Film News

ಸೀನಿಯರ್ ನಟಿ ಸುರೇಖಾವಾಣಿ ಮಗಳು ಸುಪ್ರೀತಾ ಯೂಟ್ಯೂಬರ್ ಜೊತೆ ಪ್ರೇಮಪಯಣ, ವೈರಲ್ ಆದ ಸುದ್ದಿ…..!

ತೆಲುಗು ಸಿನಿರಂಗದಲ್ಲಿ ಕ್ಯಾರೆಕ್ಟರ್‍ ಪಾತ್ರಗಳ ಮೂಲಕ ಸ್ಟಾರ್‍ ಆದ ನಟಿ ಸುರೇಖಾ ವಾಣಿ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಆಕೆಯ ಮಗಳು ಇನ್ನೂ ಸಿನಿರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಸೊಷಿಯಲ್ ಮಿಡಿಯಾ ಮೂಲಕವೇ ದೊಡ್ಡ ಕ್ರೇಜ್ ಪಡೆದುಕೊಂಡಿದ್ದಾರೆ. ಇನ್ನೂ ತನ್ನ ಮಗಳನ್ನು ಸಿನಿರಂಗದಲ್ಲಿ ಸ್ಟಾರ್‍ ಮಾಡಲು ಸಹ ಕನಸು ಕಂಡಿದ್ದಾರೆ. ಇದೀಗ ಸುರೇಖಾ ವಾಣಿ ಪುತ್ರಿ ಸುಪ್ರೀತಾ ಬಗ್ಗೆ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಸುರೇಖಾವಾಣಿ ಪುತ್ರಿ ಸುಪ್ರೀತಾ ಸಿನೆಮಾಗಳಲ್ಲಿ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಸಖತ್ ಫೇಂ ಸಂಪಾದಿಸಿಕೊಂಡಿದ್ದಾರೆ. ಸೋಷಿಯಲ್ ಮಿಡಿಯಾ ಮೂಲಕ ಆಕೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಮಿಲಿಯನ್ ಗಟ್ಟಲೇ ಫಾಲೋವರ್ಸ್‌ಗಳನ್ನು ಸಹ ಈಕೆ ಹೊಂದಿದ್ದಾರೆ. ಸದಾ ತನ್ನ ಫಾಲೋವರ್ಸ್‌ಗೆ ಟಚ್ ನಲ್ಲೇ ಇರುತ್ತಾರೆ. ಇನ್ನೂ ಸುಪ್ರೀತಾರನ್ನು ಹಿರೋಯಿನ್ ಆಗಿ ಮಾಡಲು ಸುರೇಖಾ ತುಂಬಾನೆ ಕನಸುಗಳನ್ನು ಕಂಡಿದ್ದಾರೆ. ಆದರೆ ಇದೀಗ ಆಕೆ ಯೂಟ್ಯೂಬರ್‍ ಒಬ್ಬರೊಂದಿಗೆ ಪ್ರೀತಿಗೆ ಬಿದ್ದಿದ್ದಾರೆ ಎಂಬ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ. ಸಿನೆಮಾ ನಟಿಯರಿಗೆ ಕೆಲ ಸಿನೆಮಾಗಳು ಮಾಡಿದ ಬಳಿಕ ಇಂತಹ ರೂಮರ್‍ ಗಳು ಸಾಮಾನ್ಯ ಆದರೆ ಸುಪ್ರೀತಾ ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಈ ರೂಮರ್‍ ಮೂಲಕ ಸುದ್ದಿಯಾಗಿದ್ದಾರೆ.

ಸುರೇಖಾವಾಣಿ ಪುತ್ರಿ ಸುಪ್ರೀತಾ ಖ್ಯಾತ ಯೂಟ್ಯೂಬರ್‍ ನಿಖಿಲ್ ವಿಜಯೇಂದ್ರ ಸಿಂಹ ಜೊತೆಗೆ ಪ್ರೇಮಪಯಣ ಸಾಗಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಇದೀಗ ವೈರಲ್ ಆಗುತ್ತಿದೆ. ಇಬ್ಬರೂ ಈಗಾಗಲೇ ಲವ್ ಮಾಡುತ್ತಿದ್ದು, ಇಬ್ಬರೂ ಜೋಡಿಯಾಗಿ ತಿರುಗಾಡುತ್ತಿದ್ದಾರೆ. ಇಬ್ಬರೂ ತುಂಬಾ ಕ್ಲೋಜ್ ಆಗಿದ್ದಾರೆ. ಇಬ್ಬರೂ ರೊಮ್ಯಾಂಟಿಕ್ ಪೊಟೋಗಳನ್ನು ತೆಗೆದುಕೊಂಡಿದ್ದಾರೆ. ಜೊತೆಗೆ ತಮ್ಮ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆ ಸಹ ನೀಡುತ್ತಿಲ್ಲ. ಇನ್ನೂ ಸಾಮಾನ್ಯವಾಗಿ ಸುರೇಖಾವಾಣಿ ಹಾಗೂ ತಮ್ಮ ಮಗಳು ಸುಪ್ರೀತಾ ಬಗ್ಗೆ ಏನಾದರೂ ರೂಮರ್‍ ಗಳು ಕೇಳಿಬಂದರೇ ಕೂಡಲೇ ಆ ಬಗ್ಗೆ ರಿಯಾಕ್ಟ್ ಆಗುತ್ತಾರೆ. ಆದರೆ ಈ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದ್ದರೂ ಸಹ ಸುಪ್ರೀತಾ ರಿಯಾಕ್ಟ್ ಆಗದೇ ಇರುವ ಕಾರಣ ಈ ಸುದ್ದಿ ನಿಜವೇ ಇರಬಹುದು ಎಂದು ಅನೇಕರು ಊಹೆ ಮಾಡಿಕೊಳ್ಳುತ್ತಿದ್ದಾರೆ.

ಸದ್ಯ ಸುರೇಖಾವಾಣಿ ಸಿನಿಮಾಗಳಲ್ಲಿ ಅಷ್ಟೊಂದು ಕಾಣಿಸಿಕೊಳ್ಳುತ್ತಿಲ್ಲ. ಆಕೆಗೆ ಆಫರ್‍ ಗಳೂ ಸಹ ಕಡಿಮೆಯಾಗುತ್ತಿವೆ. ಇನ್ನೂ ಈ ಹಿಂದೆ ಪ್ರಮೋಷನ್ ಕಾರ್ಯಕ್ರಮವೊಂದರಲ್ಲೂ ಸಹ ಸುರೇಖಾವಾಣಿ ಆಫರ್‍ ಗಳು ಬಂದರೇ ನಟಿಸಲು ನನಗೆ ಸಮಸ್ಯೆಯಿಲ್ಲ. ಸಿನಿರಂಗ ನನ್ನನ್ನು ಪಕ್ಕಕ್ಕಿಟ್ಟಿದೆ ಎಂದು ಹೇಳಿದ್ದರು. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಸುರೇಖಾವಾಣಿ ಹವಾ ಮಾತ್ರ ಕಡಿಮೆಯಾಗಿಲ್ಲ. ಸ್ಟಾರ್‍ ನಟಿಯರಂತೆ ಸುರೇಖಾ ವಾಣಿ ಹಾಗೂ ಸುಪ್ರೀತಾ ಸದಾ ಸದ್ದು ಮಾಡುತ್ತಲೇ ಇರುತ್ತಾರೆ.

Most Popular

To Top