ನಯನತಾರಾ ಸೆರಗೋಸಿ ಮೂಲಕ ಮಕ್ಕಳನ್ನು ಪಡೆದಿದ್ದರ ಹಿಂದೆ ಏನೋ ಇದೆ ಎಂದ ಫೈರ್ ಬ್ರಾಂಡ್ ಕಸ್ತೂರಿ….!

Follow Us :

ಸೌತ್ ಸಿನಿರಂಗದಲ್ಲಿ ಈ ಹಿಂದೆ ಬಹುಬೇಡಿಕೆ ನಟಿಯಾಗಿ ಸದ್ದು ಮಾಡಿದ ನಟಿ ಕಸ್ತೂರಿ ಗೃಹಲಕ್ಷ್ಮಿ ಎಂಬ ತೆಲುಗು ಸೀರಿಯಲ್ ಮೂಲಕ ದೊಡ್ಡ ಅಭಿಮಾನಿ ಬಳಗ ಸಾಧಿಸಿಕೊಂಡಿದ್ದಾರೆ. ಆಕೆಯನ್ನು ಕಸ್ತೂರಿ ಇಂಡಸ್ಟ್ರಿಯಲ್ಲಿ ಫೈರ್‍ ಬ್ರಾಂಡ್ ಎಂದು ಹೇಳಲಾಗುತ್ತದೆ. ಯಾವುದೇ ವಿಚಾರವಿದ್ದರೂ ಸಹ ಆಕೆ ನೇರವಾಗಿಯೇ ತಮ್ಮ ಅಭಿಪ್ರಾಯವನ್ನು ಹೇಳಿಬಿಡುತ್ತಾರೆ. ಇದೀಗ ಲೇಡಿ ಸೂಪರ್‍ ಸ್ಟಾರ್‍ ನಯನತಾರ ಸೆರಗೋಸಿ ಪದ್ದತಿಯ ಮೂಲಕ ಮಕ್ಕಳನ್ನು ಪಡೆದುಕೊಂಡ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ನಟಿ ಕಸ್ತೂರಿ ಭಾರತೀಯುಡು, ಅನ್ನಯ್ಯ ಮೊದಲಾದ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ನಟಿಯಾಗಿದ್ದಾರೆ. ಇದೀಗ ಆಕೆ ಕಿರುತೆರೆಯಲ್ಲಿ ಸೀರಿಯಲ್ ಗಳನ್ನು ಮಾಡುತ್ತಾ ಅವಕಾಶ ಸಿಕ್ಕಾಗ ಕೆಲವೊಂದು ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಮಾಡುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಅದರಲ್ಲೂ ಆಕೆಗೆ ಗೃಹ ಲಕ್ಷ್ಮೀ ಸೀರಿಯಲ್ ತುಂಬಾನೆ ಹೆಸರು ತಂದುಕೊಟ್ಟಿತ್ತು. ಐವತ್ತರ ವಯಸ್ಸಿನಲ್ಲೂ ಸಹ ಕಸ್ತೂರಿ ಪುಲ್ ಎನರ್ಜಿಟಿಕ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳು, ವಿಡಿಯೋಗಳನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುವ ಕೆಲಸ ಸಹ ಮಾಡುತ್ತಿರುತ್ತಾರೆ. ಅಷ್ಟೇಅಲ್ಲದೇ ಆಕೆ ಯಾವುದೇ ವಿಚಾರವಿದ್ದರೂ ಸಹ ನೇರವಾಗಿಯೇ ಮಾತನಾಡುವಂತಹ ವ್ಯಕ್ತಿತ್ವ ಹೊಂದಿದ್ದಾಳೆ. ಆಕೆ ಮಾತುಗಳ ಮೂಲಕ ಅನೇಕ ವಿವಾದಗಳನ್ನು ಸಹ ಸೃಷ್ಟಿಸಿದ್ದಾರೆ.

ಇನ್ನೂ ಈ ಹಿಂದೆ ನಟಿ ಕಸ್ತೂರಿ ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ಸೆರಗೋಸಿ ಮೂಲಕ ಮಕ್ಕಳನ್ನು ಪಡೆದುಕೊಂಡ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರತಿಯೊಬ್ಬರು ಈ ರೀತಿಯ ಪದ್ದತಿಯನ್ನು ಅನುಸರಿಸಿದರೇ ಸಮಾಜ ಏನಾಗುತ್ತದೆ ಎಂಬ ಅರ್ಥದಲ್ಲಿ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಇದೀಗ ಮತ್ತೊಮ್ಮೆ ಅದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನಯನತಾರಾ ಅನುಸರಿಸಿದ ಸೆರಗೋಸಿ ವಿಧಾನವನ್ನು ನಾನು ವಿರೋಧ ಮಾಡಿಲ್ಲ. ಆದರೆ ಆಕೆ ಲೀಗಲ್ ಆಗಿ ಮಕ್ಕಳನ್ನು ಪಡೆದುಕೊಂಡಿದ್ದರೇ ನನಗೇನು ಅಭ್ಯಂತರವಿರಲಿಲ್ಲ ಎಂದು ಹೇಳಿದ್ದಾರೆ. ನಾನು ಕೇವಲ ಆ ಪ್ರಕ್ರಿಯೆಯ ಬಗ್ಗೆ ಮಾತನಾಡಿದೆ ಅಷ್ಟೆ ಎಂದಿದ್ದಾರೆ. ಇನ್ನೂ ಈ ವೇಳೆ ನಯನತಾರ ರವರಿಗೆ ಅವಕಾಶವಿಲ್ಲದೇ ಸೆರಗೋಸಿ ಪದ್ದತಿಯ ಮೊರೆ ಹೋದರು. ಅದರಲ್ಲಿ ನಿಮ್ಮ ಅಭ್ಯಂತರ ಏನು ಎಂದು ಆಂಕರ್‍ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಕಸ್ತೂರಿ ಅವಕಾಶ ವಿಲ್ಲದ ಕಾರಣಕ್ಕಾಗಿ ಅಲ್ಲ, ಅದರಲ್ಲಿ ಬೇರೆ ಏನೋ ಸಮಸ್ಯೆ ಇದೆ . ಆದರೂ ಅವೆಲ್ಲಾ ಇದೀಗ ಏಕೆ ಬಿಡಿ ಎಂದು ಸೈಲೆಂಟ್ ಆಗಿದ್ದಾರೆ. ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.