Film News

ಶೂಟಿಂಗ್ ವೇಳೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಗೆ ಅಪಘಾತ, ಸರ್ಜರಿ ಮಾಡಬೇಕೆಂದ ವೈದ್ಯರು……!

ಸಿನಿಮಾ ಶೂಟಿಂಗ್ ವೇಳೆ ಅನೇಕ ಅವಘಡಗಳು ಸಂಭವಿಸುತ್ತಿರುತ್ತವೆ. ಇದೀಗ ಬಾಲಿವುಡ್ ಸ್ಟಾರ್‍ ನಟ ಶಾರುಖ್ ಖಾನ್ ರವರು ಸಹ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಈ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಅಮೇರಿಕಾದ ಲಾಸ್ ಏಂಜಲ್ಸ್ ನಲ್ಲಿ ನಡೆದಿದ್ದು, ಶಾರುಖ್ ಖಾನ್ ರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಾಗಿದೆ. ಇನ್ನೂ ಆತನಿಗೆ ಸರ್ಜರಿ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ಕೆಲವೊಂದು ಮಿಡಿಯಾಗಳ ಮಾಹಿತಿಯಂತೆ ಶಾರುಖ್ ಖಾನ್ ತಮ್ಮ ಮುಂದಿನ ಸಿನೆಮಾ ಶೂಟಿಂಗ್ ಗಾಗಿ ಲಾಸ್ ಏಂಜಲ್ಸ್ ಗೆ ಹೋಗಿದ್ದರಂತೆ. ಶೂಟಿಂಗ್ ನಡೆಯುತ್ತಿದ್ದಾಗ ಶಾರುಖ್ ಗಾಯಗೊಂಡಿದ್ದಾರೆ. ಮೂಗಿಗೆ ತೀವ್ರವಾದ ಗಾಯವಾದ ಕಾರಣ ಅಲ್ಲಿನ ಸಿಬ್ಬಂದಿ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದರಂತೆ. ಶಾರುಖ್ ರನ್ನು ಪರೀಕ್ಷೆ ಮಾಡಿದ ಬಳಿಕ ಅಷ್ಟೋಂದು ಪ್ರಮಾದ ಏನು ಇಲ್ಲ ಮೈನರ್‍ ಸರ್ಜರಿ ಮಾಡಬೇಕು ಎಂದು ಹೇಳಿದ್ದರಂತೆ. ಬಳಿಕ ಆತನಿಗೆ ಸರ್ಜರಿಯಾದ ಬಳಿಕ ಡಿಸ್ಚಾರ್ಜ್ ಮಾಡಿದ್ದರಂತೆ. ಇನ್ನೂ ಶಾರುಖ್ ಸದ್ಯ ಇಂಡಿಯಾದಲ್ಲಿದ್ದಾರೆ. ಗಾಯ ಸಣ್ಣಪ್ರಮಾಣದ್ದಾದರಿಂದ ಆತ ಶೀಘ್ರ ಗುಣಮುಖರಾಗಲಿದ್ದಾರೆ ಎನ್ನಲಾಗಿದೆ. ಇನ್ನೂ ಈ ಬಗ್ಗೆ ಶಾರುಖ್ ಖಾನ್ ಟೀಂ ಯಾವುದೇ ಪ್ರಕಟನೆ ಸಹ ನೀಡಿಲ್ಲ. ಸದ್ಯ ಈ ಸುದ್ದಿ ಲೀಕ್ ಆದ ಹಿನ್ನೆಲೆಯಲ್ಲಿ ಶಾರುಖ್ ಅಭಿಮಾನಿಗಳು ಕಂಗಾಲಾಗಿದ್ದರು. ಆದರೆ ಅವರ ಆರೋಗ್ಯ ಇದೀಗ ಚೆನ್ನಾಗಿದೆ ಎಂಬ ವಿಚಾರ ತಿಳಿದು ನಿರಾಳರಾಗಿದ್ದಾರೆ.

ಇನ್ನೂ ಶಾರುಖ್ ಖಾನ್ ಬ್ಯಾಕ್ ಟು ಬ್ಯಾಕ್ ಸೋಲುಗಳ ಕಾರಣದಿಂದ ಸಿನೆಮಾಗಳಿಂದ ಕೊಂಚ ಗ್ಯಾಪ್ ತೆಗೆದುಕೊಂಡಿದ್ದರು. ಕಳೆದ ವರ್ಷ ತೆರೆಕಂಡ ಪಠಾನ್ ಸಿನೆಮಾ ಆತನಿಗೆ ಮತ್ತೆ ಬ್ರೇಕ್ ನೀಡಿತ್ತು. ಈ ಸಿನೆಮಾ ಅನೇಕ ವಿವಾದಗಳಿಗೆ ಕಾರಣವಾಗಿತ್ತು. ವಿವಾದಗಳ ನಡುವೆಯೇ ಈ ಸಿನೆಮಾ ಭರ್ಜರಿ ಹಿಟ್ ಪಡೆದುಕೊಂಡಿದ್ದು, ಸುಮಾರು ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈ ಸಿನೆಮಾದಿಂದ ಬಾಲಿವುಡ್ ಸಹ ಚೇತರಿಸಿಕೊಂಡಿದೆ ಎಂದು ಹೇಳಬಹುದಾಗಿದೆ. ಸಿದ್ದಾರ್ಥ್ ಆನಂದ್ ತೆರೆಗೆ ತಂದ ಈ ಸಿನೆಮಾದಲ್ಲಿ ದೀಪಿಕಾ ಪಡುಕೋಣೆ ಶಾರುಖ್ ಗೆ ಜೋಡಿಯಾಗಿ ನಟಿಸಿದ್ದರು. ಈ ಸಿನೆಮಾದಲ್ಲಿನ ಬೇಷರಮ್ ಎಂಬ ಹಾಡು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಈ ಸಿನೆಮಾ ಬ್ಯಾನ್ ಮಾಡಬೇಕೆಂಬ ಕೂಗು ಸಹ ಕೇಳಿಬಂದಿತ್ತು.

ಸದ್ಯ ಶಾರುಖ್ ಕಾಲಿವುಡ್ ನಿರ್ದೇಶಕ ಅಟ್ಲಿ ನಿರ್ದೇಶನದಲ್ಲಿ ಜವಾನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಈಗಾಗಲೇ ಭಾರಿ ಹೈಪ್ ಕ್ರಿಯೇಟ್ ಮಾಡಿದೆ. ಈ ಸಿನೆಮಾದಲ್ಲಿ ಶಾರುಖ್ ಗೆ ಜೋಡಿಯಾಗಿ ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ಸೌತ್ ನಟಿ ಪ್ರಿಯಮಣಿ ಸಹ ನಟಿಸಲಿದ್ದು, ಭಾರಿ ಬಜೆಟ್ ನಲ್ಲಿ ಸೆಟ್ಟೇರಿದ ಈ ಸಿನೆಮಾ ಇದೇ ಸೆಪ್ಟೆಂಬರ್‍ ಮಾಹೆಯಲ್ಲಿ ತೆರೆಕಾಣಲಿದೆ.

Most Popular

To Top