Film News

ಹುಟ್ಟುಹಬ್ಬದಂದು ಬೆಡ್ ರೂಂ ಪೊಟೋಸ್ ಶೇರ್ ಮಾಡಿದ ಶ್ರುತಿ ಹಾಸನ್, ಆಕೆಯ ಮನಸ್ಸಿನಲ್ಲಿ ಕೋರಿಕೆ ಹೊರಹಾಕಿದ ಬ್ಯೂಟಿ…!

ಸೌತ್ ಸಿನಿರಂಗದ ಬಹುಬೇಡಿಕೆ ಹಾಗೂ ಸ್ಟಾರ್‍ ನಟಿ ಶ್ರುತಿ ಹಾಸನ್ ರವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ನಿಮಿತ್ತ ಆಕೆ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಇನ್ನೂ ಇದರ ಜೊತೆಗೆ ಆಕೆ ಇಂಟ್ರಸ್ಟಿಂಗ್ ಕಾಮೆಂಟ್ ಸಹ ಮಾಡಿದ್ದು, ಮೇಕಪ್ ಲೆಸ್ ಆಗಿರುವ ಆಕೆಯ ಪೊಟೋಗಳು ಎಲ್ಲಾ ಕಡೆ ವೈರಲ್ ಆಗುತ್ತಿದೆ. ಇನ್ನೂ ಶ್ರುತಿ ಹಾಸನ್ ಹುಟ್ಟುಹಬ್ಬದ ಅಂಗವಾಗಿ ಆಕೆಗೆ ಅಭಿಮಾನಿಗಳು ಸೇರಿದಂತೆ ಅನೇಕ ಸಿನೆಮಾ ಸೆಲೆಬ್ರೆಟಿಗಳಿಂದ ಶುಭಾಷಯಗಳ ಸುರಿಮಳೆಯಾಗುತ್ತಿದೆ.

ಸ್ಟಾರ್‍ ನಟ ಕಮಲ್ ಹಾಸನ್ ಪುತ್ರಿಯಾದ ಶ್ರುತಿ ಹಾಸನ್ ಸ್ವಂತ ಪ್ರತಿಭೆಯಿಂದ ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ಇನ್ನೂ ಆಕೆಗೆ ಇಂದಿಗೆ (ಜ.28) 36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆಕೆ 1986 ಜನವರಿ 28 ರಂದು ಜನಿಸಿದ್ದಾರೆ.  ಇನ್ನೂ ಆಕೆ ತನ್ನ ಹುಟ್ಟುಹಬ್ಬದ ಅಂಗವಾಗಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಮೇಕಪ್ ಲೆಸ್ ಆಗಿ ಪೊಟೋಗಳ ನ್ನು ಹಂಚಿಕೊಳ್ಳುವುದರ ಜೊತೆಗೆ ಆಕೆ ಒಂದು ಸುದೀರ್ಘವಾದ ಸಂದೇಶವನ್ನು ಸಹ ಪೋಸ್ಟ್ ಮಾಡಿದ್ದಾರೆ. ಬೆಡ್ ಮೇಲಿಂದ ಏಳುತ್ತಿರುವ ಪೊಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇನ್ನೂ ಆಕೆ ಹಂಚಿಕೊಂಡ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಆಕೆಯ ಅಭಿಮಾನಿಗಳೂ ಸಹ ಶುಭಾಷಯಗಳನ್ನು ಕೋರುತ್ತಿದ್ದಾರೆ.

ಇನ್ನೂ ಶ್ರುತಿ ಹಾಸನ್ ಪೊಟೋಗಳ ಜೊತೆಗೆ ನೋಟ್ ಒಂದನ್ನು ಹಂಚಿಕೊಂಡಿದ್ದರು. ಪ್ರತಿ ಹುಟ್ಟಿದ ಹಬ್ಬ ಕ್ಯಾಂಡಲ್ ಗಳನ್ನು ಆರಿಸುತ್ತಾ ಮನಸ್ಸಿನಲ್ಲಿ ಅಂದುಕೊಂಡ ಕೆಲವೊಂದು ನಿಜ ಆಗಬೇಕು. ಈ ವರ್ಷ ಎಲ್ಲರೂ ತಮ್ಮ ಕೋರಿಕೆಗಳನ್ನು ಈಡೇಸಿಕೊಳ್ಳಬೇಕು, ತಮ್ಮ ಗುರಿಯನ್ನು ತಲುಪಬೇಕು ಎಂದು ಕೋರುತ್ತಿದ್ದೇನೆ. ನನ್ನ ಒಳಿತನ್ನು ಕೋರುವ ಸ್ವಚ್ಚವಾದ ಹೃದಯಗಳಿಗೆ ಧನ್ಯವಾದಗಳು ಎಂದು ಹೇಳುತ್ತಾ ಸುಂದರವಾದ ಸಂದೇಶವನ್ನು ಹಂಚಿಕೊಂಡಿದ್ದಾರೆ. ಇನ್ನೂ ಆಕೆ ಈ ಪೊಟೋಗಳಲ್ಲಿ ಮೇಕಪ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಬರ್ತ್ ಡೇ ಗಿಫ್ಟ್ ಅದುರ್ಸ್ ಎಂದೂ ಅಭಿಮಾನಿಗಳು ಆಕೆಯ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಟಿ ಶ್ರುತಿ ಹಾಸನ್ ವರ್ಷದ ಆರಂಭದಲ್ಲೇ ಒಳ್ಳೆಯ ಓಪೆನಿಂಗ್ ಕಂಡುಕೊಂಡಿದ್ದಾರೆ. ವಾಲ್ತೇರು ವೀರಯ್ಯ ಹಾಗೂ ವೀರಸಿಂಹಾರೆಡ್ಡಿ ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿವೆ. ಇನ್ನೂ ಈ ಸಿನೆಮಾಗಳಿಗಾಗಿ ಆಕೆಗ 5 ಕೋಟಿ ಸಂಭಾವನೆ ನೀಡಲಾಗಿದೆ ಎಂಬ ಸುದ್ದಿ ಸಹ ಹರಿದಾಡುತ್ತಿದೆ. ಸದ್ಯ ಆಕೆ ಬಹುನಿರೀಕ್ಷಿತ ಸಲಾರ್‍ ಸಿನೆಮಾದಲ್ಲಿ ಪ್ರಭಾಸ್ ಜೊತೆಗೆ ನಟಿಸುತ್ತಿದ್ದಾರೆ. ಜೊತೆಗೆ ಹಾಲಿವುಡ್ ಸಿನೆಮಾ ಒಂದರಲ್ಲೂ ಸಹ ಶ್ರುತಿ ಹಾಸನ್ ಬಣ್ಣ ಹಚ್ಚಿದ್ದಾರೆ. ಇನ್ನೂ ಶೀಘ್ರದಲ್ಲೇ ಶ್ರುತಿ ಹಾಸನ್ ಹಾಗೂ ಶಾಂತಾನು ಹಜಾರಿಕಾ ಮದುವೆ ನಡೆಯಲಿದೆ ಎಂದು ಸಹ ಕೇಳಿಬರುತ್ತಿದೆ.

Most Popular

To Top