10 ವರ್ಷಗಳ ಬಳಿಕ ಬಣ್ಣದ ಲೋಕಕ್ಕೆ ರೀ ಎಂಟ್ರಿ ಕೊಟ್ಟ ಸ್ಟಾರ್ ನಟಿ, ವೆಬ್ ಸಿರೀಸ್ ಮೂಲಕ ಎಂಟ್ರಿ ಕೊಟ್ಟ ಸೋನಾಲಿ ಬೇಂದ್ರೆ….!

Follow Us :

ಬಾಲಿವುಡ್ ನ ಖ್ಯಾತ ನಟಿ ಸೋನಾಲಿ ಬಿಂದ್ರೆ 90 ರ ದಶಕದಲ್ಲಿ ಮೋಸ್ಟ್ ವಾಟೆಂಡ್ ನಟಿಯಾಗಿದ್ದರು. ಆಗ್ ಎಂಬ ಸಿನೆಮಾ ಮೂಲಕ ಬಾಲಿವುಡ್ ನ ಸಿನಿರಂಗಕ್ಕೆ ಕಾಲಿಟ್ಟ ಈಕೆ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ್ದರು. ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಅನೇಕ ಸಿನೆಮಾಗಳಲ್ಲೂ ಸಹ ಬಣ್ಣ ಹಚ್ಚಿದ ಈಕೆ ಒಂದು ಕಾಲದಲ್ಲಿ ಬಹುಬೇಡಿಕೆ ನಟಿಯಾಗಿದ್ದರು. ಈಕೆಯ ಸಮಕಾಲಿನರಾದ ಐಶ್ವರ್ಯ ರೈ, ಮಾಧುರಿ, ಕಾಜಲ್, ರಾಣಿ ಮುಖರ್ಜಿಯವರು ದೊಡ್ಡ ಹೆಸರು ಮಾಡಿದರು. ಆದರೆ ಸೊನಾಲಿ ಬೇಂದ್ರೆ ಮಾತ್ರ ಸ್ಟಾರ್‍ ನಟಿಯಾಗಿ ಉಳಿಯಲಿಲ್ಲ. ತೆಲುಗಿನಲ್ಲೂ ಸಹ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು.

ಪ್ರಿನ್ಸ್ ಮಹೇಶ್ ಬಾಬು ರವರ ಮುರಾರಿ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಸೊನಾಲಿ ಬೇಂದ್ರೆ ತೆಲುಗಿನಲ್ಲಿ ಎಲ್ಲಾ ಸ್ಟಾರ್‍ ಗಳೊಂದಿಗೆ ನಟಿಸಿದರು. ಮನ್ಮಥುಡು, ಇಂದ್ರ, ಖಡ್ಗಂ, ಶಂಕರ್‍ ದಾದಾ ಎಂಬಿಬಿಎಸ್ ಮೊದಲಾದ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದರು. ಆದರೆ ಮದುವೆಯಾದ ಬಳಿಕ ಆಕೆ ಸಿನೆಮಾಗಳಿಂದ ದೂರವಾದರು. ಜೊತೆಗೆ 2018ರಲ್ಲಿ ಆಕೆ ಕ್ಯಾನ್ಸರ್‍ ಕಾರಣದಿಂದ ಆಕೆ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದುಕೊಂಡು ಕ್ಯಾನ್ಸರ್‍ ಗೆದ್ದು ಬಂದರು. ಕೊನೆಯದಾಗಿ ಆಕೆ 2013 ರಲ್ಲಿ ತೆಲುಗು ಸಿನೆಮಾದಲ್ಲಿ ನಟಿಸಿದ ಬಳಿಕ ಬಣ್ಣದ ಲೋಕಕ್ಕೆ ದೂರವಾದರು. ಸುಮಾರು 10 ವರ್ಷಗಳ ಬಳಿಕ ಸೋನಾಲಿ ಬೇಂದ್ರೆ ಮತ್ತೊಮ್ಮೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆಲವೊಂದು ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಇದೀಗ ಆಕೆ ವೆಬ್ ಸಿರೀಸ್ ಮೂಲಕ ಬಣ್ಣದ ಲೋಕಕ್ಕೆ ರೀ ಎಂಟ್ರಿ ಕೊಡಲಿದ್ದಾರೆ. ದಿ ಬ್ರೋಕನ್ ನ್ಯೂಸ್ ಸೀಸನ್ 2 ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ. ಈ ವೆಬ್ ಸಿರೀಸ್ ಜಿ5 ಚಾನಲ್ ನಲ್ಲಿ ಮೇ.3 ರಿಂದ ಸ್ಟ್ರೀಮಿಂಗ್ ಆಗಲಿದೆ. ಈ ವೆಬ್ ಸಿರೀಸ್ ನಿಮ್ಮಿತ್ತಾ ಸೋನಾಲಿ ಬೇದ್ರೆ ಸುಮಾರು ದಿನಗಳ ಬಳಿಕ ಕೆಲವೊಂದು ಸಂದರ್ಶನಗಳಲ್ಲೂ ಭಾಗಿಯಾಗುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಪೊಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ತನ್ನ ಕುಟುಂಬ ನಿರ್ವಹಣೆಯ ನಿಮಿತ್ತ ತಮ್ಮ ತಂದೆ-ತಾಯಿಗೆ ಇಷ್ಟವಿಲ್ಲದೇ ಇದ್ದರೂ ಆಕೆ ಬಣ್ಣದ ಲೋಕದಲ್ಲಿ ಎಂಟ್ರಿ ಕೊಟ್ಟರು. 90ರ ದಶಕದಲ್ಲಿ ಆಕೆ ಟಾಪ್ ನಟಿಯಾಗಿದ್ದರು.

ಇದೀಗ ಸೋನಾಲಿ ಬೇಂದ್ರೆ ಮತ್ತೊಮ್ಮೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದಕ್ಕೆ ಕಾರಣವನ್ನು ಸಹ ಆಕೆ ಹೇಳಿದ್ದಾರೆ. ಈಗ ನನಗೆ ಹಣದ ಅವಶ್ಯಕತೆ ತುಂಬಾನೆ ಇದೆ. ನಾನು ಕಟ್ಟಬೇಕಾದ ಬಿಲ್ ಗಳು ತುಂಬಾನೆ ಇದೆ. ಅದಕ್ಕಾಗಿ ನಾನು ಕೆಲಸ ಮಾಡಬೇಕಾಗಿದೆ. ನನ್ನ ಕುಟುಂಬ ಸಹ ತುಂಬಾ ಕಷ್ಟದಲ್ಲಿದೆ ಎಂದು ಆಕೆ ಹೇಳಿದ್ದಾರೆ. ಇನ್ನೂ ಸುಮಾರು ವರ್ಷಗಳ ಬಳಿಕ ಆಕೆ ಸಿನಿರಂಗಕ್ಕೆ ರೀ ಎಂಟ್ರಿ ಕೊಡುತ್ತಿದ್ದು, ಆಕೆಯ ಅಭಿಮಾನಿಗಳು ಸಹ ಪುಲ್ ಖುಷಿಯಿಂದ ಆಕೆಯನ್ನು ಸ್ವಾಗತಿಸುತ್ತಿದ್ದಾರೆ.