Film News

ಪ್ರೈವೇಟ್ ವಿಡಿಯೋ ಶೇರ್ ಮಾಡಿದ ಶ್ರುತಿ ಹಾಸನ್, ಪ್ರಿಯಕರನೊಂದಿಗೆ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್….!

ಸುಮಾರು ವರ್ಷಗಳಿಂದ ಶ್ರುತಿ ಹಾಸನ್ ಹಾಗೂ ಶಾಂತಾನು ಹಜಾರಿಕಾ ಡೇಟಿಂಗ್ ಮಾಡುತ್ತಿದ್ದಾರೆ. ಶ್ರುತಿ ತುಂಬಾನೆ ಇಂಡಿಪೆಂಡೆಂಟ್ ಆಗಿರಲು ಇಷ್ಟಪಡುತ್ತಾರೆ. ಜೊತೆಗೆ ಡೇರಿಂಗ್ ಅಂಡ್ ಡ್ಯಾಷಿಂಗ್ ವ್ಯಕ್ತಿತ್ವವನ್ನು ಹೊಂದಿದವಳು. ಆಕೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಫಾಲೋ ಮಾಡುತ್ತಾರೆ ಎಂದೇ ಹೇಳಬಹುದಾಗಿದೆ. ಈ ಹಾದಿಯಲ್ಲೇ ಆಕೆ ಶಾಂತಾನು ರನ್ನು ಲವ್ ಮಾಡುತ್ತಿರುವ ವಿಚಾರವನ್ನು ಒಪೆನ್ ಆಗಿಯೇ ಸೋಷಿಯಲ್ ಮಿಡಿಯಾದಲ್ಲಿ ತಿಳಿಸುತ್ತಿರುತ್ತಾರೆ. ಇದೀಗ ಆಕೆ ಪ್ರಿಯಕರನೊಂದಿಗೆ ಇರುವ ಪ್ರವೈಟ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಯಾರೇ ಆಗಲಿ ಲವ್, ಅಫೈರ್ಸ್, ರಿಲೇಷನ್ ಶಿಪ್ ಬಗ್ಗೆ ಹೆಚ್ಚು ಹೊರ ಹಾಕಲು ಇಷ್ಟಪಡುವುದಿಲ್ಲ.  ಅದರಲ್ಲೂ ಸಿನೆಮಾ ಸೆಲೆಬ್ರೆಟಿಗಳಂತೂ ಇಂತಹುವಗಳ ಬಗ್ಗೆ ಸೀಕ್ರೇಟ್ ಆಗಿಯೇ ಇಡುತ್ತಾರೆ. ಮದುವೆ ನಡೆಯುವವರೆಗೂ ಸೀಕ್ರೆಟ್ ಆಗಿಯೇ ಇಟ್ಟಿರುತ್ತಾರೆ. ಆದರೆ ಶ್ರುತಿ ಹಾಸನ್ ಮಾತ್ರ ಎಲ್ಲರಿಗಿಂತಲೂ ವಿಭಿನ್ನ ಎಂದೇ ಹೇಳಬಹುದಾಗಿದೆ. ಈ ಹಿಂದೆ ಸಹ ಆಕೆ ಲಂಡನ್ ಮೂಲದ ಮೈಖಲ್ ಎಂಬಾತನೊಂದಿಗೆ ಡೇಟಿಂಗ್ ನಲ್ಲಿದ್ದರು. ಆತನೊಂದಿಗೆ  ಬಹಿರಂಗವಾಗಿಯೇ ಸುತ್ತಾಡಿದ್ದರು. ಬಳಿಕ 2019 ರಲ್ಲಿ ಬಹಿರಂಗವಾಗಿಯೇ ಬೇರೆಯಾದರು. ಬಳಿಕ ಆಕೆ ಖ್ಯಾತ ಡೂಡುಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ. ಇಬ್ಬರೂ ಒಂದೇ ಮನೆಯಲ್ಲಿದ್ದು ಸಹಜೀವನ ಸಹ ನಡೆಸುತ್ತಿದ್ದಾರೆ. ಇನ್ನೂ ಆತನೊಂದಿಗೆ ಕ್ಲೋಜ್ ಆಗಿರುವ ಪೊಟೋಗಳು, ವಿಡಿಯೋಗಳು, ಜೊತೆಗೆ ಡ್ಯಾನ್ಸ್ ಆಡುವ ವಿಡಿಯೋಗಳನ್ನು ಸಹ ಶೇರ್‍ ಮಾಡುತ್ತಿರುತ್ತಾರೆ.

ಇದೀಗ ಶ್ರುತಿ ತನ್ನ ಪ್ರಿಯಕರ ಶಾಂತಾನು ಜೊತೆಗೆ ರೊಮ್ಯಾನ್ಸ್ ಮಾಡುವ ವಿಡಿಯೋ ಒಂದನ್ನು ಶೇರ್‍ ಮಾಡಿದ್ದರು. ಈ ವಿಡಿಯೋದಲ್ಲಿ ಅವರಿಬ್ಬರೂ ಮುದ್ದಾಡುತ್ತಾ ಓವರ್‍ ಆಗಿಯೇ ರೊಮ್ಯಾನ್ಸ್ ಮಾಡಿದ್ದಾರೆ. ಮದುವೆಯಾಗದೇ ಇಂತಹ ಕೆಲಸ ಮಾಡುವುದು ನಮ್ಮ ಇಂಡಿಯಾದ ಕಲ್ಚರ್‍ ತಪ್ಪಾಗಿ ನೋಡುತ್ತದೆ. ಅಂತಹುದರಲ್ಲಿ ಶ್ರುತಿ ಸೋಷಿಯಲ್ ಮಿಡಿಯಾದಲ್ಲಿ ಈ ವಿಡಿಯೋ ಶೇರ್‍ ಮಾಡಿದ್ದು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ. ಇನ್ನೂ ಆಕೆಯ ವಿಡಿಯೋ ನೋಡಿದ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಾ ವಿಡಿಯೋ ಅನ್ನು ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಶ್ರುತಿ ಹಾಸನ್ ಗೆ ಈ ವರ್ಷದ ಒಳ್ಳೆಯ ಆರಂಭವನ್ನೆ ನೀಡಿದೆ ಎನ್ನಬಹುದಾಗಿದೆ. ವರ್ಷದ ಆರಂಭದಲ್ಲಿ ತೆರೆಕಂಡ ವೀರಾಸಿಂಹರೆಡ್ಡಿ ಹಾಗೂ ವಾಲ್ತೇರು ವೀರಯ್ಯ ಸಿನೆಮಾ ಆಕೆಗೆ ಒಳ್ಳೆಯ ಸಕ್ಸಸ್ ತಂದು ಕೊಟ್ಟಿದೆ. ಎರಡೂ ಸಿನೆಮಾಗಳೂ ಸಹ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ಇನ್ನೂ ಸಲಾರ್‍ ಸಿನೆಮಾದಲ್ಲೂ ಸಹ ಶ್ರುತಿ ಹಾಸನ್ ನಟಿಸುತ್ತಿದ್ದು, ಈ ಸಿನೆಮಾದ ಮೇಲೆ ಶ್ರುತಿ ಹಾಸನ್ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

Most Popular

To Top