ್ತಾರೆ. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಕಾಮೆಂಟ್ ಮಾಡಿದ್ದು, ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಬಾಲಿವುಡ್ ನ ಹಿರೋ ಹಿರೋಯಿನ್ ಗಳನ್ನು ಟಾರ್ಗೆಟ್ ಮಾಡಿ ಕಾಮೆಂಟ್ ಮಾಡಿದ್ದಾರೆ.

ಸ್ಟಾರ್‍ ನಟಿ ಕಂಗನಾ ರಾನೌತ್ ಆಗಾಗ ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಮೇಲೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಜೊತೆಗೆ ರಾಜಕೀಯ ನಾಯಕರನ್ನೂ ಸಹ ಆಕೆ ವಿಮರ್ಶೆ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆಯನ್ನು ಕಾಂಟ್ರವರ್ಸಿ ಕ್ವೀನ್ ಎಂತಲೂ ಕರೆಯುತ್ತಾರೆ. ವಿವಾದಗಳಿಗೆ ಕೇರ್‍ ಆಫ್ ಅಡ್ರೆಸ್ ಎಂದರೇ ಕಂಗನಾ ರಾನೌತ್ ಎಂದು ಹೇಳಬಹುದು. ದೊಡ್ಡ ಸ್ಟಾರ್‍ ಗಳಾಗಲಿ, ಅಥವಾ ದೊಡ್ಡ ರಾಜಕಾರಣಿಗಳಾಗಲಿ ನೇರವಾಗಿ ಅವರ ಮೇಲೆ ಆರೋಪಗಳನ್ನು ಮಾಡಿಬಿಡುತ್ತಾರೆ. ಅವರನ್ನು ಎದುರಿಸಿ ಸಹ ನಿಲ್ಲುತ್ತಾರೆ. ಇಂತಹ ಅನೇಕ ಕಾರಣಗಳಿಂದ ಆಕೆ ತುಂಬಾನೆ ಸಮಸ್ಯೆಗಳನ್ನು ಎದುರಿಸಿದ್ದರು. ಬಾಲಿವುಡ್ ಯಂಗ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಬಾಲಿವುಡ್ ಮಾಫಿಯಾ ಕಾರಣ, ಆತನ ಅವಕಾಶಗಳನ್ನು ಕಿತ್ತುಕೊಂಡು ಆತನಿಗೆ ಮಾನಸಿಕ ಹಿಂಸೆ ನೀಡಿದ್ದರು ಎಂದೂ ಸಹ ಆ ಸಮಯದಲ್ಲಿ ಉದ್ಯಮ ನಡೆಸಿದ್ದರು.

ನಟಿ ಕಂಗನಾ ಮಾಡಿದ ಟ್ವೀಟ್ ಒಂದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಆಕೆ ಕೆಲವು ಹಿರೋ ಹಾಗೂ ಹಿರೋಯಿನ್ ಗಳನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡಿದ್ದಾರೆ. ಬಾಲಿವುಡ್ ಮಾಫಿಯಾ ನನ್ನ ಯಾಟಿಟ್ಯೂಡ್ ಅನ್ನು ಪೊಗರು ಎಂದು ಚಿತ್ರೀಕರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಏಕೆಂದರೇ ನಾನು ಬೇರೆ ನಟಿಯರಂತೆ ಎಂಟರ್‍ ಟೈನ್ ಮಾಡುವುದಿಲ್ಲ. ಐಟಂ ಸಾಂಗ್ಸ್ ಮಾಡುವುದಿಲ್ಲ. ಸೀರೆಯನ್ನುಟ್ಟು ಡ್ಯಾನ್ಸ್ ಮಾಡಲ್ಲ. ನಟಿಯರು ಕೇಳಿದ ಕೂಡಲೇ ಅವರ ಕೋಣೆಗೆ ಹೋಗಿ ಕಳೆಯುವುದಿಲ್ಲ. ಅದಕ್ಕಾಗಿ ನನ್ನ ಓರ್ವ ಹುಚ್ಚಿಯಂತೆ ಚಿತ್ರೀಕರಿಸಿ ಜೈಲಿಗೆ ಕಳುಹಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ ಸಹ ಮಾಡಿದ್ದು, ನನಗೆ ಈ ಯಾಟಿಟ್ಯೂಡ್ ನನ್ನ ಪೇರೆಂಟ್ಸ್ ನಿಂದ ಬಂದಿದೆ. ನಾನು ಸ್ಟಾರ್‍ ಹಿರೋಯಿನ್ ಆದರೂ ನಮ್ಮ ತಾಯಿ ವ್ಯವಸಾಯ ಮಾಡುತ್ತಾರೆ. ನನ್ನ ಕುಟುಂಬದಲ್ಲಿ ಸರ್ಕಾರಿ ಉದ್ಯೋಗಿಗಳು, ರಾಜಕೀಯ ನಾಯಕರು, ದೊಡ್ಡ ಉದ್ಯಮಿಗಳು ಸಹ ಇದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ಕಂಗನಾ ಬಾಲಿವುಡ್ ಕುರಿತು ಮಾಡಿದ ಈ ಟ್ವೀಟ್ ಭಾರಿ ಚರ್ಚೆಗೆ ಕಾರಣವಾಗಿದೆ. ವಿವಿಧ ರೀತಿಯ ಕಾಮೆಂಟ್ ಗಳು ಹರಿದಾಡುತ್ತಿವೆ. ಇದೀಗ ಕಂಗನಾ ಚಂದ್ರಮುಖಿ-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಎಮರ್ಜೆನ್ಸಿ ಎಂಬ ಸಿನೆಮಾದಲ್ಲೂ ಸಹ ನಟಿಸಿದ್ದು, ಈ ಸಿನೆಮಾ ಸಹ ಶೀಘ್ರದಲ್ಲೇ ತೆರೆಕಾಣಲಿದೆ. ಈ ಸಿನೆಮಾದಲ್ಲಿ ಕಂಗನಾ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಪಾತ್ರವನ್ನು ಪೋಷಣೆ ಮಾಡಿದ್ದಾರೆ.

Most Popular

To Top