ರೋಸಿಹೋದ ಅನಸೂಯ ಅಸಭ್ಯಕರವಾದ ವಿಡಿಯೋ ಹಂಚಿಕೊಂಡು, ಜಸ್ಟ್ ಫ….. ಆಫ್… ಎಂದ್ರು….!

Follow Us :

ತೆಲುಗು ಸಿನಿರಂಗದ ನಟಿ ಕಂ ಆಂಕರ್‍ ಅನಸೂಯ ಇದೀಗ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಅಷ್ಟೇಅಲ್ಲದೇ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿದ್ದು, ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಜೊತೆಗೆ ಆಕೆ ಹಂಚಿಕೊಳ್ಳುವ ಕೆಲವೊಂದು ಪೊಟೋಗಳಿಗೆ ಸದಾ ಟ್ರೋಲ್ ಸಹ ಆಗುತ್ತಿರುತ್ತಾರೆ. ಈಗಾಗಲೇ ಅನೇಕ ಬಾರಿ ಆಕೆ ಸ್ಟ್ರಾಂಗ್ ಕೌಂಟರ್‍ ಕೊಟ್ಟಿದ್ದಾರೆ ಜೊತೆಗೆ ಪೊಲೀಸರಿಗೆ ದೂರು ಸಹ ನೀಡಿ ಕೆಲವರಿ ಶಿಕ್ಷೆ ಕೊಡಿಸಿದ್ದಾರೆ. ಆದರೂ ಸಹ ಟ್ರೋಲ್ ಗಳು ಮಾತ್ರ ಕಡಿಮೆಯಾಗಿಲ್ಲ. ಇದೀಗ ಮತ್ತೊಮ್ಮೆ ಆಕೆ ಫೈರ್‍ ಆಗಿದ್ದು, ಕೆಟ್ಟ ವಿಡಿಯೋ ಒಂದನ್ನು ತನ್ನ ಇನ್ಸ್ಟಾ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದಾರೆ.

ನಟಿ ಅನಸೂಯ ಜಬರ್ದಸ್ತ್ ಶೋ ನಿಂದ ಬಂದ ಬಳಿಕ ಸಿಎನಮಾಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಆಕೆ ಹಂಚಿಕೊಳ್ಳುವ ಪೊಟೋಗಳ ಕಾರಣದಿಂದ ಆಕೆಯನ್ನು ಟ್ರೋಲ್ ಸಹ ಮಾಡುತ್ತಿದ್ದರು. ಅದಕ್ಕೆ ಆಕೆ ಸಹ ಅನೇಕ ಬಾರಿ ಕೌಂಟರ್‍ ಗಳನ್ನು ನೀಡಿದ್ದಾರೆ. ನನ್ನ ಬಟ್ಟೆ ನನ್ನ ಇಷ್ಟ, ನಾನು ಎಂತಹ ಬಟ್ಟೆಗಳನ್ನು ಧರಿಸಬೇಕೆಂಬುದನ್ನು ಹೇಳಲು ನಿವ್ಯಾರು. ನನಗೆ ಕಂಫರ್ಟ್ ಎಂದೆನ್ನಿಸುವ ಬಟ್ಟೆಗಳನ್ನು ನಾನು ಧರಿಸುತ್ತೇನೆ ಎಂದು ಅನೇಕ ಬಾರಿ ಕೌಂಟರ್‍ ನೀಡಿದ್ದರು. ಇನ್ನೂ ಅನಸೂಯ ಸೀನಿಯರ್‍ ನಟ ಕೋಟಾ ಶ್ರೀನಿವಾಸ್ ರಾವ್ ರವರಿಗೂ ಸಹ ಕೌಂಟರ್‍ ನೀಡಿದ್ದರು. ಹೆಂಗಸರ ಮೇಲೆ ನಿಮ್ಮ ಪರಿಮಿತಿಗಳೇನು, ನಮ್ಮನ್ನು ಜಡ್ಜ್ ಮಾಡಲು ನೀವ್ಯಾರು ಎಂದು ಅನಸೂಯ ಟ್ರೋಲರ್‍ ಗಳ ಮೇಲೆ ಆಕ್ರೋಷ ಹೊರಹಾಕುತ್ತಿರುತ್ತಾರೆ.

ಇನ್ನೂ ಅನಸೂಯ ತನ್ನ ಇನ್ಸ್ಟಾ ಖಾತೆಯಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮಹಿಳೆಯರು ಮಕ್ಕಳನ್ನು ಹೆರಬೇಕು, ಬೇಡ, ಜಾಬ್ ಮಾಡಬೇಕು, ಬೇಡ, ದಪ್ಪವಾಗಿರಬೇಕು ಅಥವಾ ಸಣ್ಣ ಇರಬೇಕು ಎಂದು ಜಡ್ಜ್ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಶೇರ್‍ ಮಾಡಿದ್ದಾರೆ. ಆ ವಿಡಿಯೋದಲ್ಲಿ ಕೆಲವೊಂದು ಅಸಭ್ಯಕರವಾದ ಮಾತುಗಳಿವೆ. ಅನಸೂಯ ಕೋಪದಲ್ಲಿ ಈ ವಿಡಿಯೋ ಶೇರ್‍ ಮಾಡಿದ್ದಾರೆ. ಅನಸೂಯ ಜಬರ್ದಸ್ತ್ ಶೋ ನಿಂದ ಪುಲ್ ಫೇಂ ಸಂಪಾದಿಸಿಕೊಂಡರು. ಆದರೆ ಆ ಶೋ ನಿಂದ ಹೊರಬಂದರು. ಟಿ.ಆರ್‍.ಪಿ ಗಾಗಿ ಕೆಲಸಕ್ಕೆ ಬಾರದವನ್ನು ಮಾಡುತ್ತಾರೆ ಎಂದು ಕಿರುತೆರೆ ಶೋಗಳ ಬಗ್ಗೆ ಸಹ ಮಾತನಾಡಿದ್ದರು. ಈ ಕಾರಣದಿಂದಲೇ ತಾನು ಆಂಕರಿಂಗ್ ಬಿಟ್ಟೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದರು.

ಇನ್ನೂ ನಟಿ ಅನಸೂಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಪುಷ್ಪಾ-2 ಹಾಗೂ ರಂಗಮಾರ್ತಾಂಡ ಸಿನೆಮಾದಲ್ಲೂ ಅನಸೂಯ ನಟಿಸುತ್ತಿದ್ದಾರೆ. ಇದರ ಜೊತೆಗೆ ಆಕೆಯ ಕೈಯಲ್ಲಿ ಮತಷ್ಟು ಸಿನೆಮಾಗಳಿವೆ ಎನ್ನಲಾಗುತ್ತಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಅನಸೂಯ ತನ್ನ ವಿರುದ್ದ ಬರುವಂತಹ ಟ್ರೋಲ್ ಗಳಿಗೆ ಖಡಕ್ ಆಗಿಯೇ ಕೌಂಟರ್‍ ನೀಡುತ್ತಲೇ ಇರುತ್ತಾರೆ.