ಪ್ರಚಾರಕ್ಕೆ ತೆರೆ, ಚೈತನ್ಯ – ನಿಹಾರಿಕಾ ವಿಚ್ಚೇದನ ನಿಜ, ಕೋರ್ಟ್ ಮೆಟ್ಟಿಲೇರಿದ ನಟಿ ನಿಹಾರಿಕಾ…..!

Follow Us :

ಸುಮಾರು ದಿನಗಳಿಂದ ಮೆಗಾ ಕುಟುಂಬದ ಏಕೈಕ ನಟಿ ನಿಹಾರಿಕಾ ಹಾಗೂ ಆಕೆಯ ಪತಿ ಚೈತನ್ಯ ಜೊನ್ನಲಗಡ್ಡ ನಡುವೆ ವಿಬೇದಗಳು ಹುಟ್ಟಿಕೊಂಡಿದ್ದು, ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಮಾತ್ರ ಲಭ್ಯವಿರಲಿಲ್ಲ. ಇದೀಗ ನಿಹಾರಿಕಾ ವಿಚ್ಚೇದನ ಪಡೆದುಕೊಳ್ಳಲು ಹೈದರಾಬಾದ್ ನ ಕುಕ್ಕುಟಪಲ್ಲಿ ಯಲ್ಲಿರುವ ಫ್ಯಾಮಿಲಿ ಕೋರ್ಟ್‌ನಲ್ಲಿ ಪಿರ್ಯಾದು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಳೆದ ಡಿಸೆಂಬರ್‍ 2020ರ ಡಿಸೆಂಬರ್‍ 9 ರಂದು ರಾಜಸ್ಥಾನದ ಜೈಪುರದಲ್ಲಿ ಚೈತನ್ಯ ಹಾಗೂ ನಿಹಾರಿಕಾ ರವರ ಮದುವೆ ತುಂಬಾ ಅದ್ದೂರಿಯಾಗಿ ನಡೆಯಿತು. ಡೆಸ್ಟಿನೇಷನ್ ವೆಡ್ಡಿಂಗ್ ಎಂಬ ಹೆಸರಿನಲ್ಲಿ ಈ ಜೋಡಿ ಸಪ್ತಪದಿ ತುಳಿಯಿತು. ಮದುವೆಯಾದ ಬಳಿಕ ಈ ಜೋಡಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಆದರೆ ಕೆಲವು ದಿನಗಳಿಂದ ಅವರಿಬ್ಬರ ನಡುವೆ ವಿಬೇದಗಳು ಉಂಟಾಗಿದ್ದು, ಇಬ್ಬರೂ ದೂರವಾಗಿದ್ದಾರೆ. ಜೊತೆಗೆ ನಿಹಾರಿಕಾ ಹಾಗೂ ಚೈತನ್ಯ ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳಿಂದ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿಕೊಂಡಿದ್ದು, ತಾವಿಬ್ಬರೂ ಇರುವಂತಹ ಪೊಟೋಗಳನ್ನು ಡಿಲೀಟ್ ಮಾಡಿದ್ದು, ಜೊತೆಗೆ ಮೆಗಾ ಕುಟುಂಬದಲ್ಲಿ ನಡೆದಂತಹ ಅನೇಕ ಕಾರ್ಯಕ್ರಮಗಳಲ್ಲಿ ಚೈತನ್ಯ ಕಾಣಿಸಿಕೋಳ್ಳದೇ ಇರುವುದು ಎಲ್ಲಾ ಕಾರಣಗಳಿಂದ ಈ ಜೋಡಿ ಬೇರೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಆದರೆ ನಿಹಾರಿಕಾ ಹಾಗೂ ಚೈತನ್ಯ ಎರಡೂ ಕುಟುಂಬಗಳೂ ಅವರಿಬ್ಬರ ನಡುವೆ ರಾಜಿ ಸಂಧಾನಗಳನ್ನು ಸಹ ಮಾಡಿದ್ದರಂತೆ. ಈ ಬಗ್ಗೆ ಸಹ ಅನೇಕ ಸುದ್ದಿಗಳು ಹರಿದಾಡಿದ್ದವು. ಚಿರಂಜೀವಿ ಯವರ ಮಧ್ಯಸ್ಥಿಕೆಯಿಂದ ಇಬ್ಬರ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಹೋಗಿ ಒಂದಾಗಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬಂದವು. ಆದರೆ ಅದೆಲ್ಲವೂ ಕೇವಲ ಮಾತುಗಳು ಎಂದು ಬಳಿಕ ತಿಳಿಯಿತು. ಆದರೆ ಈ ಬಗ್ಗೆ ಅಷ್ಟೊಂದು ರೂಮರ್‍ ಗಳು ಹರಿದಾಡುತ್ತಿದ್ದರೂ ಮೆಗಾ ಕುಟುಂಬದಿಂದಾಗಲಿ ಅಥವಾ ಚೈತನ್ಯ ಕಡೆಯಿಂದಾಗಲಿ ಯಾವುದೇ ಪ್ರತಿಕ್ರಿಯೆ ಸಹ ಬಂದಿರಲಿಲ್ಲ. ಇದರ ಜೊತೆಗೆ ಅವರಿಬ್ಬರೂ ಆಗಾಗ ಹಂಚಿಕೊಳ್ಳುತ್ತಿದ್ದಂತಹ ಪೋಸ್ಟ್ ಗಳೂ ಸಹ ಸಖತ್ ವೈರಲ್ ಆಗುತ್ತಿತ್ತು.

ಇದೀಗ ನಿಹಾರಿಕಾ ಹಿಂದೂ ಕಾನೂನಿನಂತೆ ವಿಚ್ಚೇದನ ಪಡೆದುಕೊಳ್ಳಲು ಕೋರ್ಟ್ ನಲ್ಲಿ ಪಿರ್ಯಾದು ಮಾಡಿಕೊಂಡಿದ್ದಾರೆ. ಅದ್ದೂರಿಯಾಗಿ ನಡೆದಂತಹ ನಿಹಾರಿಕಾ ಚೈತನ್ಯ ಮದುವೆ ಇದೀಗ ಮುರಿದು ಬೀಳುತ್ತಿದೆ. ಇನ್ನೂ ಈ ಬಗ್ಗೆ ಮೆಗಾ ಅಭಿಮಾನಿಗಳೂ ಸಹ ತೀವ್ರ ಬೇಸರವನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ.