Film News

ತ್ರಿವಿಕ್ರಮ್ ಶ್ರೀನಿವಾಸ್ ಸಿನೆಮಾದಿಂದ ಔಟ್ ಆದ ಪೂಜಾ ಹೆಗ್ಡೆ, ಇನ್ ಆಗಿದ್ದು ಆ ಲಕ್ಕಿ ಹಿರೋಯಿನ್….!

ಸೌತ್ ಸಿನಿರಂಗದ ಸ್ಟಾರ್‍ ನಟಿ ಪೂಜಾ ಹೆಗ್ಡೆ ಕಳೆದ ವರ್ಷದಿಂದ ಹಿಟ್ ಗಳಿಸಲು ವಿಫಲವಾಗುತ್ತಿದ್ದಾರೆ. ಕಳೆದ ವರ್ಷ ಆಕೆ ನಟಿಸಿದ ಎಲ್ಲಾ ಸಿನೆಮಾಗಳು ಡಿಜಾಸ್ಟರ್‍ ಆಗಿ ಉಳಿದವು. ಈ ವರ್ಷ ಬಾಲಿವುಡ್ ಸ್ಟಾರ್‍ ಸಲ್ಮಾನ್ ಖಾನ್ ಜೊತೆಗೆ ಕಿಸಿ ಕಾ ಬಾಯ್ ಕಿಸಿ ಕಿ ಜಾನ್ ಸಿನೆಮಾದಲ್ಲಿ ಸಹ ಪೂಜಾ ನಟಿಸಿದ್ದು, ಈ ಸಿನೆಮಾ ಸಹ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಸದ್ಯ ಪೂಜಾ ಹೆಗ್ಡೆ ತ್ರಿವಿಕ್ರಮ್ ನಿರ್ದೇಶನದ SSMB28 ಸಿನೆಮಾದಲ್ಲಿ ಮಹೇಶ್ ಬಾಬು ಜೊತೆಗೆ ನಟಿಸುತ್ತಿದ್ದಾರೆ. ಇದೀಗ ಪೂಜಾ ಹೆಗ್ಡೆ ಕುರಿತಂತೆ ಸುದ್ದಿಯೊಂದು ಕೇಳಿಬರುತ್ತಿದೆ. ತ್ರಿವಿಕ್ರಮ್ ರವರ ಮುಂದಿನ ಸಿನೆಮಾದಲ್ಲಿ ಪೂಜಾ ಬದಲಿಗೆ ಮತ್ತೋರ್ವ ಹಿರೋಯಿನ್ ರವರು ಎಂಟ್ರಿ ಕೊಡಲಿದ್ದಾರಂತೆ.

ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್ ನಲ್ಲಿ SSMB28 ಸಿನೆಮಾದ ಮೂಲಕ ಹ್ಯಾಟ್ರಿಕ್ ಪೂರ್ಣಗೊಳಿಸಲಿದ್ದಾರೆ. ಇದೀಗ ಪೂಜಾ ಹೆಗ್ಡೆ ರವರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ತ್ರಿವಿಕ್ರಮ್ ರವರು ಈ ಸಿನೆಮಾದ ಬಳಿಕ ಅಲ್ಲು ಅರ್ಜುನ್ ರವರ ಜೊತೆಗೆ ಸಿನೆಮಾ ಮಾಡಲಿದ್ದಾರಂತೆ. ಈ ಸಿನೆಮಾದಲ್ಲಿ ಪೂಜಾ ಹೆಗ್ಡೆಗೆ ಬದಲಿಗೆ ಸಂಯುಕ್ತಾ ಮಿನನ್ ರವರನ್ನು ತೆಗೆದುಕೊಳ್ಳಲಿದ್ದಾರಂತೆ. ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ರವರ ಸಿನೆಮಾ ಏನಾದರೂ ತಡವಾದರೇ ಮುಂದಿನ ಸಿನೆಮಾದಲ್ಲಾದರೂ ಸಂಯುಕ್ತಾ ಮಿನನ್ ರವರನ್ನೇ ತೆಗೆದುಕೊಳ್ಳಲು ನಿರ್ಧಾರ ಮಾಡಿಕೊಂಡಿದ್ದಾರಂತೆ. ಇನ್ನೂ ತ್ರಿವಿಕ್ರಮ್ ರವರ ಮುಂದಿನ ಸಿನೆಮಾದಲ್ಲಿ ಪೂಜಾ ಹೆಗ್ಡೆ ನಟಿಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಪೂಜಾ ಹೆಗ್ಡೆ ಸ್ಥಾನದಲ್ಲಿ ಸಂಯುಕ್ತಾ ಮಿನನ್ ಇನ್ ಆಗಲಿದ್ದಾರೆ.

ಇನ್ನೂ ಪೂಜಾ ಹೆಗ್ಡೆ ಬ್ಯಾಕ್ ಟು ಬ್ಯಾಕ್ ಸೋಲುಗಳ ಮೂಲಕ ಅಪಜಯಗಳನ್ನು ಕಾಣುತ್ತಿದ್ದಾರೆ. ಈ ಕಾರಣದಿಂದ ಪೂಜಾ ಹೆಗ್ಡೆ ಬದಲಿಗೆ ಸಂಯುಕ್ತಾ ಮಿನನ್ ರವರನ್ನು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಹಿಟ್ ಮೇಲೆ ಹಿಟ್ ಸಿನೆಮಾಗಳನ್ನು ಸಂಯುಕ್ತಾ ಮಿನನ್ ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಸಂಯುಕ್ತಾ ಮಿನನ್ ಭೀಮ್ಲಾ ನಾಯಕ್, ಬಿಂಬಿಸಾರ, ಸಾರ್, ವಿರೂಪಾಕ್ಷ  ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಆಕೆಯನ್ನು ಇದೀಗ ಗೋಲ್ಡನ್ ಲೆಗ್ ಎಂತಲೂ ಕರೆಯುತ್ತಿದ್ದಾರೆ. ಇದೀಗ ಸಂಯುಕ್ತಾ ಮಿನನ್ ಗೆ ಸೌತ್ ನಲ್ಲಿ ಸಿನೆಮಾಗಳ ಆಫರ್‍ ಗಳು ಹರಿದುಬರುತ್ತಿವೆ ಎಂದು ಹೇಳಲಾಗುತ್ತಿದೆ.

ಇನ್ನೂ ಪೂಜಾ ಹೆಗ್ಡೆ ಕಳೆದ ವರ್ಷ ಬೀಸ್ಟ್, ರಾಧೇಶ್ಯಾಮ್, ಆಚಾರ್ಯ, ಸರ್ಕಸ್ ಎಂಬ ಸಿನೆಮಾಗಳಲ್ಲಿ ನಟಿಸಿದ್ದರು. ಈ ಎಲ್ಲಾ ಸಿನೆಮಾಗಳೂ ಸ್ಟಾರ್‍ ನಟರ ಸಿನೆಮಾಗಳಾದರೂ ಸಹ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಇನ್ನೂ ಇತ್ತೀಚಿಗಷ್ಟೆ ತೆರೆಕಂಡ ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಸಿನೆಮಾ ಸಹ ಆಕೆಯ ನಿರೀಕ್ಷೆಯನ್ನು ಹುಸಿ ಮಾಡಿದೆ ಎಂದೇ ಹೇಳಬಹುದಾಗಿದೆ. ಸದ್ಯ SSMB28 ಸಿನೆಮಾದ ಮೇಲೆ ಪೂಜಾ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು, ಈ ಸಿನೆಮಾ ಆದರೂ ಆಕೆಗೆ ಬಿಗ್ ಬ್ರೇಕ್ ನೀಡುತ್ತಾ ಎಂಬುದನ್ನುಕಾದು ನೋಡಬೇಕಿದೆ.

Most Popular

To Top