Film News

ಲೈಗರ್ ಸೋಲಿನ ಬಳಿಕ ಕಾಣಿಸಿಕೊಂಡ ಪೂರಿ-ಚಾರ್ಮಿ, ಅಜ್ಞಾತದಿಂದ ಹೊರಬಂದ ಚಾರ್ಮಿ…!

ಭಾರಿ ನಿರೀಕ್ಷೆಯಿಂದ ಪ್ಯಾನ್ ಇಂಡಿಯಾ ಸಿನೆಮಾ ಆಗಿ ತೆರೆಕಂಡ ಲೈಗರ್‍ ಸಿನೆಮಾ ಭಾರಿ ಸೋಲನ್ನು ಕಂಡಿತ್ತು. ಈ ಸೋಲಿನಿಂದ ಇಡೀ ಚಿತ್ರತಂಡ ತುಂಬಾನೆ ನೋವನ್ನು ಅನುಭವಿಸಿತ್ತು. ಈ ಸಿನೆಮಾಗೆ ಬಂಡವಾಳ ಹೂಡಿದ ಚಾರ್ಮಿ ಹಾಗೂ ನಿರ್ದೇಶನ ಮಾಡಿದ ಪೂರಿ ಜಗನ್ನಾಥ್ ಸಹ ತುಂಬಾ ಡಿಸ್ಟರ್ಬ್ ಆಗಿದ್ದರು. ಪೂರಿ ಆಗಾಗ ಕಾಣಿಸಿಕೊಂಡರೂ ಸಹ ಚಾರ್ಮಿ ಮಾತ್ರ ಎಲ್ಲೂ ಕಾಣಿಸಿಕೊಳ್ಳದೇ ಅಜ್ಞಾತದಲ್ಲಿದ್ದರು.  ಸುಮಾರು ಎಂಟು ತಿಂಗಳ ಬಳಿಕ ಚಾರ್ಮಿ ಪೂರಿ ಜಗನ್ನಾಥ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ಡೈನಾಮಿಕ್ ನಿರ್ದೇಶಕ ಪೂರಿ ಜಗನ್ನಾಥ್ ಹಾಗೂ ನಟಿ ಕಂ ನಿರ್ಮಾಪಕಿ ಚಾರ್ಮಿ ಮುಂಬೈ ವಿಮಾನ ನಿಲ್ದಾಣದ ಬಳಿ ಕಾಣಿಸಿಕೊಂಡಿದ್ದಾರೆ. ಲೈಗರ್‍ ಫ್ಲಾಪ್ ಬಳಿಕ ಮೊದಲ ಬಾರಿಗೆ ಇಬ್ಬರೂ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸುಮಾರು ಎಂಟು ತಿಂಗಳ ಬಳಿಕ ಕಾಣಿಸಿಕೊಂಡಿದ್ದಾರೆ. ಇನ್ನೂ ಅವರು ಕ್ಯಾಮೆರಾಗಳಿಗೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೊಸ ಸಿನೆಮಾಗೆ ಪ್ಲಾನ್ ಮಾಡುತ್ತಿದ್ದಾರೆಯೇ ಅದಕ್ಕಾಗಿ ಹೊರ ಬಂದಿದ್ದಾರೆ ಎಂಬ ಅನುಮಾನಗಳು ಮೂಡಿದ್ದು, ಸಿನೆಮಾಗಾಗಿಯೇ ಅವರು ಸಿದ್ದವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಲೈಗರ್‍ ಸಿನೆಮಾದ ಬಳಿಕ ವಿಜಯ್ ದೇವರಕೊಂಡ ಹಾಗೂ ಪೂರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ಜನಗಣಮನ ಎಂಬ ಸಿನೆಮಾ ಘೋಷಣೆ ಮಾಡಿತ್ತು. ಆದರೆ ಲೈಗರ್‍ ಸೋಲಿನ ಬಳಿಕ ಈ ಸಿನೆಮಾ ಸಹ ನಿಂತಿದೆ.

ಇನ್ನೂ ಲೈಗರ್‍ ಸೋಲಿನ ಬಳಿಕ ಪೂರಿ ಜಗನ್ನಾಥ್ ನಗುತ್ತಾ ಕಾಣಿಸಿದ್ದು ಇದೇ ಮೊದಲು ಎನ್ನಬಹುದಾಗಿದೆ. ತುಂಬಾ ನಿರೀಕ್ಷೆಯಿಂದ ಲೈಗರ್‍ ಸಿನೆಮಾವನ್ನು ಪ್ಲಾನ್ ಮಾಡಿದ್ದರು. ದೊಡ್ಡ ಮಟ್ಟದಲ್ಲೇ ಪ್ರಮೋಷನ್ ಕಾರ್ಯಕ್ರಮಗಳನ್ನೂ ಸಹ ಮಾಡಿದ್ದರು. ಆದರೆ ಸಿನೆಮಾ ಮಾತ್ರ ದೊಡ್ಡ ಮಟ್ಟದಲ್ಲೇ ಸೋಲನ್ನು ಕಂಡು ಡಿಜಾಸ್ಟರ್‍ ಆಗಿದೆ. ಈ ಸಿನೆಮಾ ಏನಾದರೂ ಸೂಪರ್‍ ಹಿಟ್ ಆಗಿದ್ದರೇ ಪೂರಿ ಜನಗಣಮನ ಸಿನೆಮಾ ಪೂರ್ಣಗೊಳಿಸಬೇಕಿತ್ತು. ಆದರೆ ಲೈಗರ್‍ ಶಾಕ್ ನಿಂದ ಚಿತ್ರತಂಡ ಸೈಲೆಂಟ್ ಆಗಿತ್ತು. ಇನ್ನೂ ಜನಗಣಮನ ಸಿನೆಮಾದ ಸೆಟ್ಟೇರುತ್ತಾ, ಅಥವಾ ಇಲ್ಲವೇ ಎಂಬುದರ ಬಗ್ಗೆ ಪೂರಿ ಟೀಂ ಯಾವುದೇ ಕ್ಲಾರಿಟಿ ಮಾತ್ರ ಕೊಟ್ಟಿಲ್ಲ.

ಇನ್ನೂ ಲೈಗರ್‍ ಸೋಲಿನಿಂದ ಚಾರ್ಮಿ ಸೋಷಿಯಲ್ ಮಿಡಿಯಾದಲ್ಲಿ ವಿಮರ್ಶೆಗಳ ಕಾರಣದಿಂದ ಆಕೆ ಸೋಷಿಯಲ್ ಮಿಡಿಯಾದಿಂದ ದೂರವೇ ಉಳಿದಿದ್ದರು. ಇದೀಗ ಚಾರ್ಮಿ ಪೂರಿ ಜೊತೆಗೆ ಕಾಣಿಸಿಕೊಂಡಿದ್ದು, ಮತ್ತೊಂದು ಪ್ರಾಜೆಕ್ಟ್ ಶುರು ಮಾಡಲಿದ್ದಾರೆ ಎಂಬ ಮಾತುಗಳು ಇದೀಗ ಸಿನಿವಲಯದಲ್ಲಿ ಕೇಳಿಬರುತ್ತಿವೆ.

Most Popular

To Top