ನೇಹಾ ಕೊಲೆ ಪ್ರಕರಣ ಕ್ರೂರಿಗೆ ತಕ್ಕ ಶಿಕ್ಷೆಯಾಗಲಿ ಎಂದು ನಟ ಧ್ರುವ, ಆರೋಪಿಯನ್ನು ಜನಸಾಮಾನ್ಯರ ನಡುವೆ ಬಿಡಿ ಎಂದ ರಚಿತಾ….!

Follow Us :

ಕಳೆದೆರಡು ದಿನಗಳ ಹಿಂದೆಯಷ್ಟೆ ಹುಬ್ಬಳಿ ಕಾಲೇಜಿನಲ್ಲಿ ಕಾರ್ಪೋರೇಟರ್‍ ಮಗಳ ಬರ್ಬರ ಹತ್ಯೆ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ರಾಜ್ಯಾದ್ಯಂತ ಈ ಕುರಿತು ಭಾರಿ ಆಕ್ರೋಷ ವ್ಯಕ್ತವಾಗುತ್ತಿದೆ. ಈ ಘಟನೆಯ ಕುರಿತು ಸ್ಯಾಂಡಲ್ ವುಡ್ ನಟ ಧ್ರುವಾ ಸರ್ಜಾ ಹಗೂ ನಟಿ ರಚಿತಾ ರಾಮ್ ನೇಹಾ ಳನ್ನು ಕೊಲೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸೊಷಿಯಲ್ ಮಿಡಿಯಾ ಮೂಲಕ ಆಕ್ರೋಷ ಹೊರಹಾಕಿದ್ದಾರೆ.

ಹುಬ್ಬಳಿಯ ಕಾಲೇಜಿನಲ್ಲಿ ಹಾಡಹಗಲೇ ವಿದ್ಯಾರ್ಥಿನಿ ನೇಹಾ ಳನ್ನು ಯುವಕ ಕೊಲೆ ಮಾಡಿದ್ದ, ಈ ಕುರಿತು ಎಬಿವಿಪಿ, ಕೆಲವು ಮಠಾಧೀಶರು ಸೇರಿದಂತೆ ಅನೇಕರು ಪ್ರತಿಭಟನೆ ನಡೆಸಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಸಹ ಈ ಕುರಿತು ಸೋಷಿಯಲ್ ಮಿಡಿಯಾ ಮೂಲಕ ಆಕ್ರೋಷ ಹೊರಹಾಕಿದ್ದಾರೆ. ಸಹೋದರಿ ನೇಹಾ ಹಿರೇಂಠ್ ಹತ್ಯೆ ಅತ್ಯಂತ ಹೀನ ಕೃತ್ಯ. ಕ್ಯಾಂಪಸ್ ನಲ್ಲಿ ನಡೆದ ಈ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರವಾಗಿ ತ್ವರಿತಗತಿ ನ್ಯಾಯಾಲುದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶೀಕ್ಷೆ ನೀಡಬೇಕೆಂದು ಹೇಳಿದ್ದಾರೆ.

ಇನ್ನೂ ಸ್ಯಾಂಡಲ್ ವುಡ್ ಸ್ಟಾರ್‍ ನಟಿ ರಚಿತಾ ರಾಮ್ ಸಹ ಈ ಕೃತ್ಯದ ಬಗ್ಗೆ ಕಿಡಿಕಾರಿದ್ದಾರೆ. ತನ್ನ ಇನ್ಸ್ಟಾಗ್ರಾಂ ಖಾತೆಯ ಮೂಲಕ ಪೋಸ್ಟ್ ಹಾಕಿದ್ದಾರೆ. ಈ ರೀತಿಯ ಕೃತ್ಯಗಳನ್ನು ಎಸಗುಂತಹ ಕ್ರೂರಿಗಳನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಜಾತಿ, ಧರ್ಮ ಯಾವುದೇ ಆಗಿರಲಿ ಮೊದಲು ನಾವು ಮಾನವರು. ನಾನು ಈ ಪೋಸ್ಟ್ ಹಾಕಲು ಕಾರಣ ಆಕೆಗೆ (ನೇಹಾ) ಆಗಿರುವ ಅನ್ಯಾಯ. ಯಾರೇ ತಪ್ಪು ಮಾಡಿದರೂ ತಪ್ಪೆ ಆಗಿರುತ್ತದೆ. ಸರ್ಕಾರಕ್ಕೆ ನನ್ನದೊಂದು ಮನವಿ, ಈ ವಿಷಯವನ್ನು ರಾಜಕೀಯ ಆಯಾಮದಲ್ಲಿ ತರಬೇಡಿ, ಇಲ್ಲಿ ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಿದೆ ಅಷ್ಟೆ. ಈ ರೀತಿಯ ಕೃತ್ಯ ಎಸಗಿರುವಂತಹವರನ್ನು ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದು ಒತ್ತಾಯಿಸಿ, ನೇಹಾ ಹಿರೇಮಠ್ ಪೊಟೋ ಜೊತೆ #wewantjustice ಎಂಬ ಟ್ಯಾಗ್ ಹಾಕಿದ್ದಾರೆ.