Film News

ನೀವು ನನ್ನ ಪತಿಯಾಗಿರುವುದು ನನ್ನ ಅದೃಷ್ಟ ಎಂದ ಕಿರುತೆರೆ ನಟಿ, ಎಮೋಷನಲ್ ಕಾಮೆಂಟ್ ಮಾಡಿದ ನಟಿ ಮಹಾಲಕ್ಷ್ಮೀ……!

ತಮಿಳು ಸಿನಿರಂಗದ ಖ್ಯಾತ ನಿರ್ಮಾಪಕ ರವಿಂದರ್‍ ಹಾಗೂ ಕಿರುತೆರೆ ನಟಿ ಮಹಾಲಕ್ಷ್ಮೀ ಕಳೆದ ವರ್ಷ ಮದುವೆಯಾದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮದುವೆಯಾದಾಗಿನಿಂದ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದರು.  ಸ್ಟಾರ್‍ ಸೆಲೆಬ್ರೆಟಿಗಳಿಗಿಂತಲೂ ಈ ಜೋಡಿಯ ಮದುವೆ ತುಂಬಾನೆ ಸದ್ದು ಮಾಡಿತ್ತು. ಇದೀಗ ತನ್ನ ಪತಿಯ ಬಗ್ಗೆ ಎಮೋಷನಲ್ ಕಾಮೆಂಟ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ನಿರ್ಮಾಪಕ ರವಿಂದರ್‍ ಹಾಗೂ ಮಹಾಲಕ್ಷ್ಮೀ ತಮ್ಮ ಮೊದಲ ಪತಿ ಹಾಗೂ ಪತ್ನಿಗೆ ವಿಚ್ಚೇದನ ನೀಡಿ ಕೆಲವು ದಿನಗಳ ಕಾಲ ಇಬ್ಬರೂ ಪ್ರೀತಿಸಿ ಅದ್ದೂರಿಯಾಗಿ ಸಪ್ತಪದಿ ತುಳಿದರು. ಅವರಿಬ್ಬರ ಮದುವೆ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿದ್ದೇ ತಡ ಪ್ರತಿನಿತ್ಯ ಅವರನ್ನು ಟ್ರೋಲ್ ಮಾಡುತ್ತಲೇ ಇದ್ದರು. ಇತ್ತೀಚಿಗೆ ಅವರಿಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡಿದ್ದು, ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಓರ್ವ ವ್ಯಾಪಾರಿಯನ್ನು ಮೋಸ ಮಾಡಿದ ಹಿನ್ನೆಲೆಯಲ್ಲಿ ಆರ್ಥಿಕ ಅಪರಾಧದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಚೆನೈ ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು ರವಿಂದರ್‍ ರವರನ್ನು ಬಂಧಿಸಲಾಗಿತ್ತು. ಜಾಮೀನಿನ ಮೇರೆಗೆ ರವಿಂಧರ್‍ ಹೊರಗೆ ಬಂದಿದ್ದಾರೆ. ಇದೀಗ ಮಹಾಲಕ್ಷ್ಮೀ ತನ್ನ ಪತಿಯ ಬಗ್ಗೆ ಎಮೋಷನಲ್ ಕಾಮೆಂಟ್ ಮಾಡಿದ್ದಾರೆ.

ಮಾ.22 ರಂದು ನಟಿ ಮಹಾಲಕ್ಷ್ಮೀ ಹುಟ್ಟುಹಬ್ಬವಾಗಿದ್ದು, ಹುಟ್ಟುಹಬ್ಬದ ನಿಮಿತ್ತ ಆಕೆಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಅರ್ಧರಾತ್ರಿ ಕೇಕ್ ತಂದು ಮಹಾಲಕ್ಷ್ಮೀ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಮಹಾಲಕ್ಷ್ಮೀ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋಗಳಿಗೆ ಎಮೋಷನಲ್ ನೋಟ್ ಬರೆದಿದ್ದಾರೆ. ಈ ಹುಟ್ಟುಹಬ್ಬ ತುಂಬಾ ಭಾವೋದ್ವೇಗದಿಂದ ತುಂಬಿ ಹೋಗಿದೆ. ನನ್ನ ಪತಿ ಅರ್ಧರಾತ್ರಿ ನನ್ನನ್ನು ನಿದ್ದೆಯಿಂದ ಎಬ್ಬಿಸಿ ಕೇಕ್ ತಂದು ಸರ್ಪ್ರೈಸ್ ನೀಡಿದರು. ಆತನನ್ನು ನನ್ನ ಪತಿಯಾಗಿ ಪಡೆದಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನಮ್ಮ ತಾಯಿ, ಸಹೋದರ ನನ್ನನ್ನು ಮಾನಸಿಕ ವಿಕಲಚೇತನರ ಕೇಂದ್ರಕ್ಕೆ ಕರೆದುಕೊಂಡು ಹೋದರು. ಅಲ್ಲಿನ ಮಕ್ಕಳಿಗೆ ಅನ್ನದಾನ ಮಾಡಿದೆವು. ಇದು ಹೃದಯ ತಾಗುವಂತಹ ಅನುಭವ. ನನ್ನ ತಂದೆ ಬಾಂಗ್ಲಾದೇಶದಿಂದಲೇ ಶುಭಾಷಯ ಕೋರಿದ್ದಾರೆ. ನನಗೆ ಶುಭಾಷಯ ಕೋರಿದ ಎಲ್ಲರಿಗೂ ಧನ್ಯವಾದಗಳು ಎಂದು ಮಹಾಲಕ್ಷ್ಮೀ ಪೋಸ್ಟ್ ಮಾಡಿದ್ದಾರೆ.

ಇನ್ನೂ ಮಹಾಲಕ್ಷ್ಮೀ ತನ್ನ ಹುಟ್ಟುಹಬ್ಬದ ಅಂಗವಾಗಿ ಪ್ರಮುಖ ನಿರ್ಣಯವೊಂದನ್ನು ತೆಗೆದುಕೊಂಡಿದ್ದಾರೆ. ನಾನು ಸತ್ತ ಬಳಿಕ ನನ್ನ ಅವಯವಗಳು ಬೇರೆಯವರಿಗೆ ಅನುಕೂಲವಾಗಲಿ ಎಂದು ಅಂಗಾಗ ದಾನಕ್ಕೆ ಮುಂದಾಗಿದ್ದಾರೆ. ಆಕೆಯ ಈ ನಿರ್ಣಯಕ್ಕೆ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

Most Popular

To Top