Film News

ಮಾಜಿ ಪತಿಗೆ ಪ್ರೀತಿಯ ಅಪ್ಪುಗೆ ನೀಡಿದ ಮಲೈಕಾ, ವೈರಲ್ ಆದ ಪೊಟೋಸ್ …!

ನಟಿ ಮಲೈಕಾ ಅರೋರಾ ವಯಸ್ಸು ಹೆಚ್ಚಾದರೂ ತಮ್ಮ ಬ್ಯೂಟಿಯನ್ನು ಕಾಪಾಡಿಕೊಂಡು ಜಿಮ್, ಯೋಗಾ ಮೂಲಕ ತಮ್ಮ ಫಿಜಿಕ್ ಮೈಂಟೈಂನ್ ಮಾಡುತ್ತಿರುತ್ತಾರೆ. ಮಲೈಕಾ ಅರೋರಾ ಸಹ ಸದಾ ಜಿಮ್, ಯೋಗಾ ಮೂಲಕವೇ ತಮ್ಮ ಫಿಜಿಕ್ ಕಾಪಾಡಿಕೊಂಡು ಬರುತ್ತಿದ್ದಾರೆ. ವಯಸ್ಸಾದರೂ ಸಹ ನಟಿ ಮಲೈಕಾ ಯುವ ನಟಿಯರನ್ನು ನಾಚಿಸುವಂತಹ ಲುಕ್ಸ್ ಕೊಡುತ್ತಿದ್ದಾರೆ. ತುಂಬಾನೇ ಬ್ಯೂಟಿಪುಲ್ ಆಗಿ ಕಾಣುವ ಈಕೆ ಸೌಂದರ್ಯ ಪ್ರದರ್ಶನದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹಾಟ್ ಟ್ರೀಟ್ ಕೊಡುತ್ತಿರುತ್ತಾರೆ. ಇದೀಗ ತನ್ನ ಮಾಜಿ ಪತಿಯನ್ನು ಹಗ್ ಮಾಡಿಕೊಂಡಿರುವ ಪೊಟೋಗಳು ವೈರಲ್ ಆಗಿದೆ.

ಬಾಲಿವುಡ್ ಸ್ಟಾರ್‍ ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ರನ್ನು ಪ್ರೀತಿಸಿ 1998 ರಲ್ಲಿ ಮದುವೆಯಾದರು. ಸುಮಾರು ವರ್ಷಗಳ ಕಾಲ ಸಂತೋಷದಿಂದ ಜೀವನ ಸಾಗಿಸಿದ ಈ ಜೋಡಿ 2017ರಲ್ಲಿ ವಿಚ್ಚೇದನ ಪಡೆದುಕೊಂಡರು. ಇನ್ನೂ ಅರ್ಬಾಜ್ ಹಾಗೂ ಮಲೈಕಾ ರವರಿಗೆ ಅರ್ಹಾನ್ ಖಾನ್ ಎಂಬ ಮಗನಿದ್ದು, ಸದ್ಯ ಈತ ಮಲೈಕಾ ಜೊತೆಯಲ್ಲಿದ್ದಾನೆ. ಇನ್ನೂ ಮಲೈಕಾ 2016 ರಿಂದ ಯಂಗ್ ನಟ ಅರ್ಜುನ್ ಕಪೂರ್‍ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ ಮಲೈಕಾ ವಿಚ್ಚೇದನ ಪಡೆದಯುವುದಕ್ಕೂ ಮುಂಚೆಯಿಂದಲೇ ಅವರಿಬ್ಬರ ನಡುವೆ ಅಪೈರ್‍ ಇತ್ತು ಎನ್ನಲಾಗಿದೆ. ಈ ಕಾರಣದಿಂದಲೇ ಅರ್ಬಾಜ್ ಹಾಗೂ ಮಲೈಕಾ ವಿಚ್ಚೇದನ ಪಡೆದುಕೊಂಡರು ಎಂದೂ ಸಹ ಸುದ್ದಿಗಳು ಕೇಳಿಬಂದಿದ್ದವು. ನಟಿ ಮಲೈಕಾ ತನಗಿಂತ ಚಿಕ್ಕವಯಸ್ಸಿನ ಅರ್ಜುನ್ ಕಪೂರ್‍ ಜೊತೆಗೆ ಡೇಟಿಂಗ್ ನಲ್ಲಿರುವುದು ಬಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿ ಹರಿದಾಡುತ್ತಲೇ ಇದೆ.

ಇನ್ನೂ ಮಲೈಕಾ ಇತ್ತಿಚಿಗೆ ತನ್ನ ಮಾಜಿ ಪತಿಯನ್ನು ಭೇಟಿಯಾಗಿದ್ದಾರೆ. ಇಬ್ಬರೂ ತುಂಬಾ ಅನ್ಯೋನ್ಯತೆಯಿಂದ ಮಾತನಾಡಿಕೊಂಡಿದ್ದಾರೆ. ಇನ್ನೂ ಮಲೈಕಾ ಹಾಗೂ ಅರ್ಬಾಜ್ ಪುತ್ರ ಅರ್ಹಾನ್ ಖಾನ್ ವಿದೇಶಕ್ಕೆ ಹೋಗುತ್ತಿದ್ದು, ಆತನಿಗೆ ಸೆಂಡ್ ಆಫ್ ನೀಡುವ ನಿಟ್ಟಿನಲ್ಲಿ ಇಬ್ಬರೂ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ಸಮಯದಲ್ಲಿ ಇಬ್ಬರೂ ಮಾತನಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಇಬ್ಬರೂ ವಿಷ್ ಮಾಡುತ್ತಾ ಹಗ್ ಮಾಡಿದ್ದಾರೆ. ಬಳಿಕ ಇಬ್ಬರೂ ತಮ್ಮ ದಾರಿ ತಮ್ಮದು ಎಂದು ಹೋಗಿದ್ದಾರೆ. ಇನ್ನೂ ಈ ವೇಳೆ ತೆಗೆದ ಕೆಲವೊಂದು ಪೊಟೊಗಳು ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನೂ ಮಲೈಕಾ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲೇ ಇರುತ್ತಾರೆ ಜೊತೆಗೆ ಆಕೆ ಧರಿಸುವ ಡ್ರೆಸ್ ಗಳ ಕಾರಣದಿಂದ ಟ್ರೋಲ್ ಸಹ ಆಗುತ್ತಿರುತ್ತಾರೆ.

ಮಲೈಕಾ ಅರೋರಾ ಸಹ ಸದಾ ಜಿಮ್, ಯೋಗಾ ಮೂಲಕವೇ ತಮ್ಮ ಫಿಜಿಕ್ ಕಾಪಾಡಿಕೊಂಡು ಬರುತ್ತಿದ್ದಾರೆ. ಅನೇಕ ಯಂಗ್ ಬ್ಯೂಟಿಗಳಿಗೆ ಆಕೆ ಸ್ಪೂರ್ತಿಯಾಗಿದ್ದಾರೆ. ಮಹಾರಾಷ್ಟ್ರದ ಥಾನೆಯಲ್ಲಿ ಜನ್ಮಿಸಿದ ಮಲೈಕಾ ಫಿಟ್ ನೆಸ್ ಸ್ಟಾರ್‍ ಆಗಿ ಕ್ರೇಜ್ ಪಡೆದುಕೊಂಡ ನಟಿಯಾಗಿದ್ದಾರೆ. ಅದರಲ್ಲೂ ಆಕೆಗೆ ಚೆಯ್ಯ ಚೆಯ್ಯ ಎಂಬ ಹಾಡಿನ ಮೂಲಕ ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ಮಲೈಕಾ ಹಾಗೂ ಅರ್ಜುನ್ ರವರು ಪ್ರೇಮ ಪಕ್ಷಿಗಳಂತೆ ಸ್ವೇಚ್ಚೆಯಿಂದ ಓಡಾಡುತ್ತಿದ್ದಾರೆ. ಇನ್ನೂ ಶೀಘ್ರದಲ್ಲೇ ಈ ಜೋಡಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಲೇ ಇದೆ. ಆದರೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಸುದ್ದಿ ಮಾತ್ರ ಹೊರಬಂದಿಲ್ಲ.

Most Popular

To Top