Film News

ಪಿಂಕ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಹೋಮ್ಲಿ ಬ್ಯೂಟಿ ಸ್ನೇಹಾ, ಸೂಪರ್ ಪೋಸ್ ಕೊಟ್ಟು ಅಭಿಮಾನಿಗಳನ್ನು ಸೆಳೆದ ನಟಿ…!

ಸೌತ್ ಸಿನಿರಂಗದಲ್ಲಿ ಹೋಮ್ಲಿ ಬ್ಯೂಟಿ ಎಂದೇ ಖ್ಯಾತಿ ಪಡೆದ ಸ್ನೇಹಾ ಅನೇಕ ಸಿನೆಮಾಗಳ ಮೂಲಕ ಸ್ಟಾರ್‍ ನಟಿಯಾಗಿದ್ದರು. ಸ್ನೇಹಾ ತೊಲಿ ವಲಪು ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಮದುವೆಯಾದರೂ ಸಹ ಆಕೆಯ ಗ್ಲಾಮರ್‍ ಮಾತ್ರ ಹಾಗೆ ಇದೆ. ಇದಕ್ಕೆ ಸಾಕ್ಷಿಯೆಂಬಂತೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವಂತಹ ಪೊಟೋಗಳು. ಇದೀಗ ಆಕೆಯ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಹೋಮ್ಲಿ ಬ್ಯೂಟಿ ಸ್ನೇಹಾ ದಿನೇ ದಿನೇ ಮತಷ್ಟು ಸುಂದರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಯಸ್ಸಾದರೂ ಸಹ ಯಂಗ್ ಬ್ಯೂಟಿಯರನ್ನು ನಾಚಿಸುವಂತಹ ಗ್ಲಾಮರ್‍ ಸ್ವಂತ ಮಾಡಿಕೊಳ್ಳುತ್ತಿದ್ದಾರೆ. ಪ್ರಿಯಮೈನ ನೀಕು, ವೆಂಕಿ, ಶ್ರೀರಾಮದಾಸು ಸೇರಿದಂತೆ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಸ್ನೇಹಾ ಫೇಮ್ ಪಡೆದುಕೊಂಡು ಸ್ಟಾರ್‍ ನಟಿಯಾಗಿ ತೆಲುಗು ಸಿನಿರಂಗವನ್ನು ಆಳಿದಂತಹ ನಟಿಯಾಗಿದ್ದಾರೆ. ಅಂದಿನ ಕಾಲದಲ್ಲಿ ಫ್ಯಾಮಿಲಿ ಆಧಾರಿತ ಸಿನೆಮಾಗಳಿಗೆ ಅನೇಕ ನಿರ್ದೇಶಕರಿಗೆ ಸ್ನೇಹಾ ಮೊದಲನೇ ಆಯ್ಕೆಯಾಗಿದ್ದರು. ಇನ್ನೂ ಕಾಲಿವುಡ್ ನ ಖ್ಯಾತ ನಟ ಪ್ರಸನ್ನ ಎಂಬಾತನನ್ನು ಕಳೆದ 2012ರಲ್ಲಿ ಮದುವೆಯಾದರು, ಮದುವೆಯಾದರೂ ಸಹ ಆಕೆ ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ. ಆಕೆಗೆ ನಟಿಯಾಗಿ ಆಫರ್‍ ಗಳು ಬರದೇ ಇದ್ದರೂ ಸಹ ಅಕ್ಕ, ಅತ್ತಿಗೆ ಗಳಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನೂ ನಟಿ ಸ್ನೇಹಾ ಈಗಾಗಲೇ ಸೆಕೆಂಡ್ ಇನ್ನೀಂಗ್ಸ್ ಪ್ರಾರಂಭಿಸಿದ್ದು, ಅನೇಕ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಕೈತುಂಬ ಸಿನೆಮಾಗಳನ್ನು ಇಟ್ಟುಕೊಂಡು ಬ್ಯುಸಿಯಾಗಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಬ್ಯುಸಿಯಾಗಿರುತ್ತಾ ಆಗಾಗ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ನಟಿ ಸ್ನೇಹಾ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸುವಂತಹ ಪೋಸ್ ಗಳನ್ನು ನೀಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಪಿಂಕ್ ಕಲರ್‍ ಔಟ್ ಪುಟ್ ಡ್ರೆಸ್ ನಲ್ಲಿ ಯುವಕರ ಹೃದಯ ಕದಿಯುತ್ತಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಆಕೆಯ ಸೌಂದರ್ಯಕ್ಕೆ ಅನೇಕರು ಮಂತ್ರಮುಗ್ದರಾಗುತ್ತಿದ್ದಾರೆ. ಇನ್ನೂ ಆಕೆಯ ಸೌಂದರ್ಯವನ್ನು ಹೊಗಳುತ್ತಾ ಪೊಟೋಗಳನ್ನು ವೈರಲ್ ಸಹ ಮಾಡುತ್ತಿದ್ದಾರೆ.

ಮದುವೆಯಾದರೂ, ಮಕ್ಕಳಾದರೂ ಸಹ ಸ್ನೇಹಾ ಗ್ಲಾಮರ್‍ ಮಾತ್ರ ಕಡಿಮೆಯಾಗಿಲ್ಲ ಎನ್ನಲಾಗುತ್ತಿದೆ. ಈಗಲೂ ಸಹ ಸ್ನೇಹಾ ಅದೇ ಫಿಟ್ ನೆಸ್ ಹೊಂದಿದ್ದಾರೆ. ಸೋಷಿಯಲ್ ಮಿಡಿಯಾ ಮೂಲಕ ಸ್ನೇಹಾ ಪೊಟೋಗಳು, ವಿಡಿಯೋಗಳ ಜೊತೆಗೆ ತಮ್ಮ ವೈಯುಕ್ತಿಕ ಜೀವನದ ಅನೇಕ ವಿಚಾರಗಳನ್ನು ಸಹ ಹಂಚಿಕೊಳ್ಳುತ್ತಾ ಅಭಿಮಾನಿಗಳೊಂದಿಗೆ ಟಚ್ ನಲ್ಲಿರುತ್ತಾರೆ.

Most Popular

To Top