Film News

ಸ್ಟಾರ್ ಆಂಕರ್ ಅನಸೂಯ ಆಧ್ಯಾತ್ಮಿಕ ಪೊಟೋಗಳು ವೈರಲ್, ಹೋಮ್ಲಿ ಬ್ಯೂಟಿಯಾಗಿ ಕಾಣಿಸಿಕೊಂಡ ಅನಸೂಯ..!

ತೆಲುಗು ಕಿರುತೆರೆಯ ಸ್ಟಾರ್‍ ಆಂಕರ್‍ ಕಂ ನಟಿ ಅನಸೂಯ ಭಾರದ್ವಜ್ ಸ್ಟಾರ್‍ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸಾಲು ಸಾಲು ಹಾಟ್ ಪೊಟೋಶೂಟ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುವಲ್ಲಿ ಆಕೆ ಸಕ್ರಿಯರಾಗಿದ್ದಾರೆ. ಸಿನೆಮಾಗಳ ಶೂಟೀಂಗ್ ನಿಂದ ಬಿಡುವು ಸಿಕ್ಕರೇ ಆಕೆ ಕುಟುಂಬದೊಂದಿಗೆ ವೆಕೇಷನ್ ಗೆ ಹಾರುತ್ತಿರುತ್ತಾರೆ. ಇದೀಗ ಆಕೆ ಹೊಮ್ಲಿಯಾಗಿ ಕಾಣಿಸಿಕೊಂಡಿದ್ದಾರೆ. ಆಧ್ಯಾತಿಕತೆಯಿಂದ ಕೂಡಿದ ಆಕೆಯ ಪೊಟೋಗಳು ಇದೀಗ ವೈರಲ್ ಆಗುತ್ತಿವೆ.

ನಟಿ ಕಂ ಆಂಕರ್‍ ಅನಸೂಯ ಶೀಕಾಳಹಸ್ತಿಯಲ್ಲಿರುವ ಶಿವನ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಶಿವನಿಗೆ ಆಕೆ ಹೊಸ ಪೂಜೆಗಳನ್ನು ಮಾಡಿದ್ದಾರೆ. ಅಲ್ಲಿನ ಕೆಲವೊಂದು ಪೊಟೋಗಳನ್ನು ಅನಸೂಯ ತನ್ನ ಇನ್ಸ್ಟಾ ಖಾತೆಯ ಮೂಲಕ ಹಂಚಿಕೊಂಡಿದ್ದರು. ಈ ಪೊಟೋಗಳಲ್ಲಿ ಆಕೆ ಹೋಮ್ಲಿಯಾಗಿ ಕಾಣಿಸಿಕೊಂಡಿದ್ದಾರೆ. ಮೇಕಪ್ ಲೆಸ್ ಆಗಿ ಆಕೆ ತುಂಬಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಶಿವನ ದೇವಾಲಯದಲ್ಲಿ ಆಕೆ ಪ್ರಶಾಂತವಾದ ಸಮಯವನ್ನು ಕಳೆದಿದ್ದಾಗಿ ಆಕೆ ಹೇಳಿಕೊಂಡಿದ್ದಾರೆ. ಈ ವರ್ಷದಲ್ಲಿ ಶಿವನ ಸನ್ನಿಧಿಯಲ್ಲಿ ಒಳ್ಳೆಯ ಪ್ರಶಾಂತತೆಯ ಸಮಯವನ್ನು ಕಳೆದಿದ್ದೇನೆ ಎಂದು ಈ ವರ್ಷದ ಮೊದಲನೆ ಪೋಸ್ಟ್ ಎಂದು ಹೇಳಿದ್ದಾರೆ. ಸದ್ಯ ಆಕೆ ಈ ಪೊಟೋಗಳು ಹಾಗೂ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಇನ್ನೂ ಅದೇ ಸಮಯದಲ್ಲಿ ಷಾಪಿಂಗ್ ಮಾಲ್ ಒಪನಿಂಗ್ ಕಾರ್ಯಕ್ರಮದಲ್ಲೂ ಸಹ ಅನಸೂಯ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಆಕೆ ನೀಲಿ ಬಣ್ಣದ ಸೀರೆಯಲ್ಲಿ ಹಾಜರಾಗಿದ್ದರು. ಈ ಸಂಬಂಧ ಸಹ ಕೆಲವೊಂದು ಪೊಟೋಗಳು ವಿಡಿಯೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ಅನಸೂಯ ಸಹ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಈ ವರ್ಷದ ಮೊದಲ ಸೆಲ್ಫಿ, ಫಸ್ಟ್ ಫ್ಲೇಟ್, ಫಸ್ಟ್ ಅಸೈನ್ ಮೆಂಟ್ ಎಂದು ಒಂದು ಸೆಲ್ಫಿಯನ್ನು ಸಹ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಅನಸೂಯ ಏನೆ ಮಾಡಿದರೂ ಸಹ ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಆಕೆಯ ವಿರುದ್ದ ಆಗಾಗ ಟ್ರೋಲ್ ಗಳು ಸಹ ಎದುರಾಗುತ್ತಿರುತ್ತವೆ. ಆ ಟ್ರೋಲರ್‍ ಗಳಿಗೂ ಸಹ ಆಕೆ ಸ್ಟ್ರಾಂಗ್ ಡೋಸ್ ಕೊಡುತ್ತಿರುತ್ತಾರೆ. ಆಕೆಯ ವಿರುದ್ದ ವಿಮರ್ಶೆ ಮಾಡಿದಂತಹ ವ್ಯಕ್ತಿಯೊಬ್ಬನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದು ಸಹ ಆಗಿದೆ.

ಇನ್ನೂ ಆಕೆಯ ಕೈಯಲ್ಲಿ ಯಾವುದೇ ಕಿರುತೆರೆ ಶೋಗಳಿಲ್ಲ. ಆದರೆ ಸಿನೆಮಾಗಳಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. ಆಕೆಯ ಕೈಯಲ್ಲಿ ಸದ್ಯ ಹತ್ತು ಸಿನೆಮಾಗಳು ಇದೆ ಎನ್ನಲಾಗಿದೆ. ಅನೇಕ ಯಂಗ್ ನಟರ ಸಿನೆಮಾಗಳಲ್ಲಿ ಆಕೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುಷ್ಪಾ-2 ಸಿನೆಮಾದ ಮೇಲೆ ಆಕೆ ತುಂಬಾನೆ ನಿರೀಕ್ಷೆಯನ್ನು ಸಹ ಇಟ್ಟುಕೊಂಡಿದ್ದಾರೆ. ತೆಲುಗು ಸೇರಿದಂತೆ ತಮಿಳು ಹಾಗೂ ಮಲಯಾಳಂ ನಲ್ಲೂ ಸಹ ಆಕೆ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ.

Most Popular

To Top