Film News

ಶಾಂತಾನು ರನ್ನು ಪ್ರೀತಿಸಲು ಕಾರಣ ರಿವೀಲ್ ಮಾಡಿದ ಶ್ರುತಿ ಹಾಸನ್, ವೈರಲ್ ಆದ ಪೋಸ್ಟ್….!

ಪ್ರಸಕ್ತ ವರ್ಷದ ಆರಂಭದಲ್ಲೇ ಸೌತ್ ಸಿನಿರಂಗದ ಸ್ಟಾರ್‍ ನಟಿ ಶ್ರುತಿ ಹಾಸನ್ ಭಾರಿ ಸಕ್ಸಸ್ ಕಂಡುಕೊಂಡಿದ್ದಾರೆ. ಸುಮಾರು ದಿನಗಳ ಕಾಲ ಗ್ಯಾಪ್ ಬಳಿಕ ಶ್ರುತಿ ಹಾಸನ್ ವಕೀಲ್ ಸಾಭ್, ಕ್ರಾಕ್ ಸಿನೆಮಾದ ಮೂಲಕ ಕ್ರೇಜ್ ಪಡುಕೊಂಡರು. ವರ್ಷದ ಆರಂಭದಲ್ಲಿ ತೆರೆಕಂಡ ವೀರಸಿಂಹಾರೆಡ್ಡಿ ಹಾಗೂ ವಾಲ್ತೇರು ವೀರಯ್ಯ ಸಿನೆಮಾಗಳೂ ಸಹ ಭಾರಿ ಸಕ್ಸಸ್ ಕಂಡಿದೆ. ಈ ಕಾರಣದಿಂದ ಶ್ರುತಿ ಗೋಲ್ಡನ್ ಲೆಗ್ ಎಂಬ ಖ್ಯಾತಿ ಸಹ ಪಡೆದುಕೊಂಡಿದ್ದಾರೆ. ಈ ಸಿನೆಮಾಗಳ ಸಕ್ಸಸ್ ಅನ್ನು ಸಹ ಶ್ರುತಿ ಹಾಸನ್ ಭಾರಿ ಎಂಜಾಯ್ ಮಾಡುತ್ತಿದ್ದಾರೆ.

ಬಹುಬೇಡಿಕೆ ನಟಿ ಶ್ರುತಿ ಹಾಸನ್ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳಿಂದಲೂ ಸಹ ಸಖತ್ ಸುದ್ದಿಯಾಗುತ್ತಿರುತ್ತಾರೆ. ಸುಮಾರು ಎರಡು ವರ್ಷಗಳಿಂದ ಶ್ರುತಿ ಹಾಸನ್ ಡೂಡಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದಾರೆ. ಸುಮಾರು ದಿನಗಳಿಂದ ಇಬ್ಬರೂ ಸಹಜೀವನ ಸಹ ನಡೆಸುತ್ತಿದ್ದಾರೆ. ಜೊತೆಗೆ ಮುಂಬೈನಲ್ಲಿ ಪ್ಲಾಟ್ ಒಂದನ್ನು ಖರಿದೀಸಿ ಅದರಲ್ಲೇ ಒಟ್ಟಿಗೆ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಶೂಟಿಂಗ್ ಶೆಡ್ಯೂಲ್ಡ್ ಇಲ್ಲದೇ ಇದ್ದಾಗ ಪ್ರಿಯಕರನೊಂದಿಗೆ ಕಾಲ ಕಳೆಯುತ್ತಿರುತ್ತಾರೆ. ಇದೀಗ ಶ್ರುತಿ ಹಾಸನ್ ತಾನು ಏಕೆ ಶಾಂತಾನು ರವರನ್ನು ಪ್ರೀತಿ ಮಾಡಿದ್ದು, ಶಾಂತಾನು ರವರಲ್ಲಿ ಶ್ರುತಿ ಹಾಸನ್ ಗೆ ಇಷ್ಟವಾದ ಗುಣ ಯಾವುದು ಎಂದು ರಿವೀಲ್ ಮಾಡಿದ್ದಾರೆ. ಈ ಸಂಬಂಧ ಇನ್ಸ್ಟಾ ಸ್ಟೋರಿಯೊಂದನ್ನು ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ.

ಇನ್ನೂ ಶ್ರುತಿ ಹಾಸನ್ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಶಾಂತಾನು ರನ್ನು ಪ್ರೀತಿ ಮಾಡಲು ಕಾರಣವನ್ನು ರಿವೀಲ್ ಮಾಡಿದ್ದಾರೆ ಇನ್ಸ್ಟಾ ಸ್ಟೋರಿಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದು, ಶಾಂತಾನು ರಲ್ಲಿದ್ದ ಆ ಗುಣ ನೋಡಿ ಆತನನ್ನು ಪ್ರೀತಿ ಮಾಡಿದ್ದಾಗಿ ಶ್ರುತಿ ಹಾಸನ್ ಸೀಕ್ರೇಟ್ ರಿವೀಲ್ ಮಾಡಿದ್ದಾರೆ. ಇನ್ನೂ ಆಕೆ ಹಂಚಿಕೊಂಡ ಪೋಸ್ಟ್ ನಲ್ಲಿರುವಂತೆ ನಾವು ಇಬ್ಬರೂ ಪುಡ್ ಲವರ್ಸ್, ಇಬ್ಬರೂ ಆಹಾರವನ್ನು ಎಂಜಾಯ್ ಮಾಡುತ್ತಾ ಸೇವಿಸುತ್ತೇವೆ ಇಬ್ಬರೂ ತಿನ್ನುವುದಕ್ಕಾಗಿಯೇ ಬದುಕುತ್ತಿದ್ದೇವೆ ಎಂದು ಹೇಳುತ್ತಾ ಪ್ರಿಯಕರನಾದ ಶಾಂತಾನು ಕಚ್ಚುವ ಪೋಸ್ಟ್ ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ಅಷ್ಟೇಅಲ್ಲದೇ ನಾವಿಬ್ಬರೂ ಊಟ ಮಾಡುವಾಗ ಅನೇಕ ವಿಚಾರಗಳನ್ನು ಮಾತನಾಡಿಕೊಳ್ಳುತ್ತಿರುತ್ತೇವೆ. ಶಾಂತಾನು ನನಗೆ ಸಿಕ್ಕಿದ್ದು ತುಂಬಾ ಸಂತೋಷವಾಗಿದೆ ಎಂದಿದ್ದಾರೆ. ಇದರ ಜೊತೆಗೆ ಆತ ನನ್ನ ಜೀವನದಲ್ಲಿ ಎಂಟ್ರಿ ಕೊಟ್ಟ ಬಳಿಕ ನನಗೆ ತುಂಬಾ ಅದೃಷ್ಟ ದೊರೆಯಿತು ಎಂದೂ ಸಹ ಹೇಳಿದ್ದಾರೆ. ಇನ್ನೂ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅನೇಕರು ಶಾಂತಾನು ರವರಲ್ಲಿರುವ ಆ ಗುಣವನ್ನು ನೋಡಿನೇ ಆತನನ್ನು ಪ್ರೀತಿ ಮಾಡುತ್ತಿದ್ದೀರಾ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

Most Popular

To Top