Film News

ನನ್ನ ಕುಟುಂಬ ದೂರ ಇಟ್ಟರು, ಸೂಸೈಡ್ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ ಎಂದ ಯಮುನಾ, ಟಾಕ್ ಶೋ ನಲ್ಲಿ ಶಾಕಿಂಗ್ ಕಾಮೆಂಟ್ಸ್ ಮಾಡಿದ ನಟಿ…..!

ತೆಲುಗು ಸಿನಿರಂಗದ ಸೀನಿಯರ್‍ ನಟಿ ಯಮುನಾ ಮೊದಲಿಗೆ ನಟಿಯಾಗಿ ಕೆರಿಯರ್‍ ಆರಂಭಿಸಿ, ಬಳಿಕ ಸೀರಿಯಲ್ ಗಳ ಮೂಲಕ ತುಂಬಾನೆ ಖ್ಯಾತಿ ಪಡೆದುಕೊಂಡರು. ವಿಧಿ, ಅನ್ವೇಷಿತಾ, ಮೌನ ಪೋರಾಟಂ, ಅಮೃತಂ ಸೇರಿದಂತೆ ಅನೇಕ ಸೀರಿಯಲ್ ಗಳ ಮೂಲಕ ಅಪಾರ ಸಂಖ್ಯೆಯ ಕಿರುತೆರೆ ಅಭಿಮಾನಿಗಳನ್ನು ಪಡೆದುಕೊಂಡರು. ಸ್ಟಾರ್‍ ಆಂಕರ್‍ ಸುಮಾ ಹೋಸ್ಟ್ ಮಾಡುವ ಸುಮಾ ಅಡ್ಡಾ ಎಂಬ ಶೋ ನಲ್ಲಿ ಆಕೆ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ನಟಿ ಯಮುನಾ ಅನೇಕ ಸಿನೆಮಾಗಳ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡರು. ನಟಿಯಿಂದ ಕ್ಯಾರೆಕ್ಟರ್‍ ಆರ್ಟಿಸ್ಟ್ ವರೆಗೂ ಆಕೆ ನಟಿಸಿದ್ದರು. ಬಳಿಕ ಸೀರಿಯಲ್ ಗಳಲ್ಲಿ ನಟಿಸಿ ಪಾಪ್ಯುಲರ್‍ ಆದರು. ಆದರೆ ಸುಮಾರು ದಿನಗಳ ಹಿಂದೆ ಯಮುನಾ ದೊಡ್ಡ ವಿವಾದದಲ್ಲಿ ಸಿಲುಕಿಕೊಂಡರು. ನಟಿ ಯಮುನಾ ವ್ಯಭಿಚಾರ ಕೇಸ್ ಒಂದರಲ್ಲಿ ಸಿಲುಕಿಕೊಂಡಿದ್ದರು. ಆ ಸಮಯದಲ್ಲಿ ಈ ಸುದ್ದಿ ತುಂಬಾನೆ ವೈರಲ್ ಆಗಿತ್ತು. ಬೆಂಗಳೂರಿನ ಹೋಟೆಲ್ ಒಂದರಲ್ಲಿ ವ್ಯಭಿಚಾರ ಮಾಡುತ್ತಾ ಸಿಲುಕಿದ್ದರು ಎಂದು ಸುದ್ದಿಗಳು ಕೇಳಿಬಂದವು. ಬಳಿಕ ಆಕೆ ಕೋರ್ಟ್ ಮೊರೆ ಹೋಗಿ ತನಗೂ ಆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕ್ಲೀನ್ ಚೀಟ್ ಸಹ ಪಡೆದುಕೊಂಡರು. ಆದರೆ ಅದಕ್ಕೆ ಸಂಬಂಧಿಸಿದ ಸುದ್ದಿಗಳು ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇತ್ತು. ಸೋಷಿಯಲ್ ಮಿಡಿಯಾ, ಯೂಟ್ಯೂಬ್ ನಲ್ಲಿ ಈ ವಿವಾದಕ್ಕೆ ಸಂಬಂಧಿಸಿದ ಸುದ್ದಿಯನ್ನು ಪ್ರಸಾರ ಮಾಡಿದ್ದರು. ಇದರಿಂದ ಆಕೆ ತುಂಬಾನೆ ಮಾನಸಿಕ ಖಿನ್ನತೆಗೆ ಗುರಿಯಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರಂತೆ. ಈ ವಿಚಾರಗಳನ್ನು ಆಕೆ ಸುಮಾ ಅಡ್ಡಾ ಶೋನಲ್ಲಿ ಹೇಳಿಕೊಂಡಿದ್ದಾರೆ.

ಸುಮಾ ಅಡ್ಡಾ ಎಂಬ ಟಾಕ್ ಶೋ ನಲ್ಲಿ ಭಾಗವಹಿಸಿದ್ದ ಯಮುನಾ ಕೆಲವೊಂದು ಶಾಕಿಂಗ್ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಯಮುನಾ ಸೋಷಿಯಲ್ ಮಿಡಿಯಾದಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಬರೆದ ಸುದ್ದಿಯ ಕಾರಣದಿಂದ ನನ್ನ ಕುಟುಂಬಸ್ಥರು ನನ್ನನ್ನು ದೂರ ಇಟ್ಟರು. ಇದರ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಬಂದಂತಹ ಸುಳ್ಳು ಸುದ್ದಿಯ ಕಾರಣ ನಾನು ಮಾನಸಿಕ ಖಿನ್ನತೆಗೆ ಗುರಿಯಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದುಕೊಂಡಿದ್ದೆ ಎಂದು ಹೇಳಿದ್ದಾರೆ. ಇನ್ನೂ ಯಮುನಾ ನೀಡಿದ ಈ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಶೋ ನಲ್ಲಿದ್ದಂತಹ ಆಂಕರ್‍ ಸುಮಾ ಜೊತೆಗೆ ಇತರೆ ಕಲಾವಿದರು ಹಾಗೂ ಪ್ರೇಕ್ಷಕರು ಸಹ ಶಾಕ್ ಆಗಿದ್ದಾರೆ.

ಸದ್ಯ ಸುಮಾ ಅಡ್ಡಾ ಕಾರ್ಯಕ್ರಮದ ಈ ಎಪಿಸೋಡ್ ಪ್ರೊಮೋ ಸಖತ್ ವೈರಲ್ ಆಗುತ್ತಿದೆ. ಪುಲ್ ಶೋ ನಲ್ಲಿ ಯಮುನಾ ಮತಷ್ಟು ವಿಚಾರಗಳನ್ನು ಹಂಚಿಕೊಂಡಿರುತ್ತಾರೆ ಎನ್ನಲಾಗುತ್ತಿದೆ. ಸದ್ಯ ಯಮುನಾ ಸಿರೀಯಲ್ ಗಳಲ್ಲಿ ಪುಲ್ ಬ್ಯುಸಿಯಾಗಿದ್ದು, ಕೆರಿಯರ್‍ ಸಾಗಿಸುತ್ತಿದ್ದಾರೆ.

Most Popular

To Top