ಪ್ರಿಯಕರನ್ನು ಗಟ್ಟಿಯಾಗಿ ತಬ್ಬಿಕೊಂಡು ಮುತ್ತಿನ ಸುರಿಮಳೆಗೈದ ಸ್ಟಾರ್ ನಟಿ ಶ್ರುತಿ ಹಾಸನ್….!

ಬಹುಬೇಡಿಕೆ ನಟಿ ಶ್ರುತಿ ಹಾಸನ್ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳಿಂದಲೂ ಸಹ ಸಖತ್ ಸುದ್ದಿಯಾಗುತ್ತಿರುತ್ತಾರೆ. ಸುಮಾರು ಎರಡು ವರ್ಷಗಳಿಂದ ಶ್ರುತಿ ಹಾಸನ್ ಡೂಡಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದಾರೆ. ಸುಮಾರು ದಿನಗಳಿಂದ ಇಬ್ಬರೂ ಸಹಜೀವನ ಸಹ ನಡೆಸುತ್ತಿದ್ದಾರೆ. ಜೊತೆಗೆ ಮುಂಬೈನಲ್ಲಿ ಪ್ಲಾಟ್ ಒಂದನ್ನು ಖರಿದೀಸಿ ಅದರಲ್ಲೇ ಒಟ್ಟಿಗೆ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಶೂಟಿಂಗ್ ಶೆಡ್ಯೂಲ್ಡ್ ಇಲ್ಲದೇ ಇದ್ದಾಗ ಪ್ರಿಯಕರನೊಂದಿಗೆ ಕಾಲ ಕಳೆಯುತ್ತಿರುತ್ತಾರೆ. ಇದೀಗ ಇಬ್ಬರೂ ತಬ್ಬಿಕೊಂಡು ಪೊಟೋ ಒಂದನ್ನು ಹಂಚಿಕೊಂಡಿದ್ದು, ಪೊಟೋ ಸಖತ್ ವೈರಲ್ ಆಗುತ್ತಿದೆ.

ಸಿನಿರಂಗದಲ್ಲಿ ಅನೇಕ ನಟಿಯರು ತಮ್ಮ ರಿಲೇಷನ್ ಶಿಪ್ ಬಗ್ಗೆ ಸೀಕ್ರೇಟ್ ಆಗಿಯೇ ಇಡುತ್ತಾರೆ. ಆದರೆ ಶ್ರುತಿ ಹಾಸನ್ ಮಾತ್ರ ಎಲ್ಲರಿಗಿಂತಲೂ ವಿಭಿನ್ನ ಎಂದೇ ಹೇಳಬಹುದು. ಆಕೆ ಪಾಶ್ವಾತ್ಯ ಸಂಸ್ಕೃತಿಯನ್ನು ಫಾಲೋ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ರಿಲೇಷನ್ಸ್, ಅಫೈರ್‍ ಬಗ್ಗೆ ಒಪೆನ್ ಆಗಿಯೇ ಮಾಡುತ್ತಿದ್ದಾರೆ. ಆಕೆ ತನ್ನ ಅಫೈರ್‍ ಬಗ್ಗೆ ಯಾವುದೇ ರೀತಿಯಲ್ಲೂ ನಿಗೂಡವಾಗಿ ಇಡಲಿಲ್ಲ. ಸುಮಾರು ದಿನಗಳ ಕಾಲ ಲಂಡನ್ ಮೂಲದ ಮೈಖಲ್ ಕೊರ್ಸ್ಲೆ ಎಂಬಾತನೊಂದಿಗೆ ಡೇಟಿಂಗ್ ನಡೆಸಿದರು. ಆತನೊಂದಿಗೆ ಸಹಜೀವನ ಸಹ ನಡೆಸಿದ್ದರು. ಬಳಿಕ ಆಕೆ ಆತನೊಂದಿಗೆ ಬ್ರೇಕಪ್ ಮಾಡಿಕೊಂಡರು. ಬಳಿಕ ಆಕೆ ಖ್ಯಾತ ಡೂಡಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಎಂಬಾತನೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ. ಸದಾ ಅವರಿಬ್ಬರೂ ಕ್ಲೋಜ್ ಆಗಿ ಪೊಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೊಂದು ರೊಮ್ಯಾಂಟಿಕ್ ಪೊಟೋ ಹಂಚಿಕೊಂಡಿದ್ದು ಪೊಟೋ ಸಖತ್ ವೈರಲ್ ಆಗುತ್ತಿದೆ.

ನಟಿ ಶ್ರುತಿ ಹಾಸನ್ ಮೈಖಲ್ ಜೊತೆಗೆ ಬ್ರೇಕಪ್ ಮಾಡಿಕೊಂಡ ಬಳಿಕ ಸುಮಾರು ವರ್ಷಗಳ ಕಾಲ ಸಿನೆಮಾಗಳಿಂದ ದೂರ ಸಹ ಆಗಿದ್ದರು. ಬಳಿಕ ಆಕೆ 2020 ರವರೆಗೂ ಸಿಂಗಲ್ ಆಗಿದ್ದ ಶ್ರುತಿ ಹಾಸನ್ ಮುಂಬೈ ಮೂಲದ ಡೂಡಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಜೊತೆಗೆ ಡೇಟಿಂಗ್ ಶುರು ಮಾಡಿದರು. ಸುಮಾರು ಎರಡು ವರ್ಷಗಳಿಂದ ಆಕೆ ಆತನೊಂದಿಗೆ ಸಹಜೀವನ ಸಹ ನಡೆಸುತ್ತಿದ್ದಾರೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಆತನೊಂದಿಗಿನ ಪೊಟೋಗಳು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಶಾಂತಾನು ಜೊತೆಗೆ ರೊಮ್ಯಾಂಟಿಕ್ ಆಗಿರುವ ಪೊಟೋ ಒಂದನ್ನು ಶ್ರುತಿ ಹಾಸನ್ ತನ್ನ ಇನ್ಸ್ಟಾ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದರು. ಈ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇನ್ನೂ ಈ ಪೊಟೋಗೆ ಆಕೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದಾರೆ. ನನ್ನ ಸರ್ವಸ್ವ ಎಂದು  ಹಾರ್ಟ್ ಎಮೋಜಿ ಹಾಕಿದ್ದರು. ಇನ್ನೂ ಆಕೆ ತನ್ನ ಪ್ರಿಯಕರನ್ನು ಗಟ್ಟಿಯಾಗಿ ತಬ್ಬಿಕೊಂಡು ರೊಮ್ಯಾಂಟಿಕ್ ಆಗಿ ಪೋಸ್ ಕೊಟ್ಟಿದ್ದು, ಪೊಟೋ ಸಖತ್ ವೈರಲ್ ಆಗುತ್ತಿದೆ. ಇನ್ನೂ ವರ್ಷದ ಆರಂಭದಲ್ಲೇ ಶ್ರುತಿ ಹಾಸನ್ ಒಳ್ಳೆಯ ಸಕ್ಸಸ್ ಕಂಡುಕೊಂಡರು. ವಾಲ್ತೇರು ವೀರಯ್ಯ ಹಾಗೂ ವೀರಾಸಿಂಹಾರೆಡ್ಡಿ ಸಿನೆಮಾದ ಸಕ್ಸಸ್ ತನ್ನ ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ಆಕೆ ಸಲಾರ್‍ ಸಿನೆಮಾದಲ್ಲಿ ಹಾಗೂ ಹಾಲಿವುಡ್ ನಲ್ಲೂ ಸಹ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ.