Film News

ಇದೀಗ ಶ್ರುತಿ ಹಾಸನ್ ಸರದಿ, ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ ಶ್ರುತಿ ಹಾಸನ್, ಹೀಗೊಂದು ಸುದ್ದಿ ವೈರಲ್….!

ದಕ್ಷಿಣ ಭಾರತದಲ್ಲಿ ಬಹುಬೇಡಿಕೆ ನಟಿಯಾಗಿ ಮುನ್ನುಗ್ಗುತ್ತಿರವ ನಟಿಯರಲ್ಲಿ ಶ್ರುತಿ ಹಾಸನ್ ಸಹ ಟಾಪ್ 10 ನಟಿಯರಲ್ಲೊಬ್ಬರಾಗಿದ್ದಾರೆ. ಸಾಲು ಸಾಲು ಸಿನೆಮಾಗಳನ್ನು ಆಕೆಯ ಕೈಯಲ್ಲಿಟ್ಟುಕೊಂಡು ಮುನ್ನುಗ್ಗುತ್ತಿದ್ದಾರೆ. ಇದರ ಜೊತೆಗೆ ಗಾಯನ, ಮ್ಯೂಸಿಕ್ ಅಂತಲೂ ಬ್ಯುಸಿಯಾಗಿದ್ದಾರೆ. ಇನ್ನೂ ವರ್ಷದ ಆರಂಭದಲ್ಲೇ ಆಕೆ ಬಿಗ್ ಹಿಟ್ ಸ್ವಂತ ಮಾಡಿಕೊಂಡರು. ವಾಲ್ತೇರು ವೀರಯ್ಯ ಹಾಗು ವೀರಸಿಂಹಾರೆಡ್ಡಿ ಸಿನೆಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಈ ಎರಡೂ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಇದೀಗ ಆಕೆಯ ಮದುವೆ ಕುರಿತಂತೆ ಸುದ್ದಿಯೊಂದು ಹರಿದಾಡುತ್ತಿದೆ.

ವರ್ಷದ ಆರಂಭದಲ್ಲೇ ಒಳ್ಳೆಯ ಸಕ್ಸಸ್ ಕಂಡುಕೊಂಡ ಬಳಿಕ ಆಕೆಯ ಬೇಡಿಕೆ ಮತಷ್ಟು ಹೆಚ್ಚಾಗಿದೆ. ಸೀನಿಯರ್‍ ಸ್ಟಾರ್‍ ನಟರಿಗೆ ಮೋಸ್ಟ್ ವಾಟೆಂಡ್ ಹಿರೋಯಿನ್ ಆಗಿದ್ದಾರೆ ಎಂದರೇ ತಪ್ಪಾಗಲಾರದು. ಕೇವಲ ತೆಲುಗು ಮಾತ್ರವಲ್ಲದೇ ಆಕೆ ಇತರೆ ಭಾಷೆಗಳಲ್ಲೂ ಸಹ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಇನ್ನೂ ಶ್ರುತಿ ಹಾಸನ್ ಸ್ಟಾರ್‍ ನಟ ಕಮಲ್ ಹಾಸನ್ ಪುತ್ರಿಯಾಗಿ ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟರೂ ಸಹ ಆಕೆ ಸ್ವಂತ ಪ್ರತಿಭೆಯಿಂದ ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ಇನ್ನೂ ಆಕೆ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳ ಮೂಲಕ ಸಹ ಸುದ್ದಿಯಾಗುತ್ತಿರುತ್ತಾರೆ. ಸುಮಾರು ದಿನಗಳಿಂದ ಶ್ರುತಿ ಹಾಸನ್ ಡೂಡಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಎಂಬಾತನೊಂದಿಗೆ ಡೇಟಿಂಗ್ ನಲ್ಲಿದ್ದಾರೆ. ಇದೀಗ ಈ ಜೋಡಿ ಮದುವೆಗೆ ಸಿದ್ದರಾಗಿದ್ದು, ಮದುವೆ ಕೆಲಸಗಳಿಗೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

 

ಇನ್ನೂ ಶ್ರುತಿ ಹಾಸನ್ ಇದೀಗ ಬಹುಬೇಡಿಕೆ ನಟಿಯಾಗಿದ್ದಾರೆ. ಅದರಲ್ಲೂ ಎರಡು ಹಿಟ್ ಗಳನ್ನು ಪಡೆದುಕೊಂಡು ಮತಷ್ಟು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಶ್ರುತಿ ಹಾಗೂ ಶಾಂತಾನು ಸುಮಾರು ದಿನಗಳಿಂದ ಪ್ರೇಮ ಪಯಣ ಸಾಗಿಸುತ್ತಿದ್ದಾರೆ. ಅನೇಕ ಭಾರಿ ಅವರಿಬ್ಬರ ಮದುವೆಗೆ ಸಂಬಂಧಿಸಿದ ಸುದ್ದಿಗಳು ಕೇಳಿಬಂದಿತ್ತು. ಇದೀಗ ಮತ್ತೊಮ್ಮೆ ಅವರ ಮದುವೆ ಸುದ್ದಿ ಮುನ್ನಲೆಗೆ ಬಂದಿದೆ. ಇದೀಗ ಶ್ರುತಿ ಹಾಸನ್ ಹತ್ತಿರದವರ ಮಾಹಿತಿಯ ಮೇರೆಗೆ ಶ್ರುತಿ ಹಾಸನ್ ಮದುವೆ ಇದೇ ವರ್ಷದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಶ್ರುತಿ ಹಾಸನ್ ಹಾಗೂ ಶಾಂತಾನು ಇಬ್ಬರ ಕುಟುಂಬಗಳ ಕಡೆಯಿಂದ ಅವರ ಮದುವೆಗೆ ಗ್ರೀನ್ ಸಿಗ್ನಲ್ ದೊರೆತಿದ್ದು, ಶೀಘ್ರದಲ್ಲೇ ಈ ಜೋಡಿಯ ಮದುವೆ ನಡೆಯಲಿದೆ ಎಂದು ಸುದ್ದಿಯೊಂದು ಹರಿದಾಡುತ್ತಿದೆ.

ಇನ್ನೂ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಎರಡೂ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಮಾತ್ರ ಸಿಕ್ಕಿಲ್ಲ. ಆದರೆ ಸುದ್ದಿ ಮಾತ್ರ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಸುದ್ದಿ ನಿಜವೇ ಆದರೆ ಇದೇ ವರ್ಷದಲ್ಲಿ ಸೌತ್ ಸಿನಿರಂಗದ ಮತ್ತೊಂದು ಸ್ಟಾರ್‍ ನಟಿಯ ಮದುವೆ ಅದ್ದೂರಿಯಾಗಿ ನಡೆಯಲಿದೆ. ಸದ್ಯ ಶ್ರುತಿ ಹಾಸನ್ ಬಹುನಿರೀಕ್ಷಿತ ಸಲಾರ್‍ ಸಿನೆಮಾದಲ್ಲಿ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ.

Most Popular

To Top