Film News

ಚಿರಂಜೀವಿ ಸಿನೆಮಾದ ಶೂಟಿಂಗ್ ಸೆಟ್ ನಲ್ಲಿ ಅಗ್ನಿ ಪ್ರಮಾದ, ಶಾಕ್ ಆದ ಅಭಿಮಾನಿಗಳು ಬಳಿಕ ನಿರಾಳ….!

ಸಿನೆಮಾ ಶೂಟಿಂಗ್ ನಡೆಯುವಾಗ ಅನೇಕ ದುರ್ಘಟನೆಗಳು ನಡೆಯುತ್ತಿರುತ್ತವೆ. ಈ ಹಾದಿಯಲ್ಲೇ ಮೆಗಾಸ್ಟಾರ್‍ ಚಿರಂಜೀವಿಯವರ ಸಿನೆಮಾ ಶೂಟಿಂಗ್ ಸೆಟ್ ನಲ್ಲಿ ಭಾರಿ ಅಗ್ನಿ ಪ್ರಮಾದ ಉಂಟಾಗಿದೆ. ಹೈದರಾಬಾದ್ ನ ಕೋಕಾಪೇಟ ಎಂಬಲ್ಲಿ ನಿರ್ಮಾಣವಾಗಿದ್ದ ಚಿರಂಜೀವಿ ಸಿನೆಮಾದ ಸೆಟ್ ನಲ್ಲಿ ಅಗ್ನಿ ಅವಘಡ ಉಂಟಾಗಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಇನ್ನೂ ಈ ಸುದ್ದಿ ತಿಳಿಯುತ್ತಿದ್ದಂತೆ ಒಂದೇ ಬಾರಿ ಚಿರು ಅಭಿಮಾನಿಗಳು ಶಾಕ್ ಆಗಿದ್ದಾರೆ. ಬಳಿಕ ನಿಜ ತಿಳಿದ ಬಳಿಕ ತುಸು ನಿರಾಳ ಸಹ ಆಗಿದ್ದಾರೆ.

ಹೈದರಾಬಾದ್ ನ ಕೋಕಾಪೇಟ ಬಳಿ ಚಿರು ಸಿನೆಮಾಗಾಗಿ ದೊಡ್ಡ ಸೆಟ್ ನಿರ್ಮಾಣ ಮಾಡಲಾಗಿತ್ತು. ಈ ಸಿನೆಮಾದಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿದೆ. ಇದನ್ನು ನೋಡಿದ ಸ್ಥಳೀಯರು ತುಂಬಾ ಟೆನ್ಷನ್ ಆಗಿದ್ದರು. ಅಲ್ಲಿನ ಸ್ಥಳೀಯರು ಕೂಡಲೇ ಈ ಕುರಿತು ಅಲ್ಲಿನ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸಮಾಚಾರ ತಲುಪಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯಾರೂ ಟೆನ್ಷನ್ ಪಡುವ ಅಗತ್ಯ ಸಹ ಇಲ್ಲ ಎಂದು ತಿಳಿದು ಬಂದಿದೆ. ಬಳಿಕ ಬೆಂಕಿ ನಂದಿಸಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆಯಂತೆ.

ಇನ್ನೂ ಚಿರಂಜೀವಿ ನಟಿಸುತ್ತಿದ್ದ ಸಿನೆಮಾ ಸೆಟ್ ನಲ್ಲಿ ಅಗ್ನಿಅವಘಡ ಸಂಭವಿಸಿದೆ ಎಂದು ಅನೇಕರು ತಿಳಿದು ಸಡನ್ ಆಗಿ ಶಾಕ್ ಆಗಿದ್ದರು. ಸದ್ಯ ಮೆಗಾಸ್ಟಾರ್‍ ಚಿರಂಜೀವಿ ಮೆಹರ್‍ ರಮೇಶ್ ನಿದೇರ್ಶನದ ಭೋಳಾ ಶಂಕರ್‍ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅನೇಕರು ಇದೇ ಶೂಟಿಂಗ್ ಸೆಟ್ ನಲ್ಲಿ ಅವಘಡ ಸಂಭವಿಸಿದೆ ಎಂದು ಭಾವಿಸಿದ್ದರು. ಆದರೆ ಅಗ್ನಿ ಅವಗಡ ಸಂಭವಿಸಿದ್ದು, ಆಚಾರ್ಯ ಸಿನೆಮಾಗಾಗಿ ನಿರ್ಮಾಣ ಮಾಡಿದ್ದ ಸೆಟ್ ನಲ್ಲಿ. ಕಳೆದ 2022 ಏಪ್ರಿಲ್ 29 ರಂದು ತೆರೆಕಂಡ ಆಚಾರ್ಯ ಸಿನೆಮಾದ ಧರ್ಮಸ್ಥಲಿ ಎಂಬ ಗ್ರಾಮ ನಿರ್ಮಾಣ ಮಾಡಿದ್ದರು. ಧರ್ಮಸ್ಥಲಿ ಎಂಬ ದೊಡ್ಡ ದೇವಾಲಯವನ್ನೇ ನಿಮಾರ್ಣ ಮಾಡಲಾಗಿತ್ತು. ಈ ಅದ್ದೂರಿ ಸೆಟ್ ಭಾರಿ ಸದ್ದು ಮಾಡಿತ್ತು. ಆದರೆ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಡಿಜಾಸ್ಟರ್‍ ಆಗಿತ್ತು. ಇದೇ ಧರ್ಮಸ್ಥಲಿ ಸೆಟ್ ನಲ್ಲೇ ಅಗ್ನಿ ಅವಘಡ ಸಂಭವಿಸಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇನ್ನೂ ಈ ಅಗ್ನಿ ಪ್ರಮಾದದ ಜೊತೆಗೆ ಮತ್ತೊಂದು ವಿಚಾರ ಸಹ ಚರ್ಚೆಯಾಗುತ್ತಿದೆ. ಈ ಸಿನೆಮಾ ಸೆಟ್ಟೇರಿದಾಗಿನಿಂತ ಅನೇಕ ಅವಘಡಗಳು ನಡೆದಿದ್ದವು. ಸೆಟ್ ನಿರ್ಮಾಣದ ಸಮಯದಲ್ಲೂ ಸಹ ಸೆಟ್ ಕುಸಿದು ಬೀಳುತ್ತಿತ್ತು ಎಂದು ಸುದ್ದಿಗಳೂ ಸಹ ಕೇಳಿಬಂದಿದ್ದವು. ಇದೀಗ ಅದೇ ಸೆಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಆಚಾರ್ಯ ಸಿನೆಮಾದ ಶಕುನ ಚೆನ್ನಾಗಿಲ್ಲ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

Most Popular

To Top