Film News

ನಾನು ಬ್ಲಾಕ್ ಕಲರ್ ಇದ್ದೀನಿ ಅಂತಾ ದೊಡ್ಡ ಸಿನೆಮಾದಿಂದ ರಿಜೆಕ್ಟ್ ಮಾಡಿದ್ದರು, ಬಾಡಿ ಶೇಮಿಂಗ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ನಟಿ….!

ತೆಲುಗು ಸಿನಿರಂಗದ ಹಾಟ್ ಬ್ಯೂಟಿ ಡಿಂಪುಲ್ ಹಯಾತಿ ದಿನೇ ದಿನೇ ಮತಷ್ಟು ಗ್ಲಾಮರ್‍ ಲುಕ್ಸ್ ಕೊಡುತ್ತಿದ್ದಾರೆ. ಸೌಂದರ್ಯ ಪ್ರದರ್ಶನದಲ್ಲಿ ತೆರೆದ ಪುಸ್ತಕದಂತೆ ತಮ್ಮ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿರುತ್ತಾರೆ.  ಸಿನಿರಂಗದಲ್ಲಿ ಆಗಾಗ ಬಾಡಿ ಶೇಮೀಂಗ್ ಬಗ್ಗೆ ನಟಿಯರು ಮಾತನಾಡುತ್ತಿರುತ್ತಾರೆ. ಡಿಂಪುಲ್ ಹಯಾತಿ ಸಹ ಇದೇ ರೀತಿಯಲ್ಲಿ ಬಾಡಿ ಶೇಮಿಂಗ್ ಎದುರಿಸಿದ್ದರಂತೆ. ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ನಟಿಯರು ಕೆರಿಯರ್‍ ಆರಂಭದಲ್ಲಿ ಅನೇಕ ಅವಮಾನಗಳನ್ನು ಎದುರಿಸಿರುತ್ತಾರೆ. ಸೌಂದರ್ಯ, ನೃತ್ಯ, ಅಭಿನಯ ಎಲ್ಲವೂ ಇದ್ದರೂ ಸಹ ಡಿಂಪುಲ್ ಹಯಾತಿ ಸಕ್ಸಸ್ ಕಾಣಲು ತುಂಬಾನೆ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಕೊನೆಯದಾಗಿ ಆಕೆ ನಟಿಸಿದ ಖಿಲಾಡಿ, ರಾಮಬಾಣಂ ಸಿನೆಮಾಗಳು ಸಹ ಡಿಜಾಸ್ಟರ್‍ ಆಗಿದೆ. ನಟಿಯಾಗಿ ಕ್ರೇಜ್ ಪಡೆದುಕೊಳ್ಳಲು ಡಿಂಪುಲ್ ಹಯಾತಿ ತುಂಬಾನೆ ಕಷ್ಟಗಳನ್ನು ಪಟ್ಟಿದ್ದಾರೆ. ಓದುವ ಸಮಯದಲ್ಲಿ ಆಕೆಗೆ ಸಿನೆಮಾಗಳ ಮೇಲೆ ತುಂಬಾ ಹುಚ್ಚಿರುವ ಕಾರಣದಿಂದ ಆಕೆ ಓದಿನ ಮೇಲೆ ಅಷ್ಟೊಂದು ಇಂಟ್ರಸ್ಟ್ ಕೊಟ್ಟಿರಲಿಲ್ಲವಂತೆ. ಆಕೆಗೆ ಸಿನೆಮಾಗಳ ಮೇಲಿರುವ ಆಸಕ್ತಿಯನ್ನು ಗಮನಿಸಿದ ಮನೆಯವರು ಆಕೆಗೆ ಪ್ರೋತ್ಸಾಹ ಸಹ ನೀಡಿದ್ದರಂತೆ. ಬಳಿಕ ಆಕೆ ಗಲ್ಫ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆದರೂ ಸಹ ಆಕೆಗೆ ಒಳ್ಳೆಯ ಕ್ರೇಜ್ ದೊರೆಯಲಿಲ್ಲ.

ಬಳಿಕ ಓರ್ವ ದೊಡ್ಡ ನಿರ್ದೇಶಕರ ಸಿನೆಮಾದಲ್ಲಿ ನಟಿಸುವ ಅವಕಾಶ ಬಂದಿತ್ತು. ನನ್ನ ಭಾಗದ ಶೇ.90 ರಷ್ಟು ಶೂಟಿಂಗ್ ಸಹ ಮುಕ್ತಾಯಗೊಂಡಿತ್ತು. ಬಳಿಕ ಆ ಸಿನೆಮಾದಿಂದ ನನ್ನನ್ನು ತೆಗೆದು ಹಾಕಿದರು. ಆ ಸಿನೆಮಾದಲ್ಲಿ ನಟಿಸುವ ಸಮಯದಲ್ಲೇ ಮೂರು ದೊಡ್ಡ ಸಿನೆಮಾಗಳ ಚಾನ್ಸ್ ಗಳು ಬಂದಿದ್ದು, ಅವು ಸಹ ಕೈ ಜಾರಿತ್ತು.  ಅದರಲ್ಲಿ ಗದ್ದಲಕೊಂಡ ಗಣೇಶ್ ಎಂಬ ಸಿನೆಮಾ ಸಹ ಒಂದು. ಈ ಸಿನೆಮಾದಲ್ಲಿ ನಾನೆ ಲೀಡ್ ಹಿರೋಯಿನ್ ಆಗಿದ್ದೆ. ಕೆಲವೊಂದು ಕಾರಣಗಳಿಂದ ಆ ಸಿನೆಮಾದಿಂದ ಹೊರಬರಬೇಕಾಯ್ತು. ಮೊದಲು ನನ್ನನ್ನು ಸಿನೆಮಾದಿಂದ ತೆಗೆದು ಹಾಕಿದವರು. ನನಗೆ ಡ್ಯಾನ್ಸ್ ಬರೊಲ್ಲ ಎಂದು ಹಿಯಾಳಿಸಲು ಮುಂದಾದರು. ಬಳಿಕ ಹರೀಶ್ ಶಂಕರ್‍ ರವರು ಪೋನ್ ಮಾಡಿ ಹಿರೋಯಿನ್ ರೋಲ್ ಕಳೆದುಕೊಂಡು, ಈ ಸಿನೆಮಾದಲ್ಲಿ ಒಂದು ಸ್ಪೇಷಲ್ ಸಾಂಗ್ ಇದೆ ಮಾಡ್ತೀಯಾ ಎಂದು ಹೇಳಿದರು. ಅದಕ್ಕೆ ನಮ್ಮ ಮನೆಯವರು ಬೇಡ ಎಂದು ಹೇಳಿದ್ದರು. ಹಿರೋಯಿನ್ ಆಗಿ ಟ್ರೈ ಮಾಡುತ್ತಿರುವಾಗ ಸ್ಪೇಷಲ್ ಸಾಂಗ್ ಮಾಡಿದರೇ ಮುಂದೆ ಕಷ್ಟ ಆಗುತ್ತೆ ಎಂದು ಹೇಳಿದರು.

ನನ್ನ ಡ್ಯಾನ್ಸ್ ಏನು ಎಂಬುದನ್ನು ನಿರೂಪಿಸಲು ಗದ್ದಲಕೊಂಡ ಗಣೇಶ್ ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ಮಾಡಿದ್ದೆ. ಆ ಸಾಂಗ್ ಒಳ್ಳೆಯ ಸಕ್ಸಸ್ ಕಂಡಿತ್ತು. ಅದೇ ರೀತಿ ನಾನು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಸಮಯದಲ್ಲಿ ನನ್ನ ಕಲರ್‍ ಬ್ಲಾಕ್ ಇದೆ ಎಂದು ನಿರುತ್ಸಾಹ ಮಾಡಿದ ಪ್ರಯತ್ನಗಳನ್ನು ಸಹ ಮಾಡಿದ್ದರು. ಆದರೆ ಇದೀಗ ನನ್ನ ಕಲರ್‍ ಒಪ್ಪಿಕೊಳ್ಳುತ್ತಿದ್ದಾರೆ. ನನ್ನ ಅಭಿಮಾನಿಗಳು ಸಹ ನನ್ನನ್ನು ಖುಷಿಯಿಂದ ಡಾರ್ಕ್ ಚಾಕ್ಲೇಟ್ ಎಂದು ಕರೆಯುತ್ತಾರೆ. ಅದು ನನಗೆ ತುಂಬಾ ಖುಷಿ ಎಂದು ಡಿಂಪುಲ್ ಹೇಳಿದ್ದಾರೆ. ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top